Sunday, September 13, 2026

BDA Apartments

ಭೀಕರ ಅಪಘಾತದಲ್ಲಿ ಐವರು ದುರ್ಮರಣ BDA JK_Adv BDA Adv
Home Crime ಭೀಕರ ಅಪಘಾತದಲ್ಲಿ ಐವರು ದುರ್ಮರಣ

ಭೀಕರ ಅಪಘಾತದಲ್ಲಿ ಐವರು ದುರ್ಮರಣ

ಚಿತ್ತೂರು,ಮಾರ್ಚ್,4,2026 (www.justkannada.in): ಹಿಂಬದಿಯಿಂದ ಲಾರಿಗೆ ಕಾರು ಡಿಕ್ಕಿಯಾಗಿ ಬೆಂಗಳೂರು ಮೂಲದ ಐವರು ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ.

ಆಂಧ್ರಪ್ರದೇಶದ  ಚಿತ್ತೂರು ಜಿಲ್ಲೆಯ ಪಲಮನೇರು ಬಳಿ ಈ ದುರ್ಘಟನೆ ಸಂಭವಿಸಿದೆ.   ಬೆಂಗಳೂರು ಮೂಲದ ಮೋಹನ್ ದಾಸ್ (71), ನಾಗರಾಜ್ (61), ಕುಸುಮಾ (61), ಜಯಂತಿ (59), ಪೂಜಾ (33) ಮೃತಪಟ್ಟವರು ಎಂದು ಗುರುತಿಸಲಾಗಿದೆ.

ಮೃತರು ಕಾರಿನಲ್ಲಿ ಬೆಂಗಳೂರಿನಿಂದ ತಿರುಪತಿಗೆ ತೆರಳುತ್ತಿದ್ದರು ಎನ್ನಲಾಗಿದೆ.  ಸುದ್ದಿ ತಿಳಿಯುತ್ತಿದ್ದಂತೆಯೇ ಪಲಮನೇರು ಪೊಲೀಸರು ಸ್ಥಳಕ್ಕೆ ಧಾವಿಸಿ, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ.  ಪಲಮನೆರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.

Key words: Five death, horrific, accident