Friday, July 31, 2026

BDA Apartments

Home Front Page ಸ್ವಿಜರ್ಲೆಂಡ್ ಗೆ ಸಿಎಮ್ : ಇಂದಿನಿಂದ 6 ದಿನಗಳ ಕಾಲ ಬಿ.ಎಸ್.ಯಡಿಯೂರಪ್ಪ ವಿದೇಶ ಪ್ರವಾಸ.

ಸ್ವಿಜರ್ಲೆಂಡ್ ಗೆ ಸಿಎಮ್ : ಇಂದಿನಿಂದ 6 ದಿನಗಳ ಕಾಲ ಬಿ.ಎಸ್.ಯಡಿಯೂರಪ್ಪ ವಿದೇಶ ಪ್ರವಾಸ.

 

ಬೆಂಗಳೂರು, ಜ.19, 2020 (www.justkannada.in news ) : ಸ್ವಿಜರ್ಲೆಂಡ್ ನಲ್ಲಿ ನಡೆಯುವ ವಿಶ್ವ ಅರ್ಥಿಕ ಒಕ್ಕೂಟದ ಶೃಂಗಸಭೆಯಲ್ಲಿ ಭಾಗವಿಸುವ ಸಲುವಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇಂದು ವಿದೇಶಕ್ಕೆ ತೆರಳಿದರು.

ಕರ್ನಾಟಕದಲ್ಲಿ ಹೊಡಿಕೆ ಸಂಬಂಧ ಪೂರ್ವಭಾವಿ ಸಮಾವೇಶ. ಸ್ವಿಜರ್ಲೆಂಡ್ ಉದ್ಯಮಿಗಳ ಜೊತೆ ಸಭೆಗಳಲ್ಲಿ ಸಿಎಂ ಭಾಗಿ. ಶೃಂಗಸಭೆ ಸಮಾವೇಶದಲ್ಲಿ ಕರ್ನಾಟಕದ ಮಳಿಗಗೆ ಚಾಲನೆ ನೀಡಲಿರುವ ಸಿಎಂ. ಸಿಎಂಗೆ ಸಚಿವ ಜಗದೀಶ್ ಶೆಟ್ಟರ್ ಹಾಗೂ ವಿವಿಧ ಇಲಾಣೆ ಅಧಿಕಾರಿಗಳು ಸಾಥ್ ನೀಡಲಿದ್ದಾರೆ.

ಇಂದು, ನಾಳೆ ಮಾಜಿ ಸಿಎಂ ಸಿದ್ದರಾಮಯ್ಯ ಜಿಲ್ಲಾ ಪ್ರವಾಸ.

ಇಂದು ಕೆ.ಆರ್.ನಗರ ತಾಲೂಕಿನ ದೊಡ್ಡಕೊಪ್ಪಲಿನ ಸಂಗೊಳ್ಳಿ ರಾಯಣ್ಣ ಪ್ರತಿಮೆ ಅನಾವರಣ ಕಾರ್ಯಕ್ರಮದಲ್ಲಿ ಭಾಗಿ. ಬಳಿಕ ನರಸೀಪುರದಲ್ಲಿ ನಡೆಯುವ ಕನಕದಾಸರ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಲಿರೋ ಸಿದ್ದು. ನಂತರ ಮೈಸೂರಿನ ನಿವಾಸದಲ್ಲಿ ವಾಸ್ತವ್ಯ.
ನಾಳೆ ಹುಣಸೂರು ವಿಧಾನಸಭಾ ಕ್ಷೇತ್ರದಲ್ಲಿ ಕೃತಜ್ಞತಾ ಸಮಾರಂಭ. ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲಿಸಿದ ಮತದಾರರಿಗೆ ಕೃತಜ್ಞತೆ ಸಲ್ಲಿಸಲಿರುವ ಮಾಜಿ ಸಿಎಂ. ಮೈಸೂರಿನ ಖಾಸಗಿ ಹೋಟೆಲ್ನಲ್ಲಿ ನಡೆಯುವ ಕೃತಜ್ಞತಾ ಸಮಾರಂಭ.

key words : bsy-yadiyurappa-switzerland-tour-karnataka