ಕೆಲಸಕ್ಕೆ ತೆರಳುತ್ತಿದ್ದ ವೇಳೆ ಪೊದೆಯಿಂದ ಹೊರಬಂದು ಹಠಾತ್ ದಾಳಿ ನಡೆಸಿದ ಚಿರತೆ… ಮುಂದೇನಾಯ್ತು..?

ಮೈಸೂರು,ಜು,4,2019(www.justkannada.in): ಒಬ್ಬಂಟಿಯಾಗಿ ಕೂಲಿಕಾರ್ಮಿಕನೋರ್ವ ಕೆಲಸಕ್ಕೆ ತೆರಳುತ್ತಿದ್ದ ವೇಳೆ ಚಿರತೆ ಹಠಾತ್ ದಾಳಿ ನಡೆಸಿದ ಘಟನೆ ಮೈಸೂರು ಜಿಲ್ಲೆ ಹೆಚ್.ಡಿ ಕೋಟೆ ತಾಲ್ಲೂಕಿನಲ್ಲಿ ನಡೆದಿದೆ.

ಮೈಸೂರಿನ ಎಚ್.ಡಿ.ಕೋಟೆ ತಾಲೋಕಿನ ಉದ್ಬೂರು ಕೆರೆಹಾಡಿಯಲ್ಲಿ ಇಂದು ಮುಂಜಾನೆ ಈ ಘಟನೆ ನಡೆದಿದೆ. ನಾಗರಹೊಳೆ ರಾಷ್ಟ್ರೀಯ ಉದ್ಯಾನವನಕ್ಕೆ ಹೊಂದಿಕೊಂಡಿರುವ ಕೆರೆಹಾಡಿಯಲ್ಲಿ ಘಟನೆ ನಡೆದಿದೆ.  ರವಿ (30) ಚಿರತೆ ದಾಳಿಯಿಂದ ಗಾಯಗೊಂಡ ವ್ಯಕ್ತಿ. ರವಿ ಅವರಿಗೆ  ಆಸ್ಪತ್ರೆಯಲ್ಲಿ  ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ರವಿ ಒಬ್ಬಂಟಿಯಾಗಿ  ಕೂಲಿ ಕೆಲಸಕ್ಕೆ ತೆರಳುವ ಸಂದರ್ಭದಲ್ಲಿ  ಪೊದೆಯಿಂದ ಹೊರಬಂದು ಚಿರತೆ ‌ಹಠಾತ್ ದಾಳಿ ನಡೆಸಿದೆ. ಚಿರತೆ ದಾಳಿಯಿಂದ ರವಿ ಬಲ ಭಾಗದ ಕೈ ಮತ್ತು ಎಡಭಾಗದ ಕಾಲಿಗೆ‌ ಗಾಯವಾಗಿದೆ. ಇನ್ನು ಚಿರತೆ ದಾಳಿಯಿಂದ ರವಿ ಅವರು ಕಂಗೆಟ್ಟು ಚೀರಾಡಿ ಚಿರತೆ ಬಂಧನದಿಂದ ಬಿಡಿಸಿಕೊಂಡಿದ್ದಾರೆ. ತಕ್ಷಣ ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಸಿಬ್ಬಂದಿಗಳು ಗಾಯಾಳುವನ್ನ  ಎಚ್.ಡಿ.ಕೋಟೆ ಸಾರ್ವಜನಿಕ ಆಸ್ಪತ್ರೆಗೆ ಸ್ಥಳಾಂತರ ಮಾಡಿದ್ದಾರೆ.

Key words: mysore- Leopard –attack- worker