ಮೈಸೂರಿನಲ್ಲಿ  ಕೋವಿಡ್ ವಾರ್ ಗೆ ಕೈಜೋಡಿಸಿದ ಖಾಸಗಿ ಆಸ್ಪತ್ರೆಗಳು: ಸೆಂಟ್ ಜೋಸೆಫ್ ಆಸ್ಪತ್ರೆಗೆ ಸಂಸದ ಪ್ರತಾಪ್ ಸಿಂಹ ಭೇಟಿ ಪರಿಶೀಲನೆ…

ಮೈಸೂರು,ಜು,20,2020(www.justkannada.in):  ಮೈಸೂರಿನಲ್ಲಿ ಹೆಚ್ಚುತ್ತಿರುವ ಮಹಾಮಾರಿ ಕೊರೋನಾ ನಿಯಂತ್ರಣಕ್ಕಾಗಿ ಜಿಲ್ಲಾಡಳಿತ ಶತಪ್ರಯತ್ನ ನಡೆಸುತ್ತಿದ್ದು ಈ ನಡುವೆ  ಕೋವಿಡ್ ವಾರ್ ಗೆ ಖಾಸಗಿ ಆಸ್ಪತ್ರೆಗಳು ಕೈಜೋಡಿಸಿವೆ.jk-logo-justkannada-logo

ಮಹಾನ್ ಯೋಜನೆ ಅಡಿ  ಕೋವಿಡ್ ಟ್ರೀಟ್ ಮೆಂಟ್ ಗೆ ಬೆಡ್ ಗಳ ಶೇರಿಂಗ್ ವ್ಯವಸ್ಥೆಯಡಿ ಸುಮಾರು 500ರಿಂದ 600ಬೆಡ್ ಗಳ ವ್ಯವಸ್ಥೆ ಮಾಡಲಾಗಿದೆ. ಫೀವರ್ ಕ್ಲಿನಿಕ್ ಜೊತೆಗೆ ಖಾಸಗಿ ಹೋಟೆಲ್ ನ ಮೂಲಕವೂ ಆಸ್ಪತ್ರೆಗಳು ಚಿಕಿತ್ಸೆ ಮುಂದಾಗಿವೆ.

ಈ ಮಧ್ಯೆ ಇಂದು ಮೈಸೂರು- ಕೊಡಗು ಸಂಸದ ಪ್ರತಾಪ್ ಸಿಂಹ ಸೆಂಟ್ ಜೋಸೆಫ್ ಆಸ್ಪತ್ರೆಗೆ ಭೇಟಿ ನೀಡಿ ಖಾಸಗಿ ಕೋವಿಡ್ ಕೇರ್ ಸೆಂಟರ್ ಗಳ ಪರಿಶೀಲನೆ ನಡೆಸಿದರು. ಈ ವೇಳೆ ಮಾತನಾಡಿದ ಸಂಸದ ಪ್ರತಾಪ್ ಸಿಂಹ, ಮೈಸೂರಿನಲ್ಲಿ ಕೋವಿಡ್ ಸಮರ್ಥವಾಗಿ ಎದುರಿಸಲು ಮುಂದಾಗಿದ್ದೇವೆ. ನಗರದ ನಾಲ್ಕು ವಿಧಾನಸಭಾ ಕ್ಷೇತ್ರದಲ್ಲೂ ಆಯಾ ಶಾಸಕರ ನೇತೃತ್ವದಲ್ಲಿ ಟಾಸ್ಕ್ ಪೋರ್ಸ್ ರೆಡಿಯಾಗಿದೆ. ನರಸಿಂಹರಾಜ ಕ್ಷೇತ್ರಕ್ಕೆ ನನ್ನನ್ನ ಉಸ್ತುವಾರಿಯನ್ನಾಗಿ ಮಾಡಿದ್ದಾರೆ. ಶಾಸಕ ತನ್ವೀರ್ ಸೇಠ್ ಗೆ ಸಾಧ್ಯವಾಗದ ಕಾರಣ ನಾನು ಉಸ್ತುವಾರಿ ವಹಿಸಿಕೊಂಡಿದ್ದೇನೆ. ಹೀಗಾಗಿ ಜನರು ಸಹಕಾರವನ್ನ ಕೊಡಬೇಕು. ಎಲ್ಲಿ ಸಹಕಾರ ಕೊಡೊದಿಲ್ವೋ ಅಲ್ಲಿ ಪೊಲೀಸರನ್ನ ಬಳಕೆ ಮಾಡ್ತೀನಿ ಎಂದು ಎಚ್ಚರಿಕೆ ನೀಡಿದ್ದಾರೆ.mysore-pratap-simha-visit-st-joseph-hospital

ನಾವು ಈಗ 3500 ಸಾವಿರ ರ್ಯಾಪಿಡ್ ಟೆಸ್ಟಿಂಗ್ ಕಿಟ್ ಗಳನ್ನು ಕೇಳಿದ್ದೇವೆ. ಅವುಗಳನ್ನ ಬಳಸಿಕೊಂಡು ಕೊರೊನಾ ಕಂಟ್ರೋಲ್‌ ಮಾಡ್ತಿವಿ ಎಂದು ಸಂಸದ ಪ್ರತಾಪ್ ಸಿಂಹ ತಿಳಿಸಿದರು.

Key words: Mysore-Pratap simha-visit – St Joseph Hospital