Thursday, August 13, 2026

BDA Apartments

Home Front Page ಎಚ್ ಡಿ ಕೋಟೆ ಪಟ್ಟಣದಲ್ಲಿ ಔಷಧಿ ಸಿಂಪಡಣೆ: ಎರಡು ದಿನಗಳ ಕಾಲ ಅಂಗಡಿ‌ ಮುಂಗಟ್ಟು ಬಂದ್…

ಎಚ್ ಡಿ ಕೋಟೆ ಪಟ್ಟಣದಲ್ಲಿ ಔಷಧಿ ಸಿಂಪಡಣೆ: ಎರಡು ದಿನಗಳ ಕಾಲ ಅಂಗಡಿ‌ ಮುಂಗಟ್ಟು ಬಂದ್…

ಮೈಸೂರು,ಜು,2,2020(www.justkannada.in):  ಎಚ್ ಡಿ ಕೋಟೆಯಲ್ಲಿ ಪೋಲಿಸರಿಗೆ ಕೋರೋನಾ ಸೊಂಕು ದೃಢ ಹಿನ್ನೆಲೆ, ಎಚ್ ಡಿ ಕೋಟೆ ಪಟ್ಟಣದಲ್ಲಿ ಔಷಧಿ ಸಿಂಪಡಣೆ ಮಾಡಲಾಗಿದ್ದು ಎರಡು ದಿನಗಳ ಕಾಲ ಸ್ವಯಂ ಪ್ರೇರಿತವಾಗಿ ಅಂಗಡಿ‌ ಮುಂಗಟ್ಟು ಬಂದ್ ಆಗಲಿವೆ.

ಹೆಚ್.ಡಿ ಕೋಟೆಯಲ್ಲಿ ಸರ್ಕಲ್ ಇನ್ಸ್ ಪೆಕ್ಟರ್ ಗೆ ಕೊರೋನಾ ಸೋಂಕು ತಗುಲಿದೆ. ಹೀಗಾಗಿ ಪಟ್ಟಣದಲ್ಲಿ ಔಷಧಿ ಸಿಂಪಡಣೆ ಮಾಡಲಾಗಿದ್ದು ಈ ಹಿನ್ನೆಲೆ ಮುಂಜಾಗ್ರತಾ ದೃಷ್ಟಿಯಿಂದ ಎರಡು ದಿನಗಳ ಕಾಲ ಸ್ವಯಂ ಪ್ರೇರಿತವಾಗಿ ಅಂಗಡಿ‌ ಮುಂಗಟ್ಟು ಬಂದ್ ಮಾಡಲು ವರ್ತಕರು ನಿರ್ಧರಿಸಿದ್ದಾರೆ. ಎರಡು ದಿನದ ಬಳಿಕ ಅಂಗಡಿ ಮುಂಗಟ್ಟು ಓಪನ್ ಮಾಡಲು  ತೀರ್ಮಾನಿಸಿದ್ದಾರೆ.mysore-hd-kote-spraying-two-days-bandh

ಸೋಂಕಿತ ಪೊಲೀಸ್ ಸಿಬ್ಬಂದಿ ಕೆಂಪೆಗೌಡ ಜಯಂತಿಯಂದು ವೇದಿಕೆ ಹಂಚುಕೊಂಡಿದ್ದರು. ಸೋಂಕಿತ ಪೋಲಿಸ್ ಸಂಪರ್ಕದಲ್ಲಿದ್ದ ಪೋಲಿಸರು ಹಾಗೂ ಇತರ ವ್ಯಕ್ತಿಗಳ ಸ್ವಾಬ್ ಟೆಸ್ಟ್ ಗೆ ಆರೋಗ್ಯ ಇಲಾಖೆ ಕಳುಹಿಸಿದೆ. ಇದೀಗ ಎಚ್ ಡಿ ಕೋಟೆಯಲ್ಲಿ  ಕೊರೋನಾ ಆತಂಕ ಹೆಚ್ಚಾಗಿದೆ.

Key words: mysore- HD kote- spraying –  two days-bandh