Friday, August 14, 2026

BDA Apartments

Home Front Page ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಕಂಚಿನ ಪ್ರತಿಮೆ ಅನಾವರಣಗೊಳಿಸಿದ ಮೈಲಾಕ್ ಅಧ್ಯಕ್ಷ ರಘು ಕೌಟಿಲ್ಯ.

ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಕಂಚಿನ ಪ್ರತಿಮೆ ಅನಾವರಣಗೊಳಿಸಿದ ಮೈಲಾಕ್ ಅಧ್ಯಕ್ಷ ರಘು ಕೌಟಿಲ್ಯ.

ಮೈಸೂರು,ಮಾರ್ಚ್,25,2023(www.justkannada.in):  ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಕಂಚಿನ ಪ್ರತಿಮೆಯನ್ನ ಮೈಸೂರು ಪೇಯಿಂಟ್ಸ್ ಮತ್ತು ವಾರ್ನಿಷ್ ಅಧ್ಯಕ್ಷ ರಘು ಕೌಟಿಲ್ಯ ಅನಾವರಣಗೊಳಿಸಿದರು.

ಮೈಸೂರು ಪೇಯಿಂಟ್ಸ್ ಮತ್ತು ವಾರ್ನಿಷ್ ಲಿಮಿಟೆಡ್ ನ ಅಮೃತ ಮಹೋತ್ಸವ ಹಿನ್ನಲೆ ನಡೆದ ಕಾರ್ಯಕ್ರಮದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಕಂಚಿನ ಪ್ರತಿಮೆಯನ್ನ ರಘು ಕೌಟಿಲ್ಯ ಉದ್ಘಾಟನೆ ಮಾಡಿದರು.

ನಂತರ ಮಾತನಾಡಿದ ಅವರು, ಈ ಹಿಂದೆ ಇದ್ದಂತಹ ಪ್ರತಿಮೆ ಹಳೆಯದಾಗಿತ್ತು. ಹಾಗಾಗಿ ಇಂದು ನೂತನ ಕಂಚಿನ ಪ್ರತಿಮೆ ಅನಾವರಣ ಮಾಡಿದ್ದೇವೆ. ಮೈಸೂರು ಮಹಾರಾಜರ ಕುಟುಂಬದ ಮೇಲೆ ನಮಗೆ ಅಪಾರವಾದ ಗೌರವವಿದೆ. ಮೈಸೂರು ಮಹಾರಾಜರು ನಿರ್ಮಿಸಿರುವ ಈ ಸಂಸ್ಥೆಯನ್ನ ಉಳಿಸಬೇಕಿದೆ ಎಂದು ಹೇಳಿದರು.

Key words: mysore- Raghu Kautilya – statue – Nalvadi Krishnaraja Wodeyar.