ಐದು ವರ್ಷದ ಕಂದಮ್ಮನೊಂದಿಗೆ ನೇಣಿಗೆ ಶರಣಾದ ಪೊಲೀಸ್ ಕಾನ್‌ಸ್ಟೇಬಲ್ ಪತ್ನಿ

 

ಮೈಸೂರು, ಏ.27, 2020 : ( www.justkannada.in news ) ತನ್ನ ೫ ವರ್ಷದ ಹೆಣ್ಣು ಮಗುವಿನೊಂದಿಗೆ ಪೊಲೀಸ್ ಕಾನ್‌ಸ್ಟೇಬಲ್ ಪತ್ನಿ ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ಹೃದಯ ವಿದ್ರಾವಕ ಘಟನೆ ನಡೆದಿದೆ.

ಹೆಬ್ಬಾಳು ಪೊಲೀಸ್ ಕ್ವಾಟ್ರರ್ಸ್‌ನಲ್ಲಿ ಕಳೆದ ರಾತ್ರಿ ಈ ಘಟನೆ ನಡೆದಿದೆ. ಮೈಸೂರು ನಗರ ಘಟಕದ ಪೊಲೀಸ್ ಕಂಟ್ರೋಲ್ ರೂಂನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಹರೀಶ್ ಅವರ ಪತ್ನಿ ವಿದ್ಯಾಶ್ರೀ(೩೦), ೫ ವರ್ಷದ ಪುತ್ರಿ ಚಿನ್ಮಯಿಯೊಂದಿಗೆ ನೇಣಿಗೆ ಶರಣಾದವರು.

ಹುಣಸೂರು ತಾಲೂಕು ರತ್ನಪುರಿಯವರಾದ ವಿದ್ಯಾಶ್ರೀ ಅವರನ್ನು ೭ ವರ್ಷಗಳ ಹಿಂದೆ ಹಾಸನ ಮೂಲದ ಹರೀಶ್‌ಗೆ ಮದುವೆ ಮಾಡಿಕೊಡಲಾಗಿತ್ತು. ಹರೀಶ್ ಮೈಸೂರಿನ ಹೆಬ್ಬಾಳು ರಿಂಗ್ ರಸ್ತೆಯಲ್ಲಿರುವ ಪೊಲೀಸ್ ವಸತಿ ಗೃಹದ ಐ ಬ್ಲಾಕ್ ಮನೆ ಸಂಖ್ಯೆ ೫೦ರಲ್ಲಿ ಪತ್ನಿ, ಪುತ್ರಿಯೊಂದಿಗೆ ವಾಸಿಸುತ್ತಿದ್ದರು.

 mysore-police-family-tragidy-wife-daughter-suicide-hebbal-police

ಭಾನುವಾರ ರಾತ್ರಿ ಕರ್ತವ್ಯದಲ್ಲಿದ್ದ ಹರೀಶ್, ಇಂದು ಬೆಳಿಗ್ಗೆ ಮನೆಗೆ ಬಂದಿದ್ದಾರೆ. ಮನೆ ಬಾಗಿಲು ಬಡಿದರೂ ಸಾಕಷ್ಟು ಸಮಯವಾದರೂ ತೆರೆಯದಿದ್ದಾಗ ಅನುಮಾನ ಬಂದು, ನೆರೆಹೊರೆಯವರ ಸಹಾಯದಿಂದ ಬಾಗಿಲು ಮುರಿದು ಒಳ ಹೋಗಿದಾಗ ಪತ್ನಿ ಮತ್ತು ಮಗಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು.

ವಿಷಯ ತಿಳಿಯುತ್ತಿದ್ದಂತೆಯೇ ಹೆಬ್ಬಾಳು ಠಾಣೆ ಇನ್ಸ್‌ಪೆಕ್ಟರ್ ಚೆಲುವೇಗೌಡ ಹಾಗೂ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದರು. ಮೃತ ವಿದ್ಯಾಶ್ರೀ ಅವರ ಸಂಬಂಧಿಕರು ಬಂದ ನಂತರ ಮಹಜರು ನಡೆಸಿ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆ ನಡೆಸಿ, ಮಧ್ಯಾಹ್ನ ವಾರಸುದಾರರಿಗೆ ಒಪ್ಪಿಸಿದರು.

 mysore-police-family-tragidy-wife-daughter-suicide-hebbal-police

ಮನೆ ಕೊಠಡಿಯ ಫ್ಯಾನಿಗೆ ವೇಲ್‌ನಿಂದ ಮಗುವನ್ನು ನೇಣು ಹಾಕಿ, ಬಳಿಕ ತಾಯಿಯೂ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಘಟನೆಗೆ ಸಾಂಸಾರಿಕ ಕಲಹ ಕಾರಣವೆಂದು ಹೇಳಲಾಗಿದೆಯಾದರೂ ನಿಖರ ಕಾರಣ ತಿಳಿಯಬೇಕಾಗಿದೆ ಎಂದು ತನಿಖೆ ಕೈಗೊಂಡಿರುವ ಇನ್ಸ್‌ಪೆಕ್ಟರ್ ಚೆಲುವೇಗೌಡರು ತಿಳಿಸಿದ್ದಾರೆ.

KEY WORDS : mysore-police-family-tragidy-wife-daughter-suicide-hebbal-police