ಸರ್ಕಾರಿ ಕಾಲೇಜಿನ ಬಡಮಕ್ಕಳು ಉದ್ಯೋಗ ಮೇಳ ಸದುಪಯೋಗಪಡಿಸಿಕೊಳ್ಳಿ- ಜಂಟಿ ನಿರ್ದೇಶಕ ಲಕ್ಷ್ಮಣ್ ಕುಲಗೋಡ ಕರೆ.

ಮೈಸೂರು,ಫೆಬ್ರವರಿ,8,2023(www.justkannada.in): ಸರ್ಕಾರಿ ಕಾಲೇಜಿನ ಬಡಮಕ್ಕಳು ಜೀವನ ರೂಪಿಸಿಕೊಳ್ಳಲು ಈ ಉದ್ಯೋಗ ಮೇಳ ಅನುಕೂಲ ಮಾಡಿಕೊಟ್ಟಿದೆ. ಇದನ್ನು ಸದುಪಯೋಗಪಡಿಸಿಕೊಳ್ಳುವಂತೆ ಕಾಲೇಜು ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕ ಲಕ್ಷ್ಮಣ್ ಕುಲಗೋಡ ಕರೆ ನೀಡಿದರು.

ಸಮರ್ಥನಂ ಅಂಗವಿಕರ ಸಂಸ್ಥೆ ಮತ್ತು  ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜು, ಮೈಸೂರು ಇವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾದ ಉದ್ಯೋಗ ಮೇಳವನ್ನ ಕಾಲೇಜು ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕ ಲಕ್ಷ್ಮಣ್ ಕುಲಗೋಡ ಉದ್ಘಾಟಿಸಿ ಮಾತನಾಡಿದರು.

ಜೀವನ ರೂಪಿಸಿಕೊಳ್ಳಲು  ಉದ್ಯೋಗ ಮೇಳ ಸಹಕಾರಿ. ಇಂತಹ ಉದ್ಯೋಗಮೇಳಗಳನ್ನ ಸದುಪಯೋಗಪಡಿಸಿಕೊಳ್ಳಬೇಕು. ಸರ್ಕಾರದ ವಿವಿಧ ಸವಲತ್ತುಗಳನ್ನು ಬಳಸಿಕೊಳ್ಳಿ. ಉದ್ಯೋಗಕ್ಕೆ ಅಗತ್ಯವಾದ ಕೌಶಲಗಳನ್ನು ಬೆಳೆಸಿಕೊಳ್ಳಿ ಎಂದು ಲಕ್ಷ್ಮಣ್ ಕುಲಗೋಡ ಕಿವಿಮಾತು ಹೇಳಿದರು.

ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಹಿರಿಯ ಪತ್ರಕರ್ತ ಅಂಶಿ ಪ್ರಸನ್ನ ಕುಮಾರ್,  ಆರ್ಥಿಕ ಭದ್ರತೆಗೆ ಉದ್ಯೋಗ ಮುಖ್ಯ. ಕೆಲಸ ಗಳಿಸಲು ಕೌಶಲ್ಯ ಬೆಳೆಸಿಕೊಳ್ಳಿ. ಉದ್ಯೋಗ ಲಭ್ಯವಿದೆ. ವಿದ್ಯಾರ್ಹತೆ ಜತೆಗೆ ಕೌಶಲ್ಯ ಇದ್ದರೆ ಕೆಲಸ ದೊರೆಯಲಿವೆ ಎಂದು ಸಲಹೆ ನೀಡಿದರು.

Key words: mysore-maharani college- job fair- Joint Director -Laxman Kulgoda