ಮ್ಯಾನ್ ಹೋಲ್ ತುಂಬಿ ರಸ್ತೆಗೆ ಹರಿದ ಕೊಳಚೆ ನೀರು: ಅಧಿಕಾರಿಗಳು, ಜನಪ್ರತಿನಿಧಿಗಳ ವಿರುದ್ದ ಸ್ಥಳೀಯರ ಆಕ್ರೋಶ…

ಮೈಸೂರು,ಸೆಪ್ಟಂಬರ್,21,2020(www.justkannada.in):  ಮೈಸೂರಿನ ಹುಣಸೂರು ರಸ್ತೆಯ ಪ್ರೀಮಿಯರ್ ಸ್ಟುಡಿಯೋ ಸಿಗ್ನಲ್ ಬಳಿ ಇರುವ ಮ್ಯಾನ್ ಹೋಲ್  ಬಾರಿ ಮಳೆಗೂ ಮುನ್ನವೇ ತುಂಬಿ ಹರಿಯುತ್ತಿದ್ದು ಸ್ಥಳದಲ್ಲಿ ಸಾರ್ವಜನಿಕರು ಮೂಗು ಮುಚ್ಚಿಕೊಂಡು ಓಡಾಡುತ್ತಿರುವ ಪರಿಸ್ಥಿತಿ ನಿರ್ಮಾಣವಾಗಿದೆ.mysore-manhole-filled-sewage-road-outrage

ಹುಣಸೂರು ರಸ್ತೆಯ ಪ್ರೀಮಿಯರ್ ಸ್ಟುಡಿಯೋ ಸಿಗ್ನಲ್ ಬಳಿಯಿರುವ ಮ್ಯಾನ್ ಹೋಲ್  ತುಂಬಿ ರಸ್ತೆಯಲ್ಲಿ ಕೊಳಚೆ ನೀರು ಹರಿಯುತ್ತಿದ್ದು, ಈ ಬಗ್ಗೆ ಪಾಲಿಕೆ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ. ಜತೆಗೆ ಕಳೆದ ಒಂದು ತಿಂಗಳಿನಿಂದಲೂ ಕೊಳಚೆ ನೀರು ರಸ್ತೆಗೆ ಹರಿಯುತ್ತಿದ್ದರೂ ಸ್ಥಳೀಯ ಜನಪ್ರತಿನಿಧಿಗಳು ಮಾತ್ರ ಇತ್ತ ಕಡೆ ಗಮನ ಹರಿಸಿಲ್ಲ ಎಂದು ಸ್ಥಳೀಯರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.mysore-manhole-filled-sewage-road-outrage

ರಸ್ತೆಯಲ್ಲಿ ಕೊಳಚೆ ನೀರು ಹರಿಯುತ್ತಿರುವ ಹಿನ್ನೆಲೆ, ಸ್ಥಳದಲ್ಲಿ ಪಾದಾಚಾರಿಗಳು ಮೂಗು ಮುಚ್ಚಿಕೊಂಡು ಓಡಾಡುತ್ತಿದ್ದು, ಕೂಡಲೇ ಸಮಸ್ಯೆ ಬಗೆಹರಿಸುವಂತೆ ಪಾಲಿಕೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳಿಗೆ ಸ್ಥಳೀಯರು ಮನವಿ ಮಾಡಿದ್ದಾರೆ.

Key words: mysore-Manhole- filled -sewage – road-outrage