ಸರ್ಕಾರಕ್ಕೆ ಜಮ ಮಾಡಬೇಕಾದ ಹಣ ದುರುಪಯೋಗ: ಗ್ರಾಮ ಲೆಕ್ಕಿಗನನ್ನ ಸಸ್ಪೆಂಡ್ ಮಾಡಿ ಮೈಸೂರು ಡಿಸಿ ಡಾ.ಕೆ.ವಿ ರಾಜೇಂದ್ರ ಆದೇಶ.

ಮೈಸೂರು,ಫೆಬ್ರವರಿ,8,2023(www.justkannada.in): ಸರ್ಕಾರಕ್ಕೆ ಜಮ ಮಾಡಬೇಕಾದ ಕಂದಾಯ ರಶೀತಿಯಲ್ಲಿ ಹಣ ದುರುಪಯೋಗ ಮಾಡಿಕೊಂಡು ಸರ್ಕಾರದ ಬೊಕ್ಕಸಕ್ಕೆ  ಕನ್ನಹಾಕಿದ ಗ್ರಾಮಲೆಕ್ಕಿಗ ಅಂಥೋನಿ ರಾಜ್ ಸುನಿಲ್ಎಂಬುವವರನ್ನ ಮೈಸೂರು ಜಿಲ್ಲಾಧಿಕಾರಿ ಡಾ.ಕೆ.ವಿ ರಾಜೇಂದ್ರ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

ಅಂಥೋನಿ ರಾಜ್ ಸುನಿಲ್, ಟಿ.ನರಸೀಪುರ ತಾಲ್ಲೂಕು ಸೋಸಲೆ ಹೋಬಳಿ, ದೊಡ್ಡಬಾಗಿಲು ವೃತ್ತ ಗ್ರಾಮಲೆಕ್ಕಿಗ ಅಂಥೋನಿ ರಾಜ್ ಸುನಿಲ್ ರನ್ನು ಅಮಾನತು ಮಾಡಲಾಗಿದೆ. ಈ ಹಿಂದೆ ಟಿ.ನರಸೀಪುರ ತಾಲ್ಲೂಕು, ಮೂಗೂರು ಹೋಬಳಿ ಮಾಡ್ರಹಳ್ಳಿ ವೃತ್ತದ ಅಧಿಕ ಪ್ರಭಾರದಲ್ಲಿ ಕರ್ತವ್ಯ ನಿರ್ವಹಿಸಿದ್ದ ಅವಧಿಯಲ್ಲಿ ಮೂಗೂರು ಹೋಬಳಿ, ಮಾಡ್ರಹಳ್ಳಿ ಗ್ರಾಮದ ಸರ್ವೆ ನಂ 74/1, 74/3, 81/2, 23 ಹಾಗೂ 180/1 ರ ಜಮೀನಿಗೆ ಸಂಬಂಧಿಸಿದಂತ ಕಂದಾಯ ಪಾವತಿ ರಶೀತಿಯಲ್ಲಿ ಹೆಚ್ಚಿನ ಶುಲ್ಕವನ್ನು ವಸೂಲಿ ಮಾಡಿರುವುದಾಗಿ ಎಂ.ಕೆ.ಶಂಕರ್ ಗುರು, ಮಾಡ್ರಹಳ್ಳಿ ಗ್ರಾಮ ದವರು ದೂರು ಮನವಿ ಸಲ್ಲಿಸಿರುವ ಮೇರೆಗೆ, ರಶೀತಿ ನೀಡಿರುವುದು ಮತ್ತು ಕಛೇರಿ ಕಂದಾಯ ರಶೀತಿ ಪುಸ್ತಕದಲ್ಲಿ ನಮೂದಿಸಿರುವ ಮೊತ್ತಕ್ಕೂ ವ್ಯತ್ಯಾಸ ಕಂಡು ಬಂದಿತ್ತು.

ಖಾತದಾರರಿಂದ ರೂ:8162/- ಗಳನ್ನು ವಸೂಲಿ ಮಾಡಿ ಸರ್ಕಾರಕ್ಕೆ ರೂ: 440/- ಗಳನ್ನು ಪಾವತಿ ಮಾಡಿ ಸರ್ಕಾರಿ ರಶೀತಿಯನ್ನು ತಿದ್ದುವುದರ ಮೂಲಕ ಸರ್ಕಾರದ ಬೊಕ್ಕಸಕ್ಕೆ ರೂ:7722/- ಗಳನ್ನು ನಷ್ಟ ಉಂಟು ಮಾಡಿರುವುದರಿಂದ ಶಿಸ್ತು ಕ್ರಮ ಜರುಗಿಸುವಂತೆ  ಟಿ.ನರಸೀಪುರ ತಹಸೀಲ್ದಾರ್ ಶಿಫಾರಸ್ಸು ಮಾಡಿದ್ದರು.

ಈ ಸಂಬಂಧ ಅಂಥೋನಿ ರಾಜ್ ಸುನಿಲ್  ರನ್ನು ಅಮಾನತು ಮಾಡಿ ಆದೇಶಿಸಿರುವ ಜಿಲ್ಲಾಧಿಕಾರಿ ಕೆ.ವಿ ರಾಜೇಂಧ್ರ, ಕಂದಾಯ ಪಾವತಿ ರಶೀತಿಯಲ್ಲಿ ಹೆಚ್ಚಿನ ಶುಲ್ಕವನ್ನು ವಸೂಲಿ ಮಾಡಿ, ಸರ್ಕಾರಿ ರಶೀತಿಯನ್ನು ತಿದ್ದುವುದರ ಮೂಲಕ ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟುಮಾಡಿ ಸರ್ಕಾರಿ ಕೆಲಸದಲ್ಲಿ ಕರ್ತವ್ಯಲೋಪವೆಸಗಿರುವುದನ್ನು ಗಂಭೀರವಾಗಿ ಪರಿಗಣಿಸಲಾಗಿದೆ.  ಸರ್ಕಾರದ ಹಣ ದುರುಪಯೋಗ ಪಡಿಸಿಕೊಂಡಿರುವ ಹಾಗೂ ಸರ್ಕಾರಿ ದಾಖಲೆಯನ್ನು ತಿದ್ದಿ ಸರ್ಕಾರಿ ಕೆಲಸದಲ್ಲಿ ಕರ್ತವ್ಯ ಲೋಪವೆಸಗಿರುವ ವಿರುದ್ಧ ಇಲಾಖಾ ವಿಚಾರಣೆ ಕಾಯ್ದಿರಿಸಿ ತಕ್ಷಣದಿಂದಲೇ ಜಾರಿಗೆ ಬರುವಂತೆ ಸರ್ಕಾರಿ ಸೇವೆಯಿಂದ ಅಮಾನತ್ತಿನಲ್ಲಿಟ್ಟು ಆದೇಶಿಸಿದ್ದೇನೆ ಎಂದು ಆದೇಶ ಹೊರಡಿಸಿದ್ದಾರೆ.

Key words: government-money- Mysore DC -KV Rajendra -orders -suspension – village accountant.