Sunday, October 11, 2026

Dasara Wishes

BJP DasraWishes_JK DasraWishes JK
Happy Dasara
Home Front Page ಆ.29ಕ್ಕೆ ಮೈಸೂರು ನೂತನ ಪತ್ರಕರ್ತರ ಭವನದ ಕಾಮಗಾರಿಗೆ ಚಾಲನೆ: ವಾರ್ಷಿಕ ಪ್ರಶಸ್ತಿಗಳು ಪ್ರಕಟ

ಆ.29ಕ್ಕೆ ಮೈಸೂರು ನೂತನ ಪತ್ರಕರ್ತರ ಭವನದ ಕಾಮಗಾರಿಗೆ ಚಾಲನೆ: ವಾರ್ಷಿಕ ಪ್ರಶಸ್ತಿಗಳು ಪ್ರಕಟ

ಮೈಸೂರು,ಆಗಸ್ಟ್,26,2026 (www.justkannada.in):  ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಪತ್ರಕರ್ತರ ನೂತನ ಭವನ ನಿರ್ಮಾಣದ ಕಾಮಗಾರಿಗೆ ಚಾಲನೆ ಮತ್ತು ಪತ್ರಿಕಾ ದಿನಾಚರಣೆಯನ್ನು ಆಗಸ್ಟ್ 29ರಂದು ಹಮ್ಮಿಕೊಳ್ಳಲಾಗಿದ್ದು ಈ ವರ್ಷದ ಹಿರಿಯ ಪತ್ರಕರ್ತ ಪ್ರಶಸ್ತಿ ಹಾಗೂ ವಾರ್ಷಿಕ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದೆ.

ನಗರದ ಊಟಿ ರಸ್ತೆಯ (ಜೆಎಸ್ಎಸ್ ಕಾಲೇಜು ಹತ್ತಿರ) ಕೆಎನ್ಎಸ್ ಬಡಾವಣೆಯ ಪತ್ರಕರ್ತ ಸಂಘದ ನಿವೇಶನದಲ್ಲಿ ಜರುಗುವ ಪತ್ರಿಕಾ ದಿನಾಚರಣೆಯಲ್ಲಿ ನೂತನ ಪತ್ರಕರ್ತರ ಭವನದ ಕಾಮಗಾರಿಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಲನೆ ನೀಡಲಿದ್ದು ಸಮಾರಂಭವನ್ನು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಉದ್ಘಾಟಿಸುವರು. ಸಂಘದ ಅಧ್ಯಕ್ಷ ಕೆ.ದೀಪಕ್ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತರಿಗೆ ಮಾಜಿ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಅವರು ಅಭಿನಂದಿಸಿದರೆ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ವಾರ್ಷಿಕ ಪ್ರಶಸ್ತಿಗಳನ್ನು ಪ್ರದಾನ ಮಾಡುವರು.ಆ.29ಕ್ಕೆ ಮೈಸೂರು ನೂತನ media1

ಸಮಾರಂಭದಲ್ಲಿ ಮೈಸೂರು ಜಿಲ್ಲೆಯ ಶಾಸಕ ಜಿ.ಟಿ.ದೇವೇಗೌಡ, ತನ್ವೀರ್‌ ಸೇಠ್, ಟಿ.ಎಸ್. ಶ್ರೀವತ್ಸ, ಕೆ.ಹರೀಶ್ ಗೌಡ, ಅನಿಲ್ ಚಿಕ್ಕಮಾದು, ಡಿ. ರವಿಶಂಕರ್, ದರ್ಶನ್ ಧ್ರುವನಾರಾಯಣ್, ಜಿ.ಡಿ. ಹರೀಶ್ ಗೌಡ,  ವಿಧಾನ ಪರಿಷತ್  ವಿಧಾನ ಪರಿಷತ್ತಿನ ಸದಸ್ಯರಾದ ಡಾ. ತಿಮ್ಮಯ್ಯ ಸಿ.ಎನ್. ಮಂಜೇಗೌಡ, ರಘು (ಕೌಟಿಲ್ಯ) ವಿವೇಕಾನಂದ, ಮಧು ಮಾದೇಗೌಡ ಹಾಗೂ ಡಾ. ಕೆ.ಶಿವಕುಮಾರ್, ಜಿಲ್ಲಾಧಿಕಾರಿ ಲಕ್ಷ್ಮೀಕಾಂತ ರೆಡ್ಡಿ, ನಗರಪಾಲಿಕೆ ಆಯುಕ್ತರಾದ ಸವಿತಾ ಕೆ.ಎಲ್, ಜಿಎಸ್ಎಸ್ ಸಮ್ಮೂಹ ಸಂಸ್ಥೆಯ ಮುಖ್ಯಸ್ಥ ಶ್ರೀಹರಿ ದ್ವಾರಕನಾಥ್, ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷರುಗಳಾದ ಅಂಶಿ ಪ್ರಸನ್ನ ಕುಮಾರ್, ಸಿ.ಕೆ. ಮಹೇಂದ್ರ, ಎಸ್.ಟಿ. ರವಿಕುಮಾರ್ ಮೊದಲಾದವರು ಭಾಗವಹಿಸುವರು.

 ಹಿರಿಯ ಪತ್ರಕರ್ತರಿಗೆ ಅಭಿನಂದನೆ :

ಈ ಸಾಲಿನ ಹಿರಿಯ ಪತ್ರಕರ್ತರಾದ ಹಲೋ ಮೈಸೂರ್ ಪತ್ರಿಕೆಯ ಸಂಪಾದಕ ಟಿ. ಗುರುರಾಜ್ (ನಗರ), ಮೈಸೂರು ಮಿತ್ರ ಪತ್ರಿಕೆಯ ಹಿರಿಯ ವರದಿಗಾರ ಶ್ರೀ ಪಿ.ಎಸ್. ವೀರೇಶ್ (ಗ್ರಾಮಾಂತರ) ಉಪ- ಸಂಪಾದಕ ವಿಭಾಗದಿಂದ ರಾಜ್ಯಧರ್ಮ ಪತ್ರಿಕೆಯ ಬಿ.ಎಂ.ಲವಕುಮಾರ್, ಛಾಯಾಗ್ರಾಹಕರ ವಿಭಾಗದಿಂದ ಸಿಟಿ ಹೈ ಲೈಟ್ಸ್ ಪತ್ರಿಕೆಯ  ಹಂಪಾ ನಾಗರಾಜ್, ವಿದ್ಯುನ್ಮಾನ ಮಾಧ್ಯಮದಿಂದ ಕನ್ನಡ ಚಾನಲ್ ಸಂಪಾದಕ ಸೂರ್ಯ (ವೈರಮುಡಿ), ವಿಡಿಯೋಗ್ರಾಫರ್ ವಿಭಾಗದಿಂದ ಜೀ ಟಿವಿಯ ಎಂ. ಅರುಣ್ ದೇವ್ ಅವರನ್ನು ಆಯ್ಕೆ ಮಾಡಲಾಗಿದೆ.

ವಾರ್ಷಿಕ ಪ್ರಶಸ್ತಿಗೆ ಆಯ್ಕೆ :   

ವರ್ಷದ ಅತ್ಯುತ್ತಮ ಕನ್ನಡ ವರದಿಗೆ ಉದಯವಾಣಿ ಪತ್ರಿಕೆಯ ವೀರೇಂದ್ರ ಪ್ರಸಾದ್ ಆರ್. ಮತ್ತು ವಿಜಯವಾಣಿ ಪತ್ರಿಕೆಯ ಅವಿನಾಶ್ ಜೈನಹಳ್ಳಿ ಹಾಗೂ ಅತ್ಯುತ್ತಮ ಇಂಗ್ಗಿಷ್ ವರದಿಗೆ ಡೆಕ್ಕನ್ ಹೆರಾಲ್ಡ್ ಪತ್ರಿಕೆಯ ಪಿ. ಶಿಲ್ಪ ಮತ್ತು ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಯ  ಕೆ.ಕೆ. ಕಾರ್ತಿಕ್ ಅವರು ಆಯ್ಕೆಯಾಗಿ ಪ್ರಶಸ್ತಿ ಹಂಚಿಕೊಂಡಿದ್ದಾರೆ.ಆ.29ಕ್ಕೆ ಮೈಸೂರು ನೂತನ ಪತ್ರಕರ್ತರ ಭವನದ ಕಾಮಗಾರಿಗೆ ಚಾಲನೆ media2

ಅತ್ಯುತ್ತಮ ಛಾಯಾಚಿತ್ರ ಪ್ರಶಸ್ತಿಯನ್ನು ಸ್ಟಾರ್ ಆಫ್ ಮೈಸೂರ್ ಮತ್ತು ಮೈಸೂರು ಮಿತ್ರ ಪತ್ರಿಕೆಯ ಎಂ.ಎನ್. ಲಕ್ಷ್ಮೀನಾರಾಯಣ ಯಾದವ್ ಹಾಗೂ ವಿದ್ಯುನ್ಮಾನ ಮಾಧ್ಯಮ ವಿಭಾಗದಿಂದ ನ್ಯೂಸ್ -18ನ ಕೆ.ಎಸ್. ಆನಂದ್, ರಾಹುಲ್. ಪಿ‌. ಅವರು ಅತ್ಯುತ್ತಮ ವರದಿಗಾರಿಕೆ ಪ್ರಶಸ್ತಿ ಪಡೆದಿದ್ದಾರೆ.ವಾರ್ಷಿಕ ಪ್ರಶಸ್ತಿಗಳು ಪ್ರಕಟ jk02_new jk02 new

ಅಭಿನಂದನೆಗೆ ಭಾಜನರಾದ ಹಿರಿಯ ಪತ್ರಕರ್ತರು, ಛಾಯಾಗ್ರಾಹರು, ವಿಡಿಯೋಗ್ರಾಫರ್ ಹಾಗೂ ವಾರ್ಷಿಕ ಪ್ರಶಸ್ತಿ ಪಡೆದ ಪ್ರತಿಭಾನ್ವಿತ ಪತ್ರಕರ್ತರಿಗೆ ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷರಾದ ಕೆ.ದೀಪಕ್, ಪ್ರಧಾನ ಕಾರ್ಯದರ್ಶಿ ಧರ್ಮಾಪುರ ನಾರಾಯಣ್ ಹಾಗೂ ಆಡಳಿತ ಮಂಡಳಿಯ ಸದಸ್ಯರು ಹೃದಯಪೂರ್ವ ಅಭಿನಂದನೆ ಸಲ್ಲಿಸುತ್ತಾರೆ.

Key words: Mysore, new ,Patrakartara Bhavan, August 29, Annual awards, announced