ಬಿಜೆಪಿ ಶಾಸಕರ ಪುತ್ರ ಭ್ರಷ್ಟಾಚಾರದಲ್ಲಿ ತೊಡಗಿ ಸಿಕ್ಕಿ ಬಿದ್ದಿದ್ದಾರೆ: ಇದಕ್ಕೆ ಪ್ರಧಾನಿಯೇ ನೇರ ಹೊಣೆ- ಯತೀಂದ್ರ ಸಿದ್ಧರಾಮಯ್ಯ.

ಮೈಸೂರು,ಮಾರ್ಚ್,4,2023(www.justkannada.in):  ಬಿಜೆಪಿ ಸರ್ಕಾರದ ಶಾಸಕರ ಪುತ್ರ ಭ್ರಷ್ಟಾಚಾರದಲ್ಲಿ ತೊಡಗಿ ಪ್ರತ್ಯಕ್ಷವಾಗಿ ಸಿಕ್ಕಿ ಬಿದ್ದಿದ್ದಾರೆ. ಇದರ ಬಗ್ಗೆ ಯಾರೂ ಚಕಾರ ಎತ್ತಲ್ಲ. ಇದಕ್ಕೆ ಪ್ರಧಾನಿಯೇ ನೇರ ಹೊಣೆ ಎಂದು ಶಾಸಕ ಯತೀಂಧ್ರ ಸಿದ್ಧರಾಮಯ್ಯ ವಾಗ್ದಾಳಿ ನಡೆಸಿದರು.

ಮೈಸೂರಿನಲ್ಲಿ ಮಾತನಾಡಿದ ಶಾಸಕ ಯತೀಂದ್ರ ಸಿದ್ದರಾಮಯ್ಯ ಬಿಜೆಪಿ ಸರ್ಕಾರ ಬ್ರಹ್ಮಾಂಡ ಭ್ರಷ್ಟಾಚಾರದಲ್ಲಿ ಮುಳುಗಿದೆ ಅಂತ ಎಲ್ಲರಿಗೂ ಗೊತ್ತು. 40 ಪರ್ಸೆಂಟ್ ಸರ್ಕಾರ ಅನ್ನೋದು ಜಗಜ್ಜಾಹಿರಾಗಿದೆ. ಕಳೆದ ನಾಲ್ಕು ವರ್ಷಗಳಿಂದಲೂ  ಭ್ರಷ್ಟಾಚಾರ ಮಾಡಿಕೊಂಡು ಬಂದಿದೆ. ಈಗ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ಪ್ರಧಾನಿ ಮೋದಿ,ಅಮಿತ್ ಶಾ ಪ್ರತಿ ರಾಜ್ಯಗಳಲ್ಲೂ ಚುನಾವಣೆ ಬಂದರೆ ಪ್ರಚಾರ ಮಾಡೋದರಲ್ಲಿ ಕಾಲ ಕಳೆಯುತ್ತಾರೆ. ಆಡಳಿತ ಹೇಗೆ ನಡೆಸುತ್ತಾರೋ ಗೊತ್ತಿಲ್ಲ. ಇವರು ಪ್ರಧಾನ ಮಂತ್ರಿ ಗೃಹ ಮಂತ್ರಿಳಾಗುವ ಬದಲು ಪ್ರಚಾರಕರಾಗಿದ್ದಾರೆ. ಕರ್ನಾಟಕದಲ್ಲಿ ಅತಿವೃಷ್ಠಿಯಾಗಿ ಪ್ರವಾಹವಾದಾಗ, ಕೋವಿಡ್ ಸಮಯದಲ್ಲಿ ಸಾವು ನೋವಾದಾಗ ಯಾರು ಬರಲಿಲ್ಲ. ಈಗ ನಾಚಿಕೆ ಇಲ್ಲದೆ ಕಲೆಕ್ಷನ್ ಇದೆ ಅಂತ ಮೇಲಿಂದ ಮೇಲೆ ಬರುತ್ತಾ ಇದ್ದಾರೆ. ಈಗ ಇವರದೇ ಸರ್ಕಾರದ ಶಾಸಕ ಪುತ್ರ ಭ್ರಷ್ಟಾಚಾರದಲ್ಲಿ ತೊಡಗಿ ಪ್ರತ್ಯಕ್ಷವಾಗಿ ಸಿಕ್ಕಿ ಬಿದ್ದಿದ್ದಾರೆ. ಇದರ ಬಗ್ಗೆ ಯಾರೂ ಚಕಾರ ಎತ್ತಲ್ಲ. ಇದಕ್ಕೆ ಪ್ರಧಾನಿಯೇ ನೇರ ಹೊಣೆ ಎಂದು ಆರೋಪಿಸಿದರು.

ಇಂದು ವರುಣ ಕ್ಷೇತ್ರದಲ್ಲಿ ಬಿಜೆಪಿ ರೋಡ್ ಶೋ ವಿಚಾರ ಕುರಿತು ಪ್ರತಿಕ್ರಿಯಿಸಿದ ಯತೀಂದ್ರ ಸಿದ್ಧರಾಮಯ್ಯ, ಕ್ಷೇತ್ರದ ಶಾಸಕನಾಗಿ ಇಂದು ಬಿಜೆಪಿ ಕಾರ್ಯಕ್ರಮ ಇದೆ ಎಂಬ ಮಾಹಿತಿಯೇ ನನಗೆಯೇ ಗೊತ್ತಿಲ್ಲ,ಇನ್ನೂ ಜನಸಾಮಾನ್ಯರಿಗೆ ಎಲ್ಲಿ ಗೊತ್ತಿರಬೇಕು ಎಂದು ವ್ಯಂಗ್ಯವಾಡಿದರು.

ವರುಣ ಕಾಂಗ್ರೆಸ್ ಭದ್ರಕೋಟೆ. ಕ್ಷೇತ್ರ ರಚನೆಯಾದಗಿನಿಂದ ಕಾಂಗ್ರೆಸ್ ಗೆಲ್ಲುತ್ತ ಬಂದಿದೆ. ಎರಡು ಬಾರಿ ನಮ್ಮ ತಂದೆ ಗೆದ್ದಿದ್ದಾರೆ ಒಮ್ಮೆ ನಾನು ಗೆದ್ದಿದ್ದೇನೆ. ಈ ಬಾರಿಯೂ ವರುಣದಲ್ಲಿ  ಕಾಂಗ್ರೆಸ್ ಗೆಲ್ಲಲಿದೆ ಎಂದು ಶಾಸಕ ಡಾ ಯತಿಂದ್ರ ವಿಶ್ವಾಸ ವ್ಯಕ್ತಪಡಿಸಿದರು.

Key words: mysore-MLA-Yathindra siddaramaiah-outrage-bjp