ಮಂಡ್ಯದವರಿಗೆ ಗೊಂದಲವಿದೆ ಹೊರತು ಮೈಸೂರಿನ ಜನತೆಗಲ್ಲ-ಸಂಸದೆ ಸುಮಲತಾ ಅಂಬರೀಶ್ ಗೆ ಪ್ರತಾಪ್ ಸಿಂಹ ತಿರುಗೇಟು.

ಮಡಿಕೇರಿ,ಜುಲೈ,9,2021(www.justkannada.in): ನಾನು ಮೈಸೂರು –ಕೊಡಗು ಸಂಸದ ಅನ್ನೋದ್ರಲ್ಲಿ ಗೊಂದಲ ಇಲ್ಲ.  ಗೊಂದಲ ಏನಾದರೂ ಇದ್ದರೇ ಅದು ಮಂಡ್ಯ ಜಿಲ್ಲೆ ಜನರಿಗೆ ಮಾತ್ರ ಎಂದು ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಗೆ ಸಂಸದ ಪ್ರತಾಪ್ ಸಿಂಹ ಟಾಂಗ್ ನೀಡಿದ್ದಾರೆ.jk

ಕೆಆರ್ ಎಸ್ ಡ್ಯಾಂ ಬಿರುಕು ವಿಚಾರಕ್ಕೆ ಸಂಬಂಧಿಸಿದಂತೆ ಸಂಸದೆ ಸುಮಲತಾ ಅಂಬರೀಶ್ ಗೆ ಟಾಂಗ್ ನೀಡಿ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಪರ ಬ್ಯಾಟ್ ಸಂಸದ ಪ್ರತಾಪ್ ಸಿಂಹ ಬ್ಯಾಟ್ ಬೀಸಿದ್ದರು. ಈ ವಿಚಾರವಾಗಿ ಪ್ರತಿಕ್ರಿಯಿಸಿದ್ಧ ಸಂಸದೆ ಸುಮಲತಾ ಅಂಬರೀಶ್, ಮೈಸೂರು ಸಂಸದ ಪ್ರತಾಪ್ ಸಿಂಹ ಕೆಲವು ಗೊಂದಲದಲ್ಲಿದ್ದಾರೆ. ಅವರು ಮೈಸೂರು ಸಂಸದರಾ? ಅಥವಾ ಮಂಡ್ಯ ಸಂಸದರಾ? ಎಂಬುದನ್ನು ಮೊದಲು ಸ್ಪಷ್ಟಪಡಿಸಿಕೊಳ್ಳಬೇಕು  ಹೇಳಿದ್ದರು.

ಈ ಕುರಿತು ಮಡಿಕೇರಿಯಲ್ಲಿ ಪ್ರತಿಕ್ರಿಯಿಸಿದ ಸಂಸದ ಪ್ರತಾಪ್ ಸಿಂಹ, ನಾನು ಮೈಸೂರು –ಕೊಡಗು ಸಂಸದ ಅನ್ನೋದ್ರಲ್ಲಿ ಗೊಂದಲ ಇಲ್ಲ. ನಾನು ಮೈಸೂರಿನಲ್ಲಿ ಇರ್ತೀನಿ ಕೊಡಗಿಗೂ ಹೋಗುತ್ತೇನೆ. ಆದರೆ ವೋಟ್ ಪಡೆದು ಗೆದ್ಧವರು ಮಂಡ್ಯದಲ್ಲಿ ಇದ್ದಾರೋ ಇಲ್ವೋ ಎಂಬ ಗೊಂದಲ ಮಂಡ್ಯ ಜನತೆಗೆ ಇದೆ. ಮಂಡ್ಯದವರಿಗೆ ಗೊಂದಲವಿದೆ ಹೊರತು ಮೈಸೂರು ಜನತೆಗಲ್ಲ ಎಂದು ತಿರುಗೇಟು ನೀಡಿದರು.

Key words: mysore-MP- Prathap simha-mandya-MP- Sumalatha Ambarish