ಸಿದ್ದಗಂಗಾ ಶ್ರೀಗಳ ರೀತಿ ನಡೆದಾಡುವ ದೇವರಾಗಬೇಕೇ ಹೊರತು, ನಡೆದಾಡುವ ರಾಜಕಾರಣಿಗಳಾಗಬೇಡಿ- ಹೆಚ್.ವಿಶ್ವನಾಥ್.

ಮೈಸೂರು,ಜುಲೈ,21,2021(www.justkannada.in): ಸಿಎಂ ಬದಲಾವಣೆ ವಿಚಾರ ಚರ್ಚೆಗೆ ಬರುತ್ತಿದ್ದಂತೆ ಬಿಎಸ್  ಯಡಿಯೂರಪ್ಪ ಪರ ನಿಂತಿರುವ ವಿವಿಧ ಮಠಾಧೀಶರ ವಿರುದ್ಧ ವಿಧಾನಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಕಿಡಿಕಾರಿದ್ದಾರೆ.jk

ಮೈಸೂರಿನಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿರುವ ಹೆಚ್.ವಿಶ್ವನಾಥ್, ರಾಜಕಾರಣ ಸ್ವಾಮಿಗಳ ಕೈಗೆ ಹೋಗಬಾರದು. ಸ್ವಾಮಿಗಳು ಸರ್ಕಾರದ ಭಾಗ ಅಲ್ಲ. ನಾನು ಕೈ ಮುಗಿದು ಶ್ರದ್ಧಾ ಭಕ್ತಿಯಿಂದ ಕೇಳಿಕೊಳ್ಳುತ್ತಿದ್ದೇನೆ. ಸಿದ್ದಗಂಗಾ ಶ್ರೀಗಳ ರೀತಿ ನಡೆದಾಡುವ ದೇವರಾಗಬೇಕೇ ಹೊರತು, ನಡೆದಾಡುವ ರಾಜಕಾರಣಿಗಳಾಗಬೇಡಿ ಎಂದು ಮಠಾಧೀಶರಿಗೆ ಸಲಹೆ ನೀಡಿದ್ದಾರೆ.

ನಾನು ಇವತ್ತು ಯಡಿಯೂರಪ್ಪ ಅವರಿಗೆ ಮನವಿ ಮಾಡುತ್ತೇನೆ. ರಾಜ್ಯದ ಅಡಳಿತ ಅಭಿವೃದ್ಧಿ ದೃಷ್ಟಿಯಿಂದ, ಬಿಜೆಪಿ ಭವಿಷ್ಯದ ಹಿತದೃಷ್ಟಿಯಿಂದ, ರಾಜಕೀಯ ಜೀವನದ ಸಂಧ್ಯಾಕಾಲದಲ್ಲಿರುವ ಯಡಿಯೂರಪ್ಪ ಅವರ ಗೌರವಯುತ ನಿರ್ಗಮನಕ್ಕೆ ಹೈಕಮಾಂಡ್ ಸೂಚನೆ ಕೊಟ್ಟಿದೆ. ಈ ಪರಿಸ್ಥಿತಿಯನ್ನ ಮಠಾಧೀಶರು ಕ್ಲಿಷ್ಟ ಮಾಡುತ್ತಿದ್ದಾರೆ. ನಿಜಲಿಂಗಪ್ಪ, ದೇವರಾಜ ಅರಸು, ದೇವೇಗೌಡ್ರು, ಬಂಗಾರಪ್ಪ, ಎಸ್.ಎಂ ಕೃಷ್ಣ, ಸಿದ್ದರಾಮಯ್ಯ ಎಂಥವರು ಮುಖ್ಯಮಂತ್ರಿಗಳಾದರು. ಅವರ ದಾರಿಯಲ್ಲಿ ಅವರು ನಡೆದು ಗೌರವಯುತವಾಗಿ ನಿರ್ಗಮನ ಆದರು. ಎರಡು ಬಾರಿ ಯಡಿಯೂರಪ್ಪ ಅವರೇ ಸಿಎಂ ಆದರು, ಆದರೆ ಗೌರವಯುತ ನಿರ್ಗಮನ ಆಗುತ್ತಿಲ್ಲ ಎಂದು ಲೇವಡಿ ಮಾಡಿದರು.

ಎಂ.ಬಿ. ಪಾಟೀಲ್, ಶ್ಯಾಮನೂರು ಶಿವಶಂಕರಪ್ಪ ಶಿಕ್ಷಣದ ವ್ಯಾಪಾರಿಗಳು.

ಕೆಲ ಕಾಂಗ್ರೆಸ್ ನಾಯಕರು ಸಿಎಂ ಬಿಎಸ್  ಯಡಿಯೂರಪ್ಪ ಬೆಂಬಲಕ್ಕೆ ನಿಂತ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಹೆಚ್.ವಿಶ್ವನಾಥ್, ಎಂ.ಬಿ. ಪಾಟೀಲ್, ಶ್ಯಾಮನೂರು ಶಿವಶಂಕರಪ್ಪ ಶಿಕ್ಷಣದ ವ್ಯಾಪಾರಿಗಳು. ಒಬ್ಬ ಬಡವನಿಗೆ ನಿಮ್ಮಲ್ಲಿ ಸೀಟು ಕೋಡಲ್ಲ. ಈವಾಗ ಜಾತಿ ಬಗ್ಗೆ ಮಾತನಾಡುತ್ತಿದ್ದಾರೆ. ಶ್ಯಾಮನೂರು, ಎಂ.ಬಿ. ಪಾಟೀಲ್ ಇಬ್ಬರೂ ಯಾವ ಪಾರ್ಟಿ ಯವರು ಅಂತಾ ಗೊತ್ತಿಲ್ಲ. ಸ್ವಾಮಿಗಳು ಅವರಾಗಿಯೇ ಹೋರಾಟಕ್ಕೆ ಬಂದಿಲ್ಲ. ಸ್ವಾಮೀಜಿಗಳ ಹೋರಾಟ ಪ್ರಾಯೋಜಕತ್ವ. ನಮ್ಮಂತವರು ಕರೆದುಕೊಂಡು ಬಂದಿದ್ದಕ್ಕೆ ಈವಾಗ ಬಂದಿದ್ದಾರೆ ಎಂದು ಹೆಚ್.ವಿಶ್ವನಾಥ್ ಹರಿಹಾಯ್ದರು.

ಮುಂದೆ ಬಾಂಬೆ ಟೀಂನ ಯಾರನ್ನು ಮಂತ್ರಿ ಮಾಡಬೇಡಿ.

ಇದೇ ವೇಳೆ ತಮ್ಮ ಬಾಂಬೆ ಟೀಂ ವಿರುದ್ಧವೂ ವಾಗ್ದಾಳಿ ನಡಸಿದ ಹೆಚ್.ವಿಶ್ವನಾಥ್, ಮುಂದೆ ಬಾಂಬೆ ಟೀಂನ ಯಾರನ್ನು ಮಂತ್ರಿ ಮಾಡಬೇಡಿ ಎಂದು ಹೇಳಿದರು. ಬದಲಾವಣೆಗಾಗಿ ಬೆಂಬಲವನ್ನು ಎಲ್ಲರೂ ನೀಡಿದ್ದರು. ಆದರೆ ಅಧಿಕಾರ ಸಿಕ್ಕ ಮೇಲೆ ಬದಲಾದರು. ಎಲ್ಲರೂ ಯಡಿಯೂರಪ್ಪ ಪುತ್ರ ವಿಜಯೇಂದ್ರ ರೀತಿಯಾದರು. ಕೊಡಿ‌ ಕೊಡಿ ಅನ್ನೋದಕ್ಕೆ ಶುರು ಮಾಡಿದ್ದರು. ಅವರಿಗೆಲ್ಲಾ ಯಡಿಯೂರಪ್ಪ ಸಿಎಂ ಆಗಿರಲಿಲ್ಲ.

ಅವರಿಗೆಲ್ಲಾ ವಿಜಯೇಂದ್ರ ಸಿಎಂ ಆಗಿದ್ದರು. 17 ಜನಕ್ಕೆ ಅಧಿಕಾರ ನೀಡದಿದ್ದರು ಪರವಾಗಿಲ್ಲ. ಅವರು ಎಲ್ಲಿಗೂ ಹೋಗುವುದಿಲ್ಲ. ಹೋದರೆ ಹೋಗಲಿ ರಾಜ್ಯದಲ್ಲಿ ಮತ್ತೆ ಚುನಾವಣೆ ನಡೆಯಲಿ ಎಂದು ಹೆಚ್.ವಿಶ್ವನಾಥ್ ಹೇಳಿದರು.

Key words: mysore-MLC- H.Vishwanath-CM BS yeddyurappa- swamiji’s- Bombay Team