ಸಾರ್ವಜನಿಕರನ್ನು ನಂಬಿಸಿ ವಂಚನೆ ಮಾಡಿದ್ದ ಆರೋಪಿಗಳು ಪೊಲೀಸರ ಬಲೆಗೆ.

ಮೈಸೂರು. ಜುಲೈ.19,2021 ( www.justkannad.in) ಸಾರ್ವಜನಿಕರನ್ನು ನಂಬಿಸಿ ವಂಚನೆ ಮಾಡಿದ್ಧ ಸೌಮ್ಯ ಹಾಗೂ ಪ್ರಸಾದ್ ಎಂಬ ಆರೋಪಿಗಳು ಪೊಲೀಸರ ಬಲೆಗೆ ಸಿಲುಕಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್ ಚೇತನ್ ಅವರು ಹೇಳಿದ್ದಾರೆ.jk

ಮೈಸೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ  ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್ ಚೇತನ್,  ಗಿರವಿ ಇಟ್ಟಿರುವ ಚಿನ್ನವನ್ನು ಖಾಸಗಿ ಗೋಲ್ಡ್ ಪೈನಾನ್ಸ್ ಕಂಪನಿಯಲ್ಲಿ ಇಡುವುದಾಗಿ ನಂಬಿಸಿ ಹಣ ಪಡೆದುಕೊಂಡು ಪರಾರಿಯಾಗಿದ ಮದ್ದೂರು ತಾಲೂಕಿನ ಸೋಮನಹಳ್ಳಿ ಗ್ರಾಮದ ಸೌಮ್ಯ (29) ಹಾಗೂ ಗುಂಡ್ಲುಪೇಟೆಯ ಪ್ರಸಾದ್ (30) ಎಂಬುವವರನ್ನು ಹಿಡಿಯುವಲ್ಲಿ ಸಾಲಿಗ್ರಾಮದ ಪೊಲೀಸರು ಯಶಸ್ವಿಯಾಗಿದ್ದಾರೆ ಎಂದರು.

ಖಾಸಗಿ ಫೈನಾನ್ಸ್ ಕಂಪನಿಯ ಎಕ್ಸಿಕ್ಯೂಟಿವ್ ಸುರೇಶ್ ಗೆ ಕರೆ ಮಾಡಿ ಸಂಪರ್ಕಿಸಿದ್ದ ಸೌಮ್ಯ, ಗಿರವಿ ಇಟ್ಟಿರುವ ಚಿನ್ನವನ್ನು ತಮ್ಮ ಕಂಪನಿಯಲ್ಲಿ ಇಡುವುದಾಗಿ ನಂಬಿಸಿ ಫೈನಾನ್ಸ್ ಕಂಪನಿಯಿಂದ ಸುಮಾರು 1.75 ಲಕ್ಷ ಹಣ ಪಡೆದುಕೊಂಡು ನಂತರ ಮೊಬೈಲ್ ಸ್ಥಗಿತಗೊಳಿಸಿ ಸ್ಥಳದಿಂದ ಪರಾರಿಯಾಗಿದ್ದಾಳೆ.

ಬಳಿಕ ಕಂಪನಿಯ ಎಕ್ಸಿಕ್ಯೂಟಿವ್ ಸುರೇಶ್ ಸಾಲಿಗ್ರಾಮ ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಬೆನ್ನಲ್ಲೆ ತನಿಖೆ ಆರಂಭಿಸಿದ್ದ ಪೊಲೀಸರು ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆಡುಕೊಂಡ ನಂತರ  ಇವರಿಬ್ಬರ ಮೇಲೆ ವಿವಿಧ ಪೊಲೀಸ್ ಠಾಣೆಗಳಲ್ಲಿ 4 ವಂಚನೆ ಪ್ರಕರಣಗಳು ದಾಖಲಾಗಿವೆ ಎಂದು ತಿಳಿಸಿದರು.

Key words:  mysore-fraud-two- accused- arrest