ಮೈಸೂರು, ಮೇ.೦೬,೨೦೨೫: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಅವ್ಯಾಚ ಶಬ್ದಗಳಿಂದ ನಿಂದಿಸಿದ್ದ ಜೈಲು ಸಿಬ್ಬಂದಿ ಅರೆಸ್ಟ್. ಮೈಸೂರು ಕೇಂದ್ರ ಕಾರಾಗೃಹದ ವಾರ್ಡನ್ ಮಧುಕರ್ ಬಂಧನ.
ಮೈಸೂರು ಜಿಲ್ಲೆ, ಪಿರಿಯಾಪಟ್ಟಣ ತಾಲೊಕಿನ ಬೆಟ್ಟದಪುರ ಪೊಲೀಸರಿಂದ ಆರೋಪಿ ವಾರ್ಡನ್ ಬಂಧನ.
ನಿನ್ನೆಯಷ್ಟೆ ಆರೋಪಿ ಮಧುಕರ್ ಕುಡಿತ ಮತ್ತಿನಲ್ಲಿ 5.33 ನಿಮಿಷಗಳ ವೀಡಿಯೋ ಮಾಡಿ ಸಿಎಂ ಸಿದ್ದರಾಮಯ್ಯ ವಿರುದ್ಧ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದ. ಇದು ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡಿ ಮುಜುಗರ ಉಂಟು ಮಾಡಿತ್ತು.
ಏಪ್ರಿಲ್ 28ರಂದು ಮಾಡಲಾಗಿರುವ ಈ ವೀಡಿಯೋದಲ್ಲಿ ಆರೋಪಿ ಮಧುಕರ್, ಬೆಳಗಾವಿಯ ಘಟನೆ ಉಲ್ಲೇಖಿಸಿ ಸಿಎಂ ಅವರನ್ನು ನಿಂದಿಸಿದ್ದ. ಈ ವಿಡಿಯೋ ಪ್ರಸಾರದ ಬಳಿಕ ಮಧುಕರ್‌ನನ್ನು ಸಸ್ಪೆಂಡ್ ಮಾಡಲಾಗಿತ್ತು. ಇಲಾಖೆ ವಿಚಾರಣೆ ಕಾಯ್ದಿರಿಸಿ ಅಮಾನತು ಮಾಡಲಾಗಿತ್ತು.
ಈಗ ಬೆಟ್ಟದಪುರ ಪೊಲೀಸರಿಂದ ಆರೋಪಿ ಬಂಧನ. ಎಕ್ಸ್ ಆರ್ಮಿ ಮ್ಯಾನ್ ಹಾಗೂ ಸದ್ಯ ಮೈಸೂರು ಜೈಲ್ ವಾರ್ಡನ್ ಆಗಿರುವ ಮಧುಕುಮಾರ್ ರಿಂದ ವಿಡಿಯೋ. ಬೆಳಗಾವಿ ಸಮಾವೇಶದ ವೇಳೆ ಸಿಎಂ ಸಿದ್ದರಾಮಯ್ಯ ಅವರು ಎಎಸ್ಪಿಯನ್ನು ನಿಂದಿಸಿ ಕೈ ಎತ್ತಿದನ್ನ ಖಂಡಿಸಿ ವಿಡಿಯೋ ಮಾಡಿದ್ದ.
KEY WORDS: Jail staff arrested, derogatory remarks, Chief Minister Siddaramaiah, Mysuru Central Jail Warden, Madhukar arrested.
Jail staff arrested for making derogatory remarks against Chief Minister Siddaramaiah. Mysuru Central Jail Warden Madhukar arrested.