ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರದಿಂದ ನ.12 ರಂದು ಬೃಹತ್ ಲೋಕ್ ಅದಾಲತ್

ಮೈಸೂರು,ಅಕ್ಟೋಬರ್,14,2022(www.justkannada.in):  ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರದಿಂದ  ನವೆಂಬರ್ ತಿಂಗಳ 12 ರಂದು ಬೃಹತ್ ಲೋಕ್ ಅದಾಲತ್ ಅಯೋಜನೆ ಮಾಡಲಾಗಿದೆ ಎಂದು ಮೈಸೂರು ಜಿಲ್ಲಾ ಸತ್ರ ನ್ಯಾಯಾಧೀಶರಾದ ಎಂ‌ ಎಲ್ ರಘುನಾಥ್ ತಿಳಿಸಿದರು.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಮಾಹಿತಿ ನೀಡಿದ ಮೈಸೂರು ಜಿಲ್ಲಾ ಸತ್ರ ನ್ಯಾಯಾಧೀಶ ಎಂ‌ ಎಲ್ ರಘುನಾಥ್ , ಈ ವರ್ಷದ ಕೊನೆಯ ಲೋಕ್ ಅದಾಲತ್ ಇದಾಗಿದೆ. ರಾಜಿ ಸಂಧಾನದ ಮೂಲಕ ಪ್ರಕರಣಗಳನ್ನು ಇತ್ಯರ್ಥ ಮಾಡುವುದು ನಮ್ಮ ಗುರಿಯಾಗಿದೆ. ಈಗಾಗಲೇ ಅನೇಕ ಪ್ರಕರಣಗಳು ರಾಜಿ ಸಂಧಾನದ ಮೂಲಕ‌ ಇತ್ಯರ್ಥ ಆಗಿವೆ. 38 ಸಾವಿರಕ್ಕೂ ಹೆಚ್ಚು ಪ್ರಕರಣಗಳು ರಾಜಿ ಆಗಿವೆ.

ಮೋಟಾರು ಕಾಯ್ದೆ ಕೇಸ್ ಗಳಲ್ಲಿ ರಾಜಿ ಸಂಧಾನದ ಮೂಲಕ‌‌‌ ಪ್ರಕರಣಗಳು ಇತ್ಯರ್ಥವಾಗಿ ಎರಡು ಕೋಟಿಗೂ ಹೆಚ್ಚು ಹಣ ಸರ್ಕಾರಕ್ಕೆ ಸಂದಾಯವಾಗಿದೆ. ಈ ಕಾರ್ಯಕ್ಕೆ ಮೈಸೂರು ಜಿಲ್ಲಾ ವಕೀಲರ ಸಂಘವು ಸಂಪೂರ್ಣ ಸಹಕಾರ ನೀಡಿದೆ ಎಂದು ಎಂ‌ ಎಲ್ ರಘುನಾಥ್ ತಿಳಿಸಿದರು.

Key words: Lok Adalat – Nov. 12 – Karnataka –State- Legal -Services -Authority