ಯಾರಿಗಾಗಿ ಈ ಓಲೈಕೆ ಸಿದ್ದರಾಮಯ್ಯ ಅವರೇ ?-  ಟ್ವಿಟ್ಟರ್ ನಲ್ಲಿ ಕಾಲೆಳೆದ ಶಾಸಕ ಎಸ್.ಎ ರಾಮದಾಸ್…

ಮೈಸೂರು,ಸೆಪ್ಟಂಬರ್,2,2020(www.justkannada.in): ಡಿ.ಜೆ ಹಳ್ಳಿಯ ಗಲಭೆ ನಡೆದ ಸ್ಥಳಕ್ಕೆ ಸಿದ್ಧರಾಮಯ್ಯ ಭೇಟಿ ನೀಡಿದ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ಶಾಸಕ ಎಸ್.ಎ ರಾಮದಾಸ್ ಟೀಕಿಸಿದ್ದಾರೆ.mysore-mla-sa-ramdas-twitter-siddaramaiah-dj-halli-case

ಡಿ.ಜೆ ಹಳ್ಳಿಯ ಗಲಭೆ ನಡೆದ ವೇಳೆ ಹಾನಿಗೊಳಗಾಗಿರುವ ಜಾಗಕ್ಕೆ ಇಂದು ಸಿದ್ದರಾಮಯ್ಯ  ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಹಾನಿಗೊಳಗಾಗಿರುವ ಅಖಂಡ ಶ್ರೀನಿವಾಸ ಮೂರ್ತಿ ಅವರ ನಿವಾಸ ಮತ್ತು ಪೊಲೀಸ್ ಠಾಣೆಗೆ ಭೇಟಿ ನೀಡಿ ಪರಿಶೀಲಿಸಿದರು.

ಈ ಕುರಿತು ಟ್ವೀಟ್ಟರ್ ನಲ್ಲಿ ಟ್ವೀಟ್ ಮಾಡಿ ಸಿದ್ಧರಾಮಯ್ಯ ಅವರ ಕಾಲೆಳೆದ ಶಾಸಕ ಎಸ್.ಎ ರಾಮದಾಸ್, ಡಿ.ಜೆ ಹಳ್ಳಿಯ ಗಲಭೆ ನಡೆದ ಜಾಗಕ್ಕೆ ಸಿದ್ದರಾಮಯ್ಯ ಅವರು  ಇಂದು ಭೇಟಿ ನೀಡಿದ್ದಾರೆ. ಅವರು ಇನ್ನೂ ಓಲೈಕೆ ರಾಜಕಾರಣ ಮಾಡಲು ಹೊರಟಿದ್ದಾರೆಯೇ ಹೊರತು ತಮ್ಮ ಪಕ್ಷದ ಶಾಸಕ ಅಖಂಡ ಶ್ರೀನಿವಾಸ ಮೂರ್ತಿಗೆ ಈ ರೀತಿ ಆಯಿತಲ್ಲ ಎಂದು ಮರುಕ ವ್ಯಕ್ತ ಪಡಿಸಲಿಲ್ಲ.! ಯಾರಿಗಾಗಿ ಈ ಓಲೈಕೆ ಸಿದ್ದರಾಮಯ್ಯ ಅವರೇ ? ಎಂದು ಪ್ರಶ್ನಿಸಿದ್ದಾರೆ.

Key words: mysore- MLA- SA Ramdas-Twitter- Siddaramaiah  DJ halli -case