ಬೆಳ್ಳಂಬೆಳಗ್ಗೆ  ಮೈಸೂರು ಮೇಯರ್  ತಸ್ನೀಂ ಸಿಟಿ ರೌಂಡ್ಸ್: ಮಾರುಕಟ್ಟೆ ಪರಿಶೀಲನೆ:  ಸಂಪೂರ್ಣ ಪ್ಲಾಸ್ಟಿಕ್ ನಿಷೇಧಕ್ಕೆ ಸೂಚನೆ…

ಮೈಸೂರು,ಫೆ,15,2020(www.justkannada.in): ಮೈಸೂರು ಮಹಾನಗರ ಪಾಲಿಕೆ ಮೇಯರ್ ತಸ್ನೀ ಇಂದು ಬೆಳ್ಳಂಬೆಳಿಗ್ಗೆಯೇ ಸಿಟಿ ರೌಂಡ್ಸ್ ಹಾಕಿ ಮಾರುಕಟ್ಟೆ ಪರಿಶೀಲನೆ ನಡೆಸಿ ರೈತರು ವ್ಯಾಪಾರಿಗಳ ಜತೆ ಸಭೆ ನಡೆಸಿದರು.

ನಗರದ ಎಂ.ಜಿ ರಸ್ತೆಯ ತರಕಾರಿ ಮಾರುಕಟ್ಟೆಗೆ  ಮೈಸೂರು ಮಹಾನಗರ ಪಾಲಿಕೆ ಅಧಿಕಾರಿಗಳ ಜತೆ ಭೇಟಿ ನೀಡಿದ ಮೇಯರ್ ತಸ್ನೀಂ ಪರಿಶೀಲನೆ ನಡೆಸಿದರು. ಮಾರುಕಟ್ಟೆಯಿಂದ ಬರುತ್ತಿದ್ದ ಕಸದ ಸಮಸ್ಯೆ ಹಾಗೂ ಸಂಚಾರ ಕಿರಿ ಕಿರಿ ಬಗ್ಗೆ ದೂರು ಬಂದಿದ್ದ ಹಿನ್ನಲೆ‌ ಭೇಟಿ ನೀಡಿದ ಮೇಯರ್ ತಸ್ನೀಂ ಮಾರುಕಟ್ಟೆ ರೈತರು,ವ್ಯಾಪಾರಿಗಳ ಜೊತೆ ಸಭೆ ನಡೆಸಿ ಚರ್ಚಿಸಿದರು.

ಇದೇ ವೇಳೆ ಮಾರುಕಟ್ಟೆಯಲ್ಲಿ ಸಂಪೂರ್ಣವಾಗಿ ಪ್ಲಾಸ್ಟಿಕ್ ನಿಷೇಧ ಮಾಡಬೇಕು. ಕಸ ವಿಲೇವಾರಿಗೆ ಪ್ರತ್ಯೇಕ ಸುಂಕ ವಸೂಲಿ ಮಾಡಿ. ಮಾರುಕಟ್ಟೆ ಸಂಘದಿಂದಲೇ ನಿರ್ವಹಣೆ ಮಾಡುವಂತೆ ಅಧಿಕಾರಿಗಳಿಗೆ ಮೇಯರ್ ತಸ್ನೀಂ ಸೂಚನೆ ನೀಡಿದರು. . ಮೇಯರ್ ತಸ್ನೀಂ ಗೆ ಅರೋಗ್ಯ ಅಧಿಕಾರಿ ಡಾ ನಾಗರಾಜ್ ಸೇರಿದಂತೆ ಪಾಲಿಕೆ ಅಧಿಕಾರಿಗಳು ಸಾಥ್ ನೀಡಿದರು.

Key words: Mysore -Mayor -Tasneem -City Rounds – Market