ಅವಕಾಶ ಸಿಕ್ಕರೆ ನಾನೂ ಸಿಎಂ ಆಗ್ತೀನಿ- ‘ಕೈ’ ಶಾಸಕ

ಕೊಪ್ಪಳ,ಜುಲೈ,5,2021(www.justkannada.in): ಅವಕಾಶ ಸಿಕ್ಕರೇ ನಾನೂ ಮುಖ್ಯಮಂತ್ರಿಯಾಗುತ್ತೇನೆ ಎಂದು ಕಾಂಗ್ರೆಸ್ ಶಾಸಕ ಅಮರೇಗೌಡ ಬಯ್ಯಾಪುರ ತಮ್ಮ ಆಸೆ ವ್ಯಕ್ತಪಡಿಸಿದ್ದಾರೆ.jk

ಮಾಧ್ಯಮಗಳ ಜತೆ ಇಂದಯ ಮಾತಮನಾಡಿದ ಶಾಸಕ ಅಮರೇಗೌಡ ಬಯ್ಯಾಪುರ, ಇಲ್ಲಿಯವರೆಗೂ ದಲಿತರು ಮುಖ್ಯಮಂತ್ರಿ ಆಗಿಲ್ಲ. ದಲಿತರು ಸಿಎಂ ಆಗಬೇಕೆಂದು ಕೇಳುವದರಲ್ಲಿ ತಪ್ಪಿಲ್ಲ. ಅವಕಾಶ ಸಿಕ್ಕರೆ ನಾನು ಮುಖ್ಯಮಂತ್ರಿ ಆಗುತ್ತೇನೆ ಎಂದರು.

ಕಾಂಗ್ರೆಸ್ ಬಿಟ್ಟು ಬಿಜೆಪಿಗೆ ಹೋಗಿರುವವರು ವಾಪಸ್ಸು ಬಂದರೇ ಪರಿಶೀಲಿಸಿ ಕರೆದುಕೊಳ್ಳಬೇಕು. ಆದರೇ ಪಕ್ಷಕ್ಕೆ ಸೇರ್ಪಡೆಗೊಳ್ಳಲು ಇದುವರೆಗೂ ಯಾರೂ ಅರ್ಜಿ ಹಾಕಿಲ್ಲ. ಯೋಗ್ಯರನ್ನು ಖಂಡಿತವಾಗಿ ಕರೆದುಕೊಳ್ಳುತ್ತೇವೆ. ಕೆಲವರು ಯಾರದ್ದೋ ಮಾತನ್ನು ಕೇಳಿ ಹೋಗಿರುತ್ತಾರೆ  ಎಂದು ಅಮರೇಗೌಡ ಬಯ್ಯಾಪುರ ತಿಳಿಸಿದರು.

Key words: chance – CM-Congress MLA-amaregowda bayyapur