ನಿಮಗೆ ಹೇಳೋರು ಕೇಳೊರು ಯಾರೂ ಇಲ್ವಾ..? ಹೋಗಿ ರಾಜ್ಯಕ್ಕೆ ಪರಿಹಾರ ತನ್ನಿ- ಕೇಂದ್ರ ಸಚಿವರ ವಿರುದ್ದ ಬಿಜೆಪಿ ಶಾಸಕ ಗರಂ…

ವಿಜಯಪುರ,ಅ,3,2019(www.justkannada.in): ಸಂಕಷ್ಟದಲ್ಲಿರುವ ನೆರೆ ಸಂತ್ರಸ್ತರಿಗಾಗಿ ಪರಿಹಾರ ಬಿಡುಗಡೆ ಮಾಡದ ಕೇಂದ್ರ ಸರ್ಕಾರದ ವಿರುದ್ದ ಬಿಜೆಪಿ ಶಾಸಕರೇ ತಿರುಗಿ ಬಿದ್ದಿದ್ದು, ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಇದೀಗ ಕೇಂದ್ರ ಸಚಿವರ ವಿರುದ್ದ ಗುಡುಗಿದ್ದಾರೆ.

ನಮ್ಮ ರಾಜ್ಯದಿಂದ ಮೂವರು ಕೇಂದ್ರ ಸಚಿವರಾಗಿದ್ದಾರಿ. ಒಬ್ಬರು ಹುಬ್ಬಳ್ಳಿಯಲ್ಲಿ ಕುಳಿತ್ತಿದ್ದೀರಿ. ಮತ್ತೊಬ್ಬರು ಬೆಂಗಳೂರಿನಲ್ಲಿ ಕುಳಿತಿದ್ದೀರಿ. ಇಲ್ಲಿ ಕುಳಿತು ಯಾರಿಗ್ಯಾಕೋ  ದೇಶದ್ರೋಹಿ ಎಂದು ಟೀಕಿ ಮಾಡ್ತೀರಿ. ನಿಮಗೆ ಹೇಳೋರು ಕೇಳೋರು ಇಲ್ವಾ..? ಏನು ಹುಡುಗಾಟಿಕೆ ಆಡುತ್ತಿದ್ದೀರಾ..?ಎಂದು ಬಸನಗೌಡ ಪಾಟೀಲ್ ಯತ್ನಾಳ್ ಕಿಡಿಕಾರಿದ್ದಾರೆ.

ವಿಜಯಪುರದಲ್ಲಿ ಇಂದು ಮಾತನಾಡಿದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್,  ಅನಂತ್ ಕುಮಾರ್ ಇದ್ದಿದ್ರೆ ನಮ್ಮ ರಾಜ್ಯಕ್ಕೆ ಇಂತಹ ಪರಿಸ್ಥಿತಿ ಬರುತ್ತಿರಲಿಲ್ಲ. ಅನಂತ್ ಕುಮಾರ್ ರನ್ನ ಕಳೆದುಕೊಂಡಿದ್ದು ನಮ್ಮ ದುರ್ದೈವ. ಅವರು ಇದ್ದಿದ್ದರೇ ಕೈಹಿಡಿದು ಕೆಲಸ ಮಾಡಿಸುತ್ತಿದ್ದರು. ಆದರೆ ಈಗ ರಾಜ್ಯದಲ್ಲಿ ಮೂರು ಮಂದಿ ಕೇಂದ್ರ ಸಚಿವರಿದ್ದೀರಿ ಮೂವರಲ್ಲಿ ಒಬ್ಬರಾದರೂ ಸೇತುವೆಯಾಗಿ. ರಾಜ್ಯಕ್ಕೆ 10 ಸಾವಿರ ಪರಿಹಾರ ತನ್ನಿ ಎಂದು ಆಗ್ರಹಿಸಿದರು.

ಪರಿಹಾರದ ಬಗ್ಗೆ ಚಕ್ರವರ್ತಿ ಸೂಲಿಬೆಲೆ ಹೇಳಿದ್ದು ಸರಿಯಾಗಿದೆ. ಸೂಲಿಬೆಲೆಗೆ ಬೈದು ನಿಮಗಷ್ಟೆ ಅಲ್ಲ ಪ್ರಧಾನಿ ಮೋದಿ ಗೌರವಕ್ಕೂ ಧಕ್ಕೆ ತರಬೇಡಿ ಎಂದು ಬಸನಗೌಡ ಪಾಟೀಲ್ ಸಲಹೆ ನೀಡಿದರು.

Key words: flood relief-bjp- MLA-outrage-against- central minister-vijayapur