ಸಿಎಂ ಬಿಎಸ್ ವೈ ಮತ್ತು ಬಿವೈ ವಿಜಯೇಂದ್ರ ವಿರುದ್ಧ ಮತ್ತೆ ವಾಗ್ದಾಳಿ: ರಾಜ್ಯ ಲೂಟಿ ಮಾಡುತ್ತಿರುವ ದುಷ್ಟರ ಸಂಹಾರ ಆಗಬೇಕು ಎಂದ ಯತ್ನಾಳ್.

ಮೈಸೂರು,ಜುಲೈ,5,2021(www.justkannada.in): ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತು ಬಿವೈ ವಿಜಯೇಂದ್ರ ವಿರುದ್ಧ ಪದೇ ಪದೇ ವಾಗ್ದಾಳಿ ನಡೆಸುತ್ತಿದ್ದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಇದೀಗ ಮತ್ತೆ ಗುಡುಗಿದ್ದಾರೆ.jk

ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿದ ಬಳಿಕ ಮಾಧ್ಯಮಗಳ ಜತೆ ಮಾತನಾಡಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ರಾಜ್ಯದಲ್ಲಿ ಅನ್‌ ಲಾಕ್ ಶುರುವಾದ ಹಿನ್ನೆಲೆಯಲ್ಲಿ ಚಾಮುಂಡೇಶ್ವರಿ ದರ್ಶನಕ್ಕೆ ಬಂದಿದ್ದೇನೆ. ರಾಜ್ಯವನ್ನು ಲೂಟಿ ಮಾಡುತ್ತಿರುವ ದುಷ್ಟರ ಸಂಹಾರ ಆಗಬೇಕು. ದುಷ್ಟರ ಸಂಹಾರ ಮಾಡು ಅಂತ ತಾಯಿ ಬಳಿ ಬೇಡಿಕೊಂಡಿದ್ದೇನೆ. ಯಾರು ಅಪಾರ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೋ, ರಾಜ್ಯವನ್ನು ಲೂಟಿ ಮಾಡುತ್ತಿದ್ದಾರೋ, ಅಧಿಕಾರ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೋ ಅವರೆಲ್ಲರೂ ದುಷ್ಟರು. ಅತಿ ಶೀಘ್ರದಲ್ಲೇ ದುಷ್ಟ ಸಂಹಾರ ಆಗುವ ವಿಶ್ವಾಸವೂ ಇದೆ ಎಂದು ತಿಳಿಸಿದರು.

ಹೈಕಮಾಂಡ್ ಕೂಡ ಮುಖ್ಯಮಂತ್ರಿ ಬದಲಾವಣೆಗೆ ಪರಿಶೀಲನೆ ಮಾಡುತ್ತಿದೆ.

ಕೆಟ್ಟವರೊಂದಿಗೆ ಒಳ್ಳೆಯವರೂ ಸೇರಿಕೊಂಡಿದ್ದಾರೆ. ಹೀಗಾಗಿ ಮುಖ್ಯಮಂತ್ರಿ ಬದಲಾವಣೆ ವಿಳಂಬ ಆಗುತ್ತಿದೆ. ಕುರುಕ್ಷೇತ್ರ ಯುದ್ಧದಲ್ಲಿ ಕೌರವರೊಂದಿಗೆ ಭೀಷ್ಮ, ದ್ರೋಣಾಚಾರ್ಯರಂತಹ ಒಳ್ಳೆಯವರೂ ಇದ್ದರು. ಒಮ್ಮೊಮ್ಮೆ ಹೀಗೆಲ್ಲ ಆಗುತ್ತೆ. ಆದರೆ ದುಷ್ಟ ಸಂಹಾರ ಆಗಲೇಬೇಕಲ್ವ ? ಕೆಟ್ಟವರಿಗೆ ಕೊನೆಗಾಲ ಅಂತ ಇದ್ದೇ ಇರುತ್ತೆ. ಅಲ್ಲಿವರೆಗೂ ಕಾಯೋಣ. ಹೈಕಮಾಂಡ್ ಕೂಡ ಮುಖ್ಯಮಂತ್ರಿ ಬದಲಾವಣೆಗೆ ಪರಿಶೀಲನೆ ಮಾಡುತ್ತಿದೆ ಎಂದು ಯತ್ನಾಳ್ ಹೇಳಿದರು.

ಬಿ‌.ವೈ. ವಿಜಯೇಂದ್ರ ವಿರುದ್ಧ ವಾಗ್ದಾಳಿ ನಡೆಸಿದ ಯತ್ನಾಳ್, ಸಿಎಂ ನಿವಾಸ ಕಾವೇರಿ ಹಿಂಭಾಗದಲ್ಲಿ ಗೆಸ್ಟ್‌ಗೌಸ್‌ ಇದೆ. ಇವರ ಎಲ್ಲ ಡೀಲ್‌ ಗಳೂ ಅಲ್ಲೇ ನಡೆಯೋದು. ಸಿಸಿಬಿ ಪೊಲೀಸರು ಅಲ್ಲಿಗೆ ಯಾಕೆ ರೈಡ್ ಮಾಡಲ್ಲ ? ಎಂದು ಆರೋಪಿಸಿದರು.

ಆಗಸ್ಟ್ 15 ನೂತನ ಸಿಎಂ ಧ್ವಜಾರೋಹಣ ಚರ್ಚೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಯತ್ನಾಳ್,  ಅಲ್ಲಿವರೆಗೂ ಯಾಕೆ ಮುಂದುವರಿಸಬೇಕು. ಶೀಘ್ರದಲ್ಲೇ ಸಿಎಂ ಬದಲಾವಣೆ ಮಾಡಬೇಕು‌. ದಿನಕ್ಕೆ ನೂರು ಕೋಟಿ ರೂ. ಲೂಟಿ ಹೊಡೆಯುತ್ತಿದ್ದಾರೆ ಎಂದು ಆರೋಪಿಸಿದರು.

ದಕ್ಷಿಣೆ ಕಾಸಿಗೆ ಆಸೆ ಬಿದ್ದು ಕೆಲ ಮಠಾಧೀಶರು ಸಿಎಂ ಪರ ಮಾತನಾಡುತ್ತಿದ್ದಾರೆ.

ಸಿಎಂ ಪರ ಬ್ಯಾಟ್ ಬೀಸುತ್ತಿರುವ ಮಠಾಧೀಶರ ವಿರುದ್ದವೂ ಕಿಡಿ ಕಾರಿದ ಯತ್ನಾಳ್, ದಕ್ಷಿಣೆ ಕಾಸಿಗೆ ಆಸೆ ಬಿದ್ದು ಕೆಲ ಮಠಾಧೀಶರು ಸಿಎಂ ಪರ ಮಾತನಾಡುತ್ತಿದ್ದಾರೆ. ಲವ್ ಜಿಹಾದ್‌ ತಡೆಯಲು ಮಠಾಧೀಶರು ಮುಂದಾಗಬೇಕು. ಕೆಟ್ಟವರಿಗೆ ಬುದ್ದಿ ಹೇಳುವ ಕೆಲಸ ಮಾಡಬೇಕು. ಅದನ್ನು ಬಿಟ್ಟು ಸಿಎಂ ಬದಲಾವಣೆ ಮಾಡಿದ್ರೆ ಬೀದಿಗೆ ಬರ್ತೀವಿ ಅನ್ನೋದು ಸರಿಯಲ್ಲ. ಸಿಎಂ ಕುಟುಂಬದಿಂದ ಲಿಂಗಾಯತ ಸಮಾಜಕ್ಕೆ ಕೆಟ್ಟ ಹೆಸರು ಬಂದಿದೆ. ಭ್ರಷ್ಟರ ಪರವಾಗಿ ಮಠಾಧೀಶರು ಮಾತನಾಡಬಾರದು‌. ನಿಮಗೆ ಅಷ್ಟೊಂದು ರಾಜಕೀಯ ಹುಚ್ಚು ಇದ್ರೆ ಖಾವಿ ತೆಗೆದು ಖಾದಿ ಧರಿಸಿ ಬನ್ನಿ ಎಂದು ಹರಿಹಾಯ್ದರು.

ENGLISH SUMMARY…

Yatnal’s yet another tirade against BSY and B Y Vijendra
Mysuru, July 5, 2021 (www.justkannada.in): BJP MLA Basanagouda Patil Yatnal has yet again roared against Chief Minister B.S. Yedyurappa and his son B.Y. Vijendra.
He visited the Chamundi Hills today in Mysuru. Speaking to the press persons he said, “I have come to have the darshan of goddess Chamundeshwari following unlocking in the State. People who are looting the State should be punished. I have prayed the goddess to destroy them. All those who are looting people’s money, those who are involved in corruption and are looting the State misusing power, are criminals. I feel the end of such persons will come soon.”
In his reply about change in BJP leadership in the State, he said, “good people are also involved with bad people. Hence, the change of Chief Minister is getting delayed. In Mahabharata also, along with the Kauravas, good people like Bheeshma and Dronacharya were there. Such things will happen sometimes. But one or the other day end of bad people will happen. Let us wait till then. Even the high command is pursuing a change of Chief Minister,” he added.
On the occasion, he expressed his dissatisfaction and ire upon B.Y. Vijendra. “There is a guest house behind CM’s official residence Kaveri. All the dealings will take place there. Though the police know about this, why are they quiet?” he questioned.
Keywords: Basanagouda Patil Yatnal/ BJP MLA/ tirade against CM/ BSY/ B.Y. Vijendra

Key words: mysore –MLA-Basanagowda patil yatnal-BS Yeddyurappa-BY Vijayendra.