ಹುಣಸೂರು ಬೈ ಎಲೆಕ್ಷನ್: ಬಿಜೆಪಿ ಸೇರ್ಪಡೆ ಮೂಲಕ ಕಾಂಗ್ರೆಸ್ ಬಿಗ್ ಶಾಕ್ ನೀಡಿದ ಪ್ರಭಾವಿ ‘ಕೈ’ ಮುಖಂಡ

ಮೈಸೂರು,ನ,25,2019(www.justkannada.in): ಹುಣಸೂರು ಉಪಚುನಾವಣಾ ಕಣ ರಂಗೇರಿದ್ದು ಚುನಾವಣೆ ಹೊಸ್ತಿಲಲ್ಲೇ ಕಾಂಗ್ರೆಸ್ ಪ್ರಭಾವಿ ಮುಖಂಡನೋರ್ವ ಬಿಜೆಪಿಗೆ ಸೇರ್ಪಡೆಯಾಗುವ ಮೂಲ ಕಾಂಗ್ರೆಸ್‌ಗೆ ಬಿಗ್ ಶಾಕ್ ನೀಡಿದ್ದಾರೆ.

20 ವರ್ಷಗಳಿಂದ ಕಾಂಗ್ರೆಸ್ ಬೆಂಬಲಿಸಿದ್ದ ನಾಯಕ ರಾಜಣ್ಣ ಈಗ ಬಿಜೆಪಿಗೆ ಸೇರ್ಪಡೆಯಾಗಲು ಮುಂದಾಗಿದ್ದಾರೆ. ಪತ್ನಿ ಜಯಲಕ್ಷ್ಮಿ ರಾಜಣ್ಣ ಸದ್ಯ ಜಿ.ಪಂ ಸದಸ್ಯೆಯಾಗಿದ್ದಾರೆ, ಸಿಟಿ ರಾಜಣ್ಣ ಹುಣಸೂರು ಪ್ರಭಾವಿ ಕಾಂಗ್ರೆಸ್ ಮುಖಂಡರಾಗಿದ್ದು, ಇವರು ಹಾಗೂ ಇವರ ಬೆಂಬಲಿಗರು ಬಿಜೆಪಿ ಸೇರ್ಪಡೆಯಾಗುತ್ತಿದ್ದಾರೆ.

2013ರಲ್ಲಿ ವಿಧಾನಸಭೆಗೆ ಸ್ಪರ್ಧಿಸಿ ರಾಜಣ್ಣ 9 ಸಾವಿರ ಮತಗಳನ್ನ ಪಡೆದಿದ್ದರು. ಇದೀಗ ಕಾಂಗ್ರೆಸ್ ನಾಯಕರ ನಡವಳಿಕೆಯಿಂದ ಬೇಸತ್ತಿರುವ ರಾಜಣ್ಣ ಈ ಬಗ್ಗೆ ಬೆಂಬಲಿಗರ ಸಭೆ ನಡೆಸಿ‌ ಅಸಮಾಧಾನ  ಹೊರಹಾಕಿದ್ದಾರೆ. ಸಂಜೆ ಹುಣಸೂರಿನಲ್ಲಿ ನಡೆಯಲಿರುವ ಬಿಜೆಪಿ ಸಭೆಯಲ್ಲಿ ಬೆಂಬಲಿಗರೊಂದಿಗೆ ರಾಜಣ್ಣ ಸೇರ್ಪಡೆಯಾಗಲಿದ್ದಾರೆ.

Key words: hunsur-by Election-Congress- Big Shock –leader-join- bjp