ಮೈಸೂರು: ಲಂಚ ಸ್ವೀಕರಿಸುವಾಗ ಎಸಿಬಿ ಬಲೆಗೆ ಬಿದ್ದ ಗೃಹರಕ್ಷಕ ದಳದ ಕಮಾಂಡೆಂಟ್..

ಮೈಸೂರು,ಆ,28,2019(www.justkannada.in): ಲಂಚ ಸ್ವೀಕರಿಸುವ ವೇಳೆ ಗೃಹರಕ್ಷಕ ದಳದ ಕಮಾಂಡೆಂಟ್ ಎಸಿಬಿ ಬಲೆಗೆ ಬಿದ್ದಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.

ಹೆಚ್.ಎಸ್.ಕುಮಾರ್ ಲಂಚ ಸ್ವೀಕರಿಸುವಾಗಿ ಸಿಕ್ಕಿಬಿದ್ದ ಅಧಿಕಾರಿ. ಗೃಹರಕ್ಷಕರನ್ನು ಕರ್ತವ್ಯಕ್ಕೆ ನಿಯೋಜಿಸಲು ಕೆ.ಆರ್.ನಗರದ ಈರಣ್ಣೇಗೌಡ ಎಂಬುವವರಿಗೆ ಕುಮಾರ್ ಲಂಚಕ್ಕೆ ಒತ್ತಾಯಿಸಿದ್ದರು. ಈ ನಡುವೆ ಈರಣ್ಣೇಗೌಡರಿಂದ ಲಂಚ ಪಡೆಯುವ ವೇಳೆ ಅಧಿಕಾರಿ ಕುಮಾರ್  ಎಸಿಬಿ ಬಲೆಗೆ ಬಿದ್ದಿದ್ದಾರೆ.

3 ಸಾವಿರ ರೂ ಲಂಚದ ಹಣದ ಸಮೇತ ಸಿಕ್ಕಿಬಿದ್ದಿದ್ದು, ಮೈಸೂರಿನ ಎಸಿಬಿ ಪೊಲೀಸರು ಅಧಿಕಾರಿ ಕುಮಾರ್ ರನ್ನ  ಬಂಧಿಸಿದ್ದಾರೆ.

Key words: Mysore- Home Guard- Commandant ACB- trap -bribes.