“ಅಪ್ರಾಪ್ತ ವಯಸ್ಸಿನ ಹುಡುಗನನ್ನು ಮೋಹಿಸಿ, ಮದುವೆಗೆ ಪಟ್ಟು ಹಿಡಿದ ಮೂರು ಮಕ್ಕಳ ತಾಯಿ..!

Mysore-police-women-loves-boy-demand-for-marriage

 

ಮೈಸೂರು, ಡಿ.22, 2021 : (www.justkannada.in news) ಬಾಲಕ ನೊಂದಿಗೆ ಆನ್‌ಲೈನ್‌ ಚಾಟ್ ಮೂಲಕ ಸ್ನೇಹ ಬೆಳೆಸಿದ 35 ರ ಮಹಿಳೆ, ಆ ಬಾಲಕನನ್ನೇ ವಿವಾಹವಾಗಲು ಪಟ್ಟು ಹಿಡಿದಿದ್ದು ಇದೀಗ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಈ ಮಹಿಳೆಗೆ 13 ವರ್ಷದ ಪುತ್ರಿ ಸೇರಿ ಮೂವರು ಮಕ್ಕಳಿದ್ದಾರೆ ಎನ್ನಲಾಗಿದೆ.

ಏನಿದು ಘಟನೆ :

17 ವರ್ಷದ ಅಪ್ರಾಪ್ತ ಹುಡುಗನ ಜತೆಗೆ ಮಹಿಳೆ ಆನ್ ಲೈನ್ ಮೂಲಕ ಗೆಳೆತನ ಸಂಪಾದಿಸಿ, ಆನಂತರ ಅವರಿಬ್ಬರು ಚಾಟಿಂಗ್ ಮೂಲಕ ಪರಸ್ಪರ ಆಪ್ತರಾದರು. ಎಷ್ಟರ ಮಟ್ಟಿಗೆ ಎಂದರೆ, ಆ ಮಹಿಳೆ, ಅಪ್ರಾಪ್ತನನ್ನೇ ವಿವಾಹ ಮಾಡಿಕೊಡಿ ಎಂದು ದುಂಬಾಲು ಬೀಳುವಷ್ಟು.

ಈ ನಡುವೆ ಅಪ್ರಾಪ್ತ ಹುಡುಗ ಮೂರು ದಿನ ನಾಪತ್ತೆಯಾಗಿದ್ದ, ನಂತರ, ಮನೆಗೆ ಬಂದ ಆತ ‘ಮೊಬೈಲ್ ಕಳೆದುಹೋಗಿದ್ದರಿಂದ ಭಯಗೊಂಡು ಸ್ನೇಹಿತರ ಜತೆಗೆ ಬೇರೆ ಊರಿನಲ್ಲಿ ಇದ್ದೆ’ ಎಂದು ಕಥೆ ಹೇಳಿದ್ದ. ಆದರೆ, ನಿಜ ವಿಷಯವೇ ಬೇರೆಯಾಗಿತ್ತು.

ಮಹಿಳೆಯು ಅಪ್ರಾಪ್ತ ಹುಡುಗನ ಮನೆಗೆ ಖುದ್ದು ಬಂದು, ವಿಷಯ ಪ್ರಸ್ತಾಪಿಸಿ ಆತನ ಜತೆಗೆ ಮದುವೆ ಮಾಡಿಕೊಡುವಂತೆ ಮನವಿ ಮಾಡಿದ್ದಾಗಲೇ ಹುಡುಗನ ಪೋಷಕರಿಗೆ ವಿಷಯ ತಿಳಿದದ್ದು. ಆಗ ಇದರಿಂದ ಗಾಬರಿಗೊಳಗಾದ ಪೋಷಕರು, ಊರಿನವರು ಎಷ್ಟೇ ತಿಳಿ ಹೇಳಿದರೂ ಆ ಮಹಿಳೆ ಪಟ್ಟು ಬಿಡಲಿಲ್ಲ. ಕೊನೆಗೆ ಬಾಲಕ ನನ್ನು ರಕ್ಷಿಸಿ ತಮಗೊಪ್ಪಿಸುವಂತೆ ಪೊಲೀಸ್ ಠಾಣೆಗೆ ದೂರು ನೀಡಿದರು.

ಈ ನಡುವೆ ಮಹಿಳೆ ಹಾಗೂ ಅಪ್ರಾಪ್ತ ಹುಡುಗ , ಮೂರು ದಿನ ಪವಿತ್ರ ಕ್ಷೇತ್ರವೊಂದಕ್ಕೆ ತೆರಳಿ ದೈಹಿಕ ಸಂಬಂಧ ಬೆಳೆಸಿರುವುದು ಪೊಲೀಸರ ವಿಚಾರಣೆಯಲ್ಲಿ ಗೊತ್ತಾಗಿದೆ ಎನ್ನಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಇನ್ನೂ ಯಾವುದೇ ಪ್ರಕರಣ ದಾಖಲಾಗಿಲ್ಲ.

love-woman-believed-fraud-koppal
ಕೃಪೆ-internet

key words : Mysore-police-women-loves-boy-demand-for-marriage