ಲಾ ಗೈಡ್ ಕಾನೂನು ಮಾಸ ಪತ್ರಿಕೆಯ ಕ್ಯಾಲೆಂಡರ್ ಬಿಡುಗಡೆ: ವಕೀಲರು ಜನರ ನಂಬಿಕೆ ಉಳಿಸಿಕೊಳ್ಳುವ ಕೆಲಸ ಮಾಡಬೇಕು ಎಂದು ಸಲಹೆ ನೀಡಿದ ಮಾಜಿ ಸಚಿವ ಎ.ಮಂಜು…

ಮೈಸೂರು,ನ,25,2019(www.justkannada.in): ವಕೀಲರು ಜನರ ನಂಬಿಕೆ ಉಳಿಸಿಕೊಳ್ಳುವ ಕೆಲಸ ಮಾಡಬೇಕು ಎಂದು ಮಾಜಿ ಸಚಿವ ಎ.ಮಂಜು ಸಲಹೆ ನೀಡಿದರು.

ಮೈಸೂರಿನ ಪತ್ರಕರ್ತರ ಭವನದಲ್ಲಿ ಲಾ ಗೈಡ್ ಕಾನೂನು ಮಾಸ ಪತ್ರಿಕೆಯ 2020ನೇ ಸಾಲಿನ ಕ್ಯಾಲೆಂಡರ್ ಹಾಗೂ ಡೈರಿ ಬಿಡುಗಡೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ನಿವೃತ್ತ ನ್ಯಾಯಾಧೀಶರಾದ ಸಿ.ಜೆ ಹುನಗುಂದ ಅವರು ಡೈರಿ ಹಾಗೂ ಕ್ಯಾಲೆಂಡರ್ ಬಿಡುಗಡೆ ಮಾಡಿದರು.

ಕಾರ್ಯಕ್ರಮದಲ್ಲಿ ಗದಗ್ ನ ಮುಂಡರಗಿಯ ಶ್ರೀ ನಿಜಗುಣಾನಂದ ಸ್ವಾಮೀಜಿಯವರ ದಿವ್ಯ ಸಾನ್ನಿಧ್ಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಎ. ಮಂಜು, ಲಾ ಗೈಡ್ ಮಾಸ ಪತ್ರಿಕೆಯ ಸಂಪಾದಕ ವಕೀಲ ವೆಂಕಟೇಶ್ ಸೇರಿದಂತೆ ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು. ಇದೇವೇಳೆ ವಿವಿಧ ಕ್ಷೇತ್ರಗಳಲ್ಲಿನ ಸಾಧಕರಿಗೆ ಸನ್ಮಾನ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಮಾಜಿ ಸಚಿವ ಎ.ಮಂಜು, ನಾನು ಕೂಡಾ ವಕೀಲ ವೃತ್ತಿಯಿಂದ ಬಂದವನು. ವಕೀಲ ವೃತ್ತಿ ಜನ ಸಾಮಾನ್ಯರಿಗೆ ನ್ಯಾಯ ಕೊಡಿಸುವ ವೃತ್ತಿಯಾಗಿದ್ದು, ಕಕ್ಷಿದಾರರು ನಮ್ಮ ಮೇಲೆ ನಂಬಿಕೆ ಇಟ್ಟು ವಕೀಲರ ಬಳಿಗೆ ಬರುತ್ತಾರೆ. ಕೆಲ ವಕೀಲರು ಕೆಲಸ ಆಗದಿದ್ದರೂ ಆಗುತ್ತದೆ ಎಂದು ಭರವಸೆ ನೀಡುವುದುಂಟು. ಆದರೆ ಬಹುತೇಕ ವಕೀಲರು ಕಕ್ಷಿದಾರರಿಗೆ ನ್ಯಾಯ ಕೊಡಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತೇವೆ. ಹೀಗಾಗಿ ವಕೀಲರು ಜನರ ನಂಬಿಕೆಯನ್ನು ಉಳಿಸಿಕೊಳ್ಳುವ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.

Key words: mysore- Law Guide- Launching – 2020- Calendar –former minister- A.Manju