ಮನ್ನಾರ್ ಶ್ರೀ ಕೃಷ್ಣ ಜಯಂತಿ ಆಚರಿಸಿದ ಯುದುವೀರ್ ದಂಪತಿ: ಶ್ರೀಕೃಷ್ಣನ ವೇಷ ತೊಟ್ಟು ಖುಷಿ ಪಟ್ಟ ಆದ್ಯವೀರ್…

ಮೈಸೂರು,ಸೆಪ್ಟಂಬರ್,10,2020(www.justkannada.in):  ಇಂದು ಮನ್ನಾರ್ ಶ್ರೀ ಕೃಷ್ಣ ಜಯಂತಿ ಹಿನ್ನೆಲೆ ಮೈಸೂರಿನ ಅರಮನೆಯಲ್ಲಿ ರಾಜವಂಶಸ್ಥ ಯದುವೀರ್ ಒಡೆಯರ್ ಕುಟುಂಬಸ್ಥರಿಂದ ಜಯಂತಿ ಆಚರಣೆ ಮಾಡಲಾಯಿತು.jk-logo-justkannada-logo

ಮೈಸೂರು ಅರಮನೆಯಲ್ಲಿ ಮನ್ನಾರ್ ಶ್ರೀಕೃಷ್ಣ ಜಯಂತಿ ಆಚರಣೆ, ಶಾಸ್ತ್ರೋಕ್ತವಾಗಿ ಕಾರ್ಯಕ್ರಮ ನೆರವೇರಿತು. ಈ ವೇಳೆ ಯದುವೀರ್ ಹಾಗೂ ತ್ರಿಷಿಕಾ ದಂಪತಿ ಪುತ್ರ ಆದ್ಯವೀರ್ ಶ್ರೀಕೃಷ್ಣನ  ವೇಷ ತೊಟ್ಟು ಖುಷಿ ಪಟ್ಟು ಅಜ್ಜಿ ಜೊತೆ ಸೇರಿ ಹಸುವಿಗೆ ಫಲಹಾರ ನೀಡಿದರು.mysore-palace-mannar shree Krishna jayanthi-yadhuveer-trishika

ಇನ್ನು ಮನ್ನಾರ್ ಶ್ರೀಕೃಷ್ಣ ಜಯಂತಿ ಆಚರಣೆ ಬಗ್ಗೆ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ತಮ್ಮ ಫೇಸ್ ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿ ಸರ್ವರಿಗೂ ಒಳಿತನ್ನ ಮಾಡಲಿ ಎಂದು ಪ್ರಾರ್ಥನೆ ಸಲ್ಲಿಸಿದ್ದಾರೆ.

Key words: mysore-palace-mannar shree Krishna jayanthi-yadhuveer-trishika