Friday, September 11, 2026

BDA Apartments

Home Crime ‘ಮೆಟ್ರಿಮೋನಿ ವೆಬ್‌ಸೈಟ್‌’ನಲ್ಲಿ ಪರಿಚಿತವಾದ ಉಪನ್ಯಾಸಕನ ವಿರುದ್ಧ ರೇಪ್ ಕೇಸು ದಾಖಲಿಸಿದ ಯುವತಿ..

‘ಮೆಟ್ರಿಮೋನಿ ವೆಬ್‌ಸೈಟ್‌’ನಲ್ಲಿ ಪರಿಚಿತವಾದ ಉಪನ್ಯಾಸಕನ ವಿರುದ್ಧ ರೇಪ್ ಕೇಸು ದಾಖಲಿಸಿದ ಯುವತಿ..

 

ಮೈಸೂರು, ನ.28, 2019 🙁 www.justkannada.in news )  ನಗರದ ಕಾಲೇಜೊಂದರ ಉಪನ್ಯಾಸಕನ ವಿರುದ್ಧ ಮದುವೆಯಾಗುವುದಾಗಿ ನಂಬಿಸಿ ಯುವತಿ ಅತ್ಯಾಚಾರ ಮಾಡಿದ ಆರೋಪ ಕೇಳಿ ಬಂದಿದ್ದು, ಈ ಸಂಬಂಧ ನೊಂದ ಯುವತಿ ಹಾಗೂ ಕುಟುಂಬದವರು ಪೊಲೀಸರಿಗೆ ದೂರು ನೀಡಿದ್ದಾರೆ.
ನಗರದ ಕಾಲೇಜೊಂದರ ಉಪನ್ಯಾಸಕ ಜೆ.ಆರ್.ಸಂದೇಶ್‌ ಎಂಬುವವರ ವಿರುದ್ಧವೇ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿರುವುದು.

ಏನಿದು ಘಟನೆ :

‘ಮೆಟ್ರಿಮೋನಿ ವೆಬ್‌ಸೈಟ್‌’ನಲ್ಲಿ ಪರಿಚಯವಾದ 23 ವರ್ಷದ ಯುವತಿಯೊಬ್ಬರನ್ನು ಮದುವೆಯಾಗುವುದಾಗಿ ನಂಬಿಸಿ ಉಪನ್ಯಾಸಕ ಜೆ.ಆರ್.ಸಂದೇಶ್‌ ಅತ್ಯಾಚಾರ ಮಾಡಿದ್ದಾರೆ. ನೊಂದ ಯುವತಿಯು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಅವಿವಾಹಿತೆಯಾಗಿರುವ ಯುವತಿಯು ‘ಮೆಟ್ರಿಮೋನಿ ವೆಬ್‌ಸೈಟ್‌’ವೊಂದರಲ್ಲಿ ತನ್ನ ‘ಪ್ರೊಫೈಲ್‌’ನ್ನು ಹಾಕಿದ್ದರು. ಇದರಲ್ಲಿದ್ದ ಮೊಬೈಲ್‌ಗೆ ಸಂದೇಶ ಕಳುಹಿಸುವ ಮೂಲಕ ಉಪನ್ಯಾಸಕ ಜೆ.ಆರ್.ಸಂದೇಶ್‌ ತಾನು ಪ್ರತಿಷ್ಠಿತ ಕಾಲೇಜೊಂದರ ಉಪನ್ಯಾಸಕ ಎಂದು ಹೇಳಿ ಪರಿಚಯಿಸಿಕೊಂಡ.

ಬಳಿಕ ಮದುವೆಯಾಗುವುದಾಗಿ ನಂಬಿಸಿ, ಬೆತ್ತಲೆ ಚಿತ್ರ ಕಳುಹಿಸುವಂತೆ ಒತ್ತಡ ಹಾಕಿದ. ಇದಕ್ಕೆ ಮಣಿದ ಯುವತಿ ಚಿತ್ರ ಕಳುಹಿಸಿದ್ದಲ್ಲದೇ ಆತನೊಂದಿಗೆ ಓಡಾಡಿದ್ದಾರೆ. ನಂತರ, ಕಾರಿನಲ್ಲಿ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ ಎಂಬುದು ಆರೋಪ.

ಮರುದಿನ ಬೆಳಿಗ್ಗೆ ಯುವತಿ ಫೋನ್‌ ಮಾಡಿದರೆ ಮದುವೆಯಾಗುವುದಕ್ಕೆ ನಿರಾಕರಿಸಿದ ಎನ್ನಲಾಗಿದೆ, ಇದರಿಂದ ಮನನೊಂದ ಆಕೆ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಬಳಿಕ ಯುವತಿಯ ಪೋಷಕರು ಆರೋಪಿಯನ್ನು ಮನೆಗೆ ಕರೆಸಿ ಮನವೊಲಿಸುವ ಪ್ರಯತ್ನ ನಡೆಸಿದರು.  ಆದರೆ ಈ ವೇಳೆ ಉಪನ್ಯಾಸಕ ಕೊಲೆ ಮಾಡುವ ಬೆದರಿಕೆ ಹಾಕಿದ ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ಯುವತಿ ಪೋಷಕರು ಆರೋಪಿಸಿದ್ದಾರೆ ಎನ್ನಲಾಗಿದೆ.

 

key words : mysore-matrimony.website-rape-case-by-girl-against-lecturer-at-mysore