ಮೈಸೂರು,ಜುಲೈ,17,2025 (www.justkannada.in): ಸಿಎಂ ಸಿದ್ದರಾಮಯ್ಯ ಅವರ ತವರು ಜಿಲ್ಲೆ ಮೈಸೂರು ನಂಜನಗೂಡು ತಾಲ್ಲೂಕಿನ ಮಲ್ಕುಂಡಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕೊಠಡಿಗಳು ಶಿಥಿಲಗೊಂಡಿದ್ದು ಕಟ್ಟಡ ಬೀಳುವ ಭೀತಿಯಲ್ಲೇ ಮಕ್ಕಳು ಪಾಠ ಕೇಳುವ ದುಸ್ಥಿತಿ ಎದುರಾಗಿದೆ.
ಮಳೆ ಬಂದಾಗಲೆಲ್ಲಾ ಸೋರುವ ನೀರಿನಲ್ಲೇ ಮಕ್ಕಳು ಕುಳಿತುಕೊಂಡು ಪಾಠ ಕೇಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಸರ್ಕಾರಿ ಶಾಲೆಯಲ್ಲಿ 220 ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದು, ಈ ಪೈಕಿ ಬಹುತೇಕರು ಬಡ ಕುಟುಂಬದ ಮಕ್ಕಳಾಗಿದ್ದಾರೆ.
ಇನ್ನು ಕಳೆದ 30 ವರ್ಷಗಳ ಹಿಂದೆ ಈ ಶಾಲಾ ಕಟ್ಟಡವನ್ನ ನಿರ್ಮಾಣ ಮಾಡಲಾಗಿದ್ದು, ಇರುವ ಕಟ್ಟಡಗಳ ಪೈಕಿ 4 ಕೊಠಡಿಗಳು ಸಂಪೂರ್ಣ ಶಿಥಿಲಗೊಂಡಿವೆ. ಸದ್ಯ ಈಗ ಮಳೆ ಬಂದರೆ ಕೊಠಡಿಯ ಮೇಲ್ಚಾವಣಿ ನೀರಿನಿಂದ ಸೋರುತ್ತಿದೆ. ಮಳೆ ಬಂದಾಗಲೂ ಶಿಥಿಲಗೊಂಡಿರುವ ಕೊಠಡಿಯಲ್ಲೇ ಮಕ್ಕಳು ಪಾಠ ಕೇಳುತ್ತಿದ್ದು ಈ ಬಗ್ಗೆ ಅಧಿಕಾರಿಗಳಿಗೆ ಮನವಿ ಮಾಡಿದರೂ ಯಾವುದೇ ಸ್ಪಂದನೆಯಿಲ್ಲ. ಈಗಲಾದರೂ ಶಾಲೆಯ ಕೊಠಡಿ ದುರಸ್ತಿ ಸರಿಪಡಿಸುವಂತೆ ಮಕ್ಕಳು, ಅವರ ಪೋಷಕರ ಹಾಗೂ ಗ್ರಾಮಸ್ಥರು ಆಗ್ರಹಿಸಿದ್ದಾರೆ.
Key words: Mysore, Government school, rooms, Dilapidated