Sunday, October 11, 2026

Dasara Wishes

ಬಡವರು, ವೃತ್ತಿ ಆಧಾರಿತ ಕಾರ್ಮಿಕರಿಗೆ ತಲಾ ಹತ್ತು ಸಾವಿರ ರೂ. ಧನ ಸಹಾಯ ನೀಡುವಂ...
Happy Dasara
Home Front Page MYSORE PALACE : ಭದ್ರತಾ ಮುನ್ನೆಚ್ಚರಿಕೆ ಕ್ರಮ ಪರಿಶೀಲಿಸಿದ ಗೃಹ ಸಚಿವ ಆರಗ ಜ್ಞಾನೇಂದ್ರ.

MYSORE PALACE : ಭದ್ರತಾ ಮುನ್ನೆಚ್ಚರಿಕೆ ಕ್ರಮ ಪರಿಶೀಲಿಸಿದ ಗೃಹ ಸಚಿವ ಆರಗ ಜ್ಞಾನೇಂದ್ರ.

 

ಮೈಸೂರು, ಜೂ.19, 2022 : (www.justkannada.in news) ಪ್ರಧಾನಿ ನರೇಂದ್ರ ಮೋದಿ ಅವರು ಮೈಸೂರು ನಗರಕ್ಕೆ ಎರಡು ದಿನಗಳ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ, ತೆಗೆದುಕೊಳ್ಳಲಾದ ಭದ್ರತಾ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ, ಗೃಹ ಸಚಿವ ಆರಗ ಜ್ಞಾನೇಂದ್ರ ಪರಿಶೀಲನೆ ನಡೆಸಿದರು.

ಮೈಸೂರು ನಗರದಲ್ಲಿ ಪ್ರಧಾನಿ ಭಾಗವಹಿಸುವ, ಐತಿಹಾಸಿಕ ಮೈಸೂರು ಅರಮನೆಯ ಮುಂಭಾಗದಲ್ಲಿ ಆಯೋಜಿಸಿರುವ ಯೋಗ ಕಾರ್ಯಕ್ರಮದ ಸ್ಥಳ ಪರಿವೀಕ್ಷಣೆಯನ್ನು ಗೃಹ ಸಚಿವರು ಇಂದು ನಡೆಸಿದರು.

ಈ ವೇಳೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರೂ ಹಾಗೂ ಸಹಕಾರ ಸಚಿವ ಎಸ್ ಟಿ ಸೋಮಶೇಖರ್, ಸಂಸದ ಪ್ರತಾಪ್ ಸಿಂಹ, ಶಾಸಕ ನಾಗೇಂದ್ರ , ಮೈಸೂರು ನಗರ ಪೊಲೀಸ್ ಆಯುಕ್ತ ಚಂದ್ರಗುಪ್ತ, ಮೈಸೂರು ಜಿಲ್ಲೆ ಪೊಲೀಸ್ ಮುಖ್ಯಸ್ಥ ಚೇತನ್ ಉಪಸ್ತಿತರಿದ್ದರು.

key words : mysore-palace-yoga-day