Thursday, August 13, 2026

BDA Apartments

Home Front Page ಪತ್ರಿಕಾದಿನಾಚರಣೆ : ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ವತಿಯಿಂದ ಜುಲೈ 1 ರಂದು ಪತ್ರಕರ್ತರಿಗೆ ಸನ್ಮಾನ.

ಪತ್ರಿಕಾದಿನಾಚರಣೆ : ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ವತಿಯಿಂದ ಜುಲೈ 1 ರಂದು ಪತ್ರಕರ್ತರಿಗೆ ಸನ್ಮಾನ.

 

ಮೈಸೂರು, ಜೂ.27, 2019 : (www.justkannada.in news) : ಪತ್ರಿಕಾ ದಿನಾಚರಣೆ ಅಂಗವಾಗಿ ಮೈಸೂರು ಜಿಲ್ಲಾ ಪತ್ರಕರ್ತರ ಸಂಘ ಮಾಧ್ಯಮಕ್ಷೇತ್ರದಲ್ಲಿ ಗಣನೀಯ ಸೇವೆ ಮಾಡಿದ ವಿವಿಧ ಮಾಧ್ಯಮಗಳ ಪ್ರತಿನಿಧಿಗಳನ್ನು ಆಯ್ಕೆ ಮಾಡಿದ್ದು ಜು. 1 ರಂದು ಅಭಿನಂಧನ ಸಮಾರಂಭ ಆಯೋಜಿಸಿದೆ.

ಮೈಸೂರು ವಿವಿ ವಿಜ್ಞಾನ ಭವನದಲ್ಲಿ ಅಂದು ಬೆಳಗ್ಗೆ 10.30ಕ್ಕೆ ಆಯೋಜಿಸಿರುವ ಸಮಾರಂಭವನ್ನು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಉದ್ಘಾಟಿಸುವರು. ಮೈಸೂರು ವಿವಿ ಸೀನಿಯರ್ ಪ್ರೊಫೆಸರ್ ಫೆಲೊ ಡಾ. ಉಷಾರಾಣಿ ಪ್ರಧಾನ ಭಾಷಣ ಮಾಡುವರು. ಸಚಿವ ಸಾ.ರ.ಮಹೇಶ್ ಪ್ರಶಸ್ತಿ ಪ್ರದಾನ ಮಾಡುವರು. ಮುಖ್ಯ ಅತಿಥಿಗಳಾಗಿ ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷ ಡಾ.ಪದ್ಮರಾಜ ದಂಡಾವತಿ, ಶಾಸಕ ಎಲ್.ನಾಗೇಂದ್ರ ಭಾಗವಹಿಸುವರು. ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಸಿ.ಕೆ.ಮಹೇಂದ್ರ ಸಮಾರಂಭದ ಅಧ್ಯಕ್ಷತೆ ವಹಿಸುವರು.

ಅಭಿನಂಧಿತರು :

ಸಂಯುಕ್ತ ಕರ್ನಾಟಕ ಪತ್ರಿಕೆ ಮುಖ್ಯ ಉಪ ಸಂಪಾದಕ ಎಂ.ಟಿ.ಮಹಾದೇವ್ ( ಜೀವಮಾನ ಸಾಧನೆ ), ಯಶ್ ಟೆಕ್ ಟಿವಿ ಪ್ರಧಾನ ಸಂಪಾದಕಿ ಬಿ.ವೈ.ಸಾಹಿತ್ಯ (ವರ್ಷದ ಸಾಧನೆ, ಸಂಪಾದಕೀಯ ವಿಭಾಗ ), ಆಂದೋಲನ ದಿನಪತ್ರಿಕೆ ತಿ.ನರಸೀಪುರ ವರದಿಗಾರ ಎಂ.ನಾರಾಯಣ (ವರ್ಷದ ಗ್ರಾಮಾಂತರ ಪತ್ರಕರ್ತ), ಪ್ರಜಾವಾಣಿ-ಡೆಕ್ಕನ್ ಹೆರಾಲ್ಡ್ ಛಾಯಾಗ್ರಾಹಕಿ ಬಿ.ಆರ್.ಸವಿತಾ ( ವರ್ಷದ ಛಾಯಾಗ್ರಾಹಕರು), ದೃಶ್ಯ ಮಾಧ್ಯಮ ಪೈಕಿ, ಪ್ರಜಾ ಟಿವಿಯ ಸೋಮಶೇಖರ ಚಿಕ್ಕಮರಳಿ ( ವರ್ಷದ ಹಿರಿಯ ವರದಿಗಾರ), ದೂರದರ್ಶನದ ರಾಮು ( ವರ್ಷದ ಹಿರಿಯ ಛಾಯಾಗ್ರಾಹಕ ).

ಪ್ರಶಸ್ತಿ ಪುರಸ್ಕೃತರು :

ವಿಜಯವಾಣಿ ಉಪಸಂಪಾದಕ ಎಚ್.ಕೆ.ಗುರುಪ್ರಸಾದ್ ತುಂಬಸೋಗೆ (ವರ್ಷದ ವರದಿಗಾರ), ಟೈಮ್ಸ್ ಆಫ್ ಇಂಡಿಯಾದ ಎಸ್. ಆರ್.ಮಧುಸೂಧನ್ ( ವರ್ಷದ ಛಾಯಾಗ್ರಾಹಕ), ದೃಶ್ಯ ಮಾಧ್ಯಮದ ಪೈಕಿ ಪಬ್ಲಿಕ್ ಟಿವಿಯ ಕೆ.ಪಿ.ನಾಗರಾಜ್ (ಉತ್ತಮ ವರದಿಗಾರಿಕೆ) ಹಾಗೂ ಕ್ಯಾಮೆರಾಮನ್ ಕಾರ್ತಿಕ್ (ಉತ್ತಮ ಛಾಯಾಗ್ರಾಹಕ) .

key words : mysore-press-club-feliciation-media-press.day-2019