ನೆಪ ಮಾತ್ರಕ್ಕೆ ಮೈಸೂರು ಲಾಕ್ ಡೌನ್ !

ಮೈಸೂರು, ಮಾರ್ಚ್ 23, 2020 (www.justkannada.in): ನೆಪ ಮಾತ್ರಕ್ಕೆ ಮೈಸೂರು ಲಾಕ್ ಡೌನ್. ಜನರ ಓಡಾಟ ಎಂದಿನಂತೆ ಇದೆ.

ಕರೋನೊ ಭೀತಿ ಇದ್ದರು ಎಚ್ಚೆತ್ತುಕೊಂಡಿಲ್ಲ ಮೈಸೂರು ಜನತೆ. ತಮ್ಮ ಖಾಸಗಿ ವಾಹನಗಳಲ್ಲಿ ಎಂದಿನಂತೆ ಓಡಾಟ ನಡೆದಿದೆ. ನಗರದ ಸಂತೆ ಪೇಟೆಯಲ್ಲಿ ವ್ಯಾಪರ ವಹಿವಾಟು ಎಂದಿನಂತೆ ನಡೆದಿದೆ.

ಅಗತ್ಯ ವಸ್ತುಗಳ ಮಾರಾಟಕ್ಕೆ ಅನುವು ನೀಡಿರುವ ಸರ್ಕಾರ. ದಿನಸಿಅಂಗಡಿಗಳಲ್ಲಿ ವ್ಯಾಪಾರ ಎಂದಿನಂತೆ ನಡೆದಿದೆ. ಹಾಲು ಹಣ್ಣು ತರಕಾರಿ ಮಳಿಗೆಗಳು ಓಪನ್ ಆಗಿವೆ.

ಉಳಿದಂತೆ ಎಲ್ಲಾ ವ್ಯಾಪರ ವಹಿವಾಟು ಬಂದ್ ಆಗಿದೆ. ಲಾಕ್ ಡೌನ ಅಗಿದ್ದರೂ ಜನತ ಓಡಾಟದಲ್ಲಿ ಅಷ್ಟೇನು ವ್ಯತ್ಯಾಸ ಇಲ್ಲ ಆಗಿಲ್ಲ.