Sunday, September 20, 2026

BDA Apartments

ಆ.21 ರಂದು ‘ಪರಿಸರಕ್ಕಾಗಿ ನಾವು’ ವತಿಯಿಂದ ಧರಣಿ ಸತ್ಯಾಗ್ರಹ BDA JK_Adv BDA Adv
Home Front Page ಆ.21 ರಂದು ‘ಪರಿಸರಕ್ಕಾಗಿ ನಾವು’ ವತಿಯಿಂದ ಧರಣಿ ಸತ್ಯಾಗ್ರಹ

ಆ.21 ರಂದು ‘ಪರಿಸರಕ್ಕಾಗಿ ನಾವು’ ವತಿಯಿಂದ ಧರಣಿ ಸತ್ಯಾಗ್ರಹ

ಮೈಸೂರು,ಆಗಸ್ಟ್,19,2024 (www.justkannada.in): ಪಶ್ಚಿಮ ಘಟ್ಟಗಳನ್ನು ಉಳಿಸಲು ಸೂಕ್ತ ಕ್ರಮಗಳನ್ನು ಕೈಗೊಳ್ಳುವಂತೆ ಸರ್ಕಾರವನ್ನು ಒತ್ತಾಯಿಸಲು  ‘ಪರಿಸರಕ್ಕಾಗಿ ನಾವು’ ಸಂಘಟನೆ ವತಿಯಿಂದ ಆಗಸ್ಟ್ 21 ರಂದು ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ.

ಬೆಳಿಗ್ಗೆ 10 ಗಂಟೆಯಿಂದ 12 ಗಂಟೆಯವರೆಗೆ ಮೈಸೂರಿನ ಗಾಂಧಿ ಚೌಕದ ಬಳಿ  ಹಮ್ಮಿಕೊಂಡಿರುವ ಈ ಧರಣಿ ಸತ್ಯಾಗ್ರಹದಲ್ಲಿ ಹಿರಿಯ ಸಾಮಾಜಿಕ ಮತ್ತು ಪರಿಸರ ಹೋರಾಟಗಾರ ಮೇಜರ್ ಜನರಲ್ ಸುಧೀರ್ ಒಂಬತ್ಯೆರೆ, ಹಿರಿಯ ಸಾಹಿತಿಗಳಾದ ಕಾಳೇಗೌಡ ನಾಗವಾರ, ಹೊರೆಯಾಲ ದೊರೆಸ್ವಾಮಿ ಮತ್ತು ಸಾಮಾಜಿಕ ಹೋರಾಟಗಾರರಾದ ಕಾಳಚನ್ನೇಗೌಡ, ಪರಿಸರ ಹೋರಾಟಗಾರರಾದ ಭಾನು ಮೋಹನ್, ಲೀಲಾ ಶಿವಕುಮಾರ್, ಭಾಗ್ಯ ಶಂಕರ್, ಗಂಟಯ್ಯ ಮತ್ತು ಪರಿಸರ ಬಳಗ, ಕ್ಲೀನ್ ಮೈಸೂರು ಫೌಂಡೇಶನ್ ಮುಂತಾದ ಸಂಘಟನೆಗಳ ಮಹಿಳಾ ಕಾರ್ಯಕರ್ತರು ಹಾಗೂ ಪರಿಸರ ಕಾಳಜಿಯುಳ್ಳ ನಾಗರೀಕರು ಭಾಗವಹಿಸಲಿದ್ದಾರೆ.

ನಂತರ ‘ಪರಿಸರಕ್ಕಾಗಿ ನಾವು’ ಸಂಘಟನೆಯ ರಾಜ್ಯ ಸಮಿತಿ ತಯಾರಿಸಿರುವ ಹಕ್ಕೊತ್ತಾಯ ಪತ್ರವನ್ನು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ  ಕಳುಹಿಸಲಿದೆ.

Key words: mysore, Parisarakkagi Navu, August 21, Satyagraha