Sunday, September 20, 2026

BDA Apartments

ಮೈಸೂರಿನಲ್ಲಿ ನಾಯಕ ಸಮುದಾಯದ ಮುಖಂಡರಿಂದ ‘ಪಾಳೆಯಗಾರ ಮಾರನಾಯಕರ’ ಸ್ಮರಣೋತ್...
Home Front Page ಮೈಸೂರಿನಲ್ಲಿ ನಾಯಕ ಸಮುದಾಯದ ಮುಖಂಡರಿಂದ ‘ಪಾಳೆಯಗಾರ ಮಾರನಾಯಕರ’ ಸ್ಮರಣೋತ್ಸವ…

ಮೈಸೂರಿನಲ್ಲಿ ನಾಯಕ ಸಮುದಾಯದ ಮುಖಂಡರಿಂದ ‘ಪಾಳೆಯಗಾರ ಮಾರನಾಯಕರ’ ಸ್ಮರಣೋತ್ಸವ…

ಮೈಸೂರು,ಅ,3,2019(www.justkannada.in): ಮೈಸೂರು ಚಾಮುಂಡಿಬೆಟ್ಟದ ಮಹಾಬಲೇಶ್ವರ ದೇವಸ್ಥಾನದ ಮುಂಭಾಗದಲ್ಲಿರುವ  ಪಾಳೆಯಗಾರ ಮಾರನಾಯಕರ ವಿಗ್ರಹಕ್ಕೆ ನಾಯಕರ  ಸಮುದಾಯದ ಮುಖಂಡರು ಪುಷ್ಪಾರ್ಚನೆ ಮಾಡುವ ಮೂಲಕ ಪೂಜೆ ಸಲ್ಲಿಸಿದರು.

ಚಾಮುಂಡಿಬೆಟ್ಟದ ಮಹಾಬಲೇಶ್ವರ ದೇವಸ್ಥಾನದ ಮುಂಭಾಗದಲ್ಲಿರುವ ಪಾಳೆಯಗಾರ ಮಾರನಾಯಕರ ವಿಗ್ರಹಕ್ಕೆ  ನಾಯಕ ಸಮುದಾಯದ ಮುಖಂಡರು ವಿಶೇಷ ಪೂಜೆ ಸಲ್ಲಿಸಿದರು. ಜನಾಂಗದ ಇತಿಹಾಸ ಪುರುಷ 13ನೇ ಶತಮಾನದಲ್ಲಿ ಮೈಸೂರು ಯದುವಂಶದ ಮುಂಚಿತವಾಗಿ ಮೈಸೂರುಪಾಳೆಪಟ್ಟು ಆಳ್ವಿಕೆ ನಡೆಸುತ್ತಿದ್ದ ಪಾಳೆಯಗಾರ ಮಾರನಾಯಕರ ವಿಗ್ರಹಕ್ಕೆ ಪೂಜೆ ಸಲ್ಲಿಸಿ  ಪುಣ್ಯಸ್ಮರಣೆ ಮಾಡಲಾಯಿತು.

ಇದೇ ವೇಳೆ ಮಾರನಾಯಕ ಅದ್ಯಯನ ಕೇಂದ್ರ ಸ್ಥಾಪಿಸಲು ಮುಖ್ಯಮಂತ್ರಿಗಳಿಗೆ ನಾಯಕ ಸಮುದಾಯದ ಮುಖಂಡರು  ಆಗ್ರಹಿಸಿದರು.  ಮೈಸೂರು ನಾಯಕರ ಪಡೆ ಅಧ್ಯಕ್ಷರಾದ ಪಡುವಾರಹಳ್ಳಿ ಎಂ ರಾಮಕೃಷ್ಣ,  ವೆಂಕಟೇಶ ವೀರನಗೆರೆ ದೇವರಾಜ. ಬದನಗುಪ್ಪೆ ನಾರಾಯಣ್. ಶ್ರೀಧರ, ಕಣೆಗಾಲ ಮಹದೇವನಾಯಕ. ಗೋಪಿ. ಜಯಕುಮಾರ್, ಕೊಳ್ಳೆಗಾಲ ಶಿವು, ರಂಗಸ್ವಾಮಿ, ನಾರಾಯಣ ಹದಿನಾರು ಪ್ರಕಾಶ್, ಹಿನಕಲ್ ಚಂದ್ರ, ಹಂಚ್ಯರವಿ.ವಿವೇಕ್. ರವರಿದ್ದರು.

Key words: mysore-nayaka  community –palegara maranayaka-spacial worship