ರಾಜಕೀಯ ಲಾಭಕ್ಕಾಗಿ ಬಿಜೆಪಿಯಿಂದ ಸಿಎಎ ಜಾರಿ: ಫೆ.2 ರಂದು ಸಿಎಎ ಕಾಯ್ದೆ ಕುರಿತು ಒಂದು ದಿನದ ರಾಷ್ಟ್ರೀಯ ಕಾರ್ಯಾಗಾರ-ಮಾಜಿ ಸಚಿವ ಹೆಚ್.ಸಿ ಮಹದೇವಪ್ಪ…

ಮೈಸೂರು,ಜ,30,2020(www.justkannada.in): ಸಿಎಎ ಮತ್ತು ಎನ್ ಆರ್ ಸಿ ಬಗ್ಗೆ ಜನರಲ್ಲಿ ಮತ್ತಷ್ಟು ಅರಿವು ಮೂಡಿಸುವುದಕ್ಕೆ ಫೆಬ್ರವರಿ 2 ರಂದು ಒಂದು ದಿನದ ಕಾರ್ಯಗಾರವನ್ನ ಆಯೋಜಿಸಿದ್ದೇವೆ ಎಂದು ಮಾಜಿ ಸಚಿವ ಹೆಚ್.ಸಿ ಮಹದೇವಪ್ಪ ತಿಳಿಸಿದರು.

ಮೈಸೂರಿನ ಕಾಂಗ್ರೆಸ್ ಭವನದಲ್ಲಿ  ಮಾಜಿ ಸಚಿವ ಹೆಚ್ ಸಿ ಮಹಾದೇವಪ್ಪ ಮತ್ತು ಮಾಜಿ ಸಂಸದ ಆರ್ ಧ್ರುವನಾರಾಯಣ್ ಸುದ್ದಿಗೋಷ್ಢಿ ನಡೆಸಿ ಮಾತನಾಡಿದರು.  CAA ಮತ್ತು NRC ಕುರಿತು ಫೆಬ್ರವರಿ 2 ರಂದು ಕಾಂಗ್ರೆಸ್ ಭವನದ ಆವರಣದಲ್ಲಿ ಕಾರ್ಯಕ್ರಮ ಆಯೋಜಿಸಿದ್ದೇವೆ.  ಮಾಜಿ ಸಿಎಂ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಲಿದೆ. ಈ ವೇಳೆ ಸಿಎಎ ಮತ್ತು ಎನ್ ಆರ್ ಸಿ ಬಗ್ಗೆ ಜನರಲ್ಲಿ ಮತ್ತಷ್ಟು ಅರಿವು ಮೂಡಿಸಲಾಗುತ್ತದೆ ಎಂದರು.

ಬಿಜೆಪಿಯವರು ರಾಜಕೀಯ ಲಾಭಕ್ಕಾಗಿ ಈ ಕಾಯ್ದೆಯನ್ನ ಜಾರಿಗೆ ತಂದಿದ್ದಾರೆ. ಹೀಗಾಗಿ ಕಾಯ್ದೆಯ ಬಗ್ಗೆ ಹಲವರು ವಿಚಾರ ಮಂಡನೆ ಮಾಡಲಿದ್ದಾರೆ.  ಈ‌ ಕಾಯ್ದೆಯನ್ನ ಕೇಂದ್ರ ಸರ್ಕಾರ ವಾಪಸ್ ಪಡೆಯುವರೆಗೂ ಈ ರೀತಿಯ ಕಾರ್ಯಕ್ರಮಗಳು ಮುಂದುವರಿಯುತ್ತೇವೆ  ಎಂದು ಹೆಚ್.ಸಿ ಮಹದೇವಪ್ಪ ತಿಳಿಸಿದರು.

ಬಿಜೆಪಿ ಅವರೇನು ದೇಶದ ಮೂಲ ನಿವಾಸಿಗಳಿಗೆ ಪೌರತ್ವ ಕೋಡೋದು. ಅವರು ಇಲ್ಲಿಯವರೇ ಅವರಿಗೆ ಪೌರತ್ವ ಹೇಗೆ ಕೋಡ್ತಾರೆ. ಸುಖಾ ಸುಮ್ಮನೆ ಕಾಯ್ದೆ ಏರಲು ಈ ರೀತಿ ಮಾತಾಡುತ್ತಿದ್ದಾರೆ.  ವಾಕ್ ಸ್ವಾತಂತ್ರ್ಯದ ಮೇಲೆ ಗದಾ ಪ್ರಹಾರ ನಡೆಯುತ್ತಿದೆ. ನಮ್ಮನ್ನ ಹತ್ತಿಕ್ಕುವ ಕೆಲಸ ಮಾಡ್ತಿದ್ದಾರೆ. ಇದ್ಯಾವುದಕ್ಕೂ  ನಾವು ಹೆದರೋಲ್ಲ. ಕೋರ್ಟ್‌ನಲ್ಲು ಸಿಎಎ ಕಾಯ್ದೆ ಜಾರಿಗೆ ಬಂದರು. ಸ್ವತಹ ಗಾಂಧಿಜೀ ಹೇಳಿದ್ದಂತೆ ಬೀದಿಗಿಳಿದು ಹೋರಾಟ ಮಾಡ್ತೀವಿ ಎಂದು ಮಾಜಿ ಸಚಿವ ಹೆಚ್.ಸಿ.ಮಹದೇವಪ್ಪ  ಎಚ್ಚರಿಕೆ ನೀಡಿದರು.

ಕೆಪಿಸಿಸಿ ಹುದ್ದೆ ಸದ್ಯಕ್ಕೆ ಖಾಲಿಯಿಲ್ಲ…

ಕೆಪಿಸಿಸಿ ಅಧ್ಯಕ್ಷರ ನೇಮಕ ವಿಚಾರ ಕುರಿತು ಮಾತನಾಡಿದ ಹೆಚ್.ಸಿ ಮಹದೇವಪ್ಪ, ಕೆಪಿಸಿಸಿ ಹುದ್ದೆ ಸದ್ಯಕ್ಕೆ ಖಾಲಿಯಿಲ್ಲ. ನಾನು ಕೆಪಿಸಿಸಿ ಹುದ್ದೆಯ ರೇಸ್ ನಲ್ಲಿ ಇಲ್ಲ. ದಿನೇಶ್ ಗುಂಡೂರಾವ್ ಕೆಪಿಸಿಸಿ ಅಧ್ಯಕ್ಷರಾಗಿ ಇದ್ದಾರೆ. ಸಿದ್ದರಾಮಯ್ಯ ವಿರೋಧಪಕ್ಷದ ನಾಯಕರಾಗಿದ್ದಾರೆ. ಪಕ್ಷ ಎಲ್ಲ ವಿಚಾರಗಳನ್ನು ಗಮನಿಸಿ ಸೂಕ್ತ ತೀರ್ಮಾನಕೈಗೊಳ್ಳಲಿದೆ. ಸದ್ಯಕ್ಕೆ ನಮ್ಮ ಮುಂದೆ ಇರೋದು ಪೌರತ್ವ ಕಾಯ್ದೆ ವಿರೋಧಿ ಹೋರಾಟ ಮಾತ್ರ. ನಮ್ಮ ಗಮನ ಅದರ ಮೇಲಿದೆ ಎಂದು ತಿಳಿಸಿದರು.

Key words: mysore-  National Workshop CAA Act -February -Former Minister -HC Mahadevappa.