ಸಚಿವ ಸ್ಥಾನದ ಆಕಾಂಕ್ಷೆ ಆದಷ್ಟು ಬೇಗ ಈಡೇರಲಿ : ಮೈಸೂರಲ್ಲಿ ರಮೇಶ್ ಗೆ ಸತೀಶ್ ಟಾಂಗ್.

 

ಮೈಸೂರು, ಜ.19, 2020 : (www.justkannada.in news ) ರಮೇಶ್ ಜಾರಕಿಹೋಳಿ ಸೇರಿದಂತೆ ಸಚಿವ ಸ್ಥಾನದ ಆಕಾಂಕ್ಷಿಗಳಿಗೆ ಸತೀಶ್ ಜಾರಕಿಹೋಳಿ ಟಾಂಗ್. ಈ ಪರಿಸ್ಥಿತಿ ಬರುತ್ತದೆ ಎಂದು ಮೊದಲೇ ಹೇಳಿದ್ದೆ. ಕೆಲವರು ಒಂದು ವರ್ಷದಿಂದ ಸಚಿವರಾಗಲು ಕಾಯುತ್ತಿದ್ದಾರೆ. ಕುಮಾರಸ್ವಾಮಿ ಸರ್ಕಾರ ಬಂದ ದಿನದಿಂದ ಅದನ್ನು ಬೀಳಿಸಿ ಸಚಿವರಾಗಲು ಕಾಯುತ್ತಿದ್ದಾರೆ.

ಸಿಎಂ ಯಡಿಯೂರಪ್ಪ ವಿದೇಶದಿಂದ ಬಂದ ಕೂಡಲೇ ಅವರ ಆಸೆ ಈಡೇರಿಸಲಿ. ಅವರು ಬೇಗ ಸಚಿವರಾದರೆ ಒಳ್ಳೆಯದು ಇದನ್ನೇ ನಾನು ಹಾರೈಸುತ್ತೇನೆ. ಮೈಸೂರಿನಲ್ಲಿ ಮಾಜಿ ಸಚಿವ ಸತೀಶ್ ಜಾರಕಿಹೋಳಿ ಹೇಳಿಕೆ

ಕೆಪಿಸಿಸಿ ಸ್ಥಾನಗಳಿಗೆ ನೇಮಕಾತಿ ವಿಚಾರ‌. ನಾಲ್ಕು ಕಾರ್ಯಾಧ್ಯಕ್ಷ ಸ್ಥಾನದ ಸೃಷ್ಟಿ ಬಗ್ಗೆ ಚಿಂತನೆ ನಡೆದಿದೆ.
ಮೈಸೂರಿನಲ್ಲಿ ಮಾಜಿ ಸಚಿವ ಸತೀಶ್ ಜಾರಕಿಹೋಳಿ ಹೇಳಿಕೆ. ಜಾತಿ ಮತ್ತು ಪ್ರದೇಶವಾರು ಸಮತೋಲನ ಮಾಡಲು ಈ ಚಿಂತನೆ. ಇನ್ನು ಒಂದು ವಾರದಲ್ಲಿ ಎಲ್ಲವೂ ಸರಿಯಾಗಲಿದೆ.

ದೆಹಲಿ ಚುನಾವಣೆ ಹಿನ್ನೆಲೆಯಲ್ಲಿ ವಿಳಂಬ ಅಷ್ಟೇ. ಕಾಂಗ್ರೆಸ್‌ನಲ್ಲಿ ಮೂಲ ವಲಸಿಗ ಪ್ರಶ್ನೆ ಇಲ್ಲ. ನಾವು ಪಕ್ಷ ಸೇರಿ 10 ವರ್ಷವಾಗಿದೆ‌. ಈಗ ಆ ವಿಚಾರವೂ ಚರ್ಚೆಗೆ ಅನಗತ್ಯ. ವಿಪಕ್ಷ ನಾಯಕ, ಶಾಸಕಾಂಗ ಪಕ್ಷದ ಅಧ್ಯಕ್ಷ ಒಂದೇ ಇರಲಿ ಎಂದು ಹೇಳಿದ್ದೇನೆ. ಮೈಸೂರಿನಲ್ಲಿ ಮಾಜಿ ಸಚಿವ ಸತೀಶ್ ಜಾರಕಿಹೋಳಿ ಹೇಳಿಕೆ.

key words : mysore-sathish-ramesh-jarokeholi-politics