ಡಿ.ಜೆ ಹಳ್ಳಿ ಗಲಭೆ ಪ್ರಕರಣ: ಹಾನಿಗೊಳಗಾದ ಪ್ರದೇಶಕ್ಕೆ ಮಾಜಿ ಸಿಎಂ ಸಿದ್ಧರಾಮಯ್ಯ ಭೇಟಿ, ಪರಿಶೀಲನೆ…

ಬೆಂಗಳೂರು,ಸೆಪ್ಟಂಬರ್,2,2020(www.justkannada.in):  ಬೆಂಗಳೂರಿನ ಡಿ.ಜೆ ಹಳ್ಳಿ ಗಲಭೆ ವೇಳೆ ಹಾನಿಗೊಳಗಾಗಿರುವ ಪ್ರದೇಶಕ್ಕೆ ಇಂದು ವಿಧಾನಸಭೆ ವಿಪಕ್ಷ ನಾಯಕ ಸಿದ್ಧರಾಮಯ್ಯ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಸಿದ್ದರಾಮಯ್ಯ ಅವರು ಇಂದು ಡಿ.ಜೆ. ಹಳ್ಳಿಗೆ ಭೇಟಿ ನೀಡಿದರು.  ಗಲಭೆ ಸಂದರ್ಭದಲ್ಲಿ ಹಾನಿಗೊಳಗಾಗಿರುವ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರ ಮನೆ, ಪೊಲೀಸ್ ಠಾಣೆಗೆ ಮಾಜಿ ಸಿಎಂ ಸಿದ್ದರಾಮಯ್ಯ ಅವರು ತೆರಳಿ ಪರಿಶೀಲಿಸಿದರು.dj-halli-riot-case-former-cm-siddaramaiah-visits-mla-akanda-srinivas-murthy-house

ನಂತರ ಡಿಸಿಪಿ ಶರಣಪ್ಪ ಸೇರಿದಂತೆ ಪೊಲೀಸ್ ಅಧಿಕಾರಿಗಳ ಜೊತೆ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಮಾತುಕತೆ ನಡೆಸಿ ಘಟನೆಯ ಬಗ್ಗೆ ವಿವರ ಪಡೆದುಕೊಂಡರು. ಈ ವೇಳೆ ಶಾಸಕರಾದ ರಿಜ್ವಾನ್ ಹರ್ಷದ್, ನಸೀರ್ ಅಹಮದ್, ವೆಂಕಟರಮಣಪ್ಪ ಮತ್ತಿತರರು ಹಾಜರಿದ್ದರು.

Key words: DJ halli-riot case- Former CM –Siddaramaiah- visits – mla –akanda srinivas murthy-house