ಆತ್ಮಹತ್ಯೆಗೆ ಶರಣಾದ ಡಾ.ರಾಜ್ ಕುಟುಂಬದ ಆಪ್ತ ಉದ್ಯಮಿ

ಬೆಂಗಳೂರು, ಮಾರ್ಚ್ 23, 2020 (www.justkannada.in): ಡಾ. ರಾಜ್ ಕುಮಾರ್ ಕುಟುಂಬಕ್ಕೆ ತುಂಬಾ ಹತ್ತಿರವಾಗಿದ್ದ ಉದ್ಯಮಿ, ಚಿತ್ರ ನಿರ್ಮಾಣ ಕಪಾಲಿ ಮೋಹನ್ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಬೆಂಗಳೂರಿನ ಪೀಣ್ಯ ಬಸವೇಶ್ವರ ನಿಲ್ದಾಣದ ಸುಪ್ರೀಂ ಹೋಟೆಲ್ ನಲ್ಲಿ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾರೆ. ಸುಪ್ರೀಂ ಹೋಟೆಲ್ ಕಪಾಲಿ ಮೋಹನ್ ಒಡೆತನದ್ದು, ಈ ಹಿಂದೆ ಸಿಸಿಬಿಯಿಂದ ಕಪಾಲಿ ಮೋಹನ್ ಮನೆ ಮೇಲೆ ರೇಡ್ ಮಾಡಲಾಗಿತ್ತು.

ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಸ್ಥಳಕ್ಕೆ ಗಂಗಮ್ಮನಗುಡಿ ಪೊಲೀಸರ ಭೇಟಿ,ಪರಿಶೀಲನೆ ನಡೆಸಿದ್ದಾರೆ. ಡಾ.ರಾಜ್ ಕುಟುಂಬದೊಂದಿಗೆ ಸಾಕಷ್ಟು ಒಡನಾಟ ಇಟ್ಟುಕೊಂಡಿದ್ದ ಮೋಹನ್. ಕಳೆದ ಕೆಲವು ವರ್ಷಗಳಿಂದ ಮಾನಸಿಕವಾಗಿ ನೊಂದಿದ್ದ ಮೋಹನ್.