ಬಿಎಸ್ ವೈ ಬದಲು ಸಿದ್ದರಾಮಯ್ಯರನ್ನ ಮುಖ್ಯಮಂತ್ರಿ ಎಂದ ಚಲುವರಾಯಸ್ವಾಮಿ: ಕೆಆರ್ ಎಸ್ ನಲ್ಲಿ ಬಿರುಕು ವಿಚಾರ ಕುರಿತು ಪ್ರತಿಕ್ರಿಯಿಸಿದ್ದು ಹೀಗೆ.

ಮೈಸೂರು,ಜುಲೈ,7,2021(www.justkannada.in): ಮಾಜಿ ಸಚಿವ ಚಲುವರಾಯಸ್ವಾಮಿ ಅವರು ಬಿಎಸ್ ಯಡಿಯೂರಪ್ಪ ಬದಲು ಸಿದ್ದರಾಮಯ್ಯರನ್ನ ಮುಖ್ಯಮಂತ್ರಿ ಎಂದು ಹೇಳಿ ನಂತರ ತಿದ್ದಿಕೊಂಡ ಪ್ರಸಂಗ ನಡೆಯಿತು. jk

ಕೆ.ಆರ್.ಎಸ್ ವಿಚಾರವಾಗಿ ಮಾತನಾಡುವ ವೇಳೆ ಮಾಜಿ ಸಚಿವ ಚಲುವರಾಯಸ್ವಾಮಿ,  ಬಿಎಸ್ ವೈ ಬದಲು ಸಿದ್ಧರಾಮಯ್ಯರನ್ನ ಸಿಎಂ ಎಂದರು.ತಕ್ಷಣವೇ ಯಡಿಯೂರಪ್ಪ ನವರು ಮುಖ್ಯಮಂತ್ರಿಗಳು ಎಂದು ತಿದ್ದಿಕೊಂಡರು. ನಮಗೆ ಈಗಲೂ ಸಿದ್ದರಾಮಯ್ಯ ಸಿಎಂ ಎನ್ನುವ ಮಾತು ಬರುತ್ತಿದೆ ಎಂದರು.

ಇನ್ನು ಕೆಆರ್ ಎಸ್ ಡ್ಯಾಂ ಬಿರುಕು ವಿಚಾರ ಕುರಿತು ಪ್ರತಿಕ್ರಿಯಿಸಿದ ಮಾಜಿ ಸಚಿವ ಚಲುವರಾಯಸ್ವಾಮಿ, ಕನ್ನಂಬಾಡಿ ಬಿರುಕು ಬಿಟ್ಟಿದ್ಯಾ ಇಲ್ವಾ, ಇನ್ನೂ ಗೊಂದಲ ಬಗೆಹರಿದಿಲ್ಲ.ಇಂಜಿನಿಯರ್ ವಿಜಯ್ ಕುಮಾರ್ ಬಿರುಕು ಇಲ್ಲ ಅಂತ ಹೇಳಿದ್ದಾರೆ.ಸಂಸದೆ ಸುಮಲತಾ ಬಿರುಕು ಇದೆ ಅಂತ ಹೇಳಿದ್ದಾರೆ. ನೀರಾವರಿ ಇಲಾಖೆ ಸಿಎಂ ಬಳಿಯೇ ಇದೆ. ಹಾಗಾಗಿ ಕನ್ನಂಬಾಡಿ ಬಿರುಕು ಬಿಟ್ಟಿದೆಯಾ ಇಲ್ಲವಾ ಎಂಬುದನ್ನ ಸಿಎಂ ಯಡಿಯೂರಪ್ಪ ಸ್ಪಷ್ಟ ಪಡಿಸಬೇಕು ಎಂದು ಆಗ್ರಹಿಸಿದರು.

ಮಂಡ್ಯದಲ್ಲಿ ಗಣಿ ಪ್ರದೇಶಗಳಿಗೆ ಸಂಸದೆ ಸುಮಲತಾ ಅಂಬರೀಶ್ ಭೇಟಿ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸುಮಲತಾ ಅಂಬರೀಶ್, ಸಂಸದೆ ಸುಮಲತಾ ಅಂಬರೀಶ್ ಭೇಟಿಯನ್ನ ಹಲ್ಲೆಗೆಳೆದಿದ್ದ ಜೆಡಿಎಸ್ ನಾಯಕರ ಹೇಳಿಕೆಗೆ ತಿರುಗೇಟು ನೀಡಿದರು.

ಯಾರು ಏನು ಕೆಲಸ ಮಾಡಬೇಕು ಎಂಬುದನ್ನ ನಾನು ಹೇಳುವಂತದಲ್ಲ. ಯಾರ್ಯಾರು ಏನು ಕೆಲಸ ಮಾಡಬೇಕು ಅದೇ ಕೆಲಸ ಮಾಡೊದು ಸೂಕ್ತ. ಅವರವರೇ ತೀರ್ಮಾನ ಮಾಡಿಕೊಂಡು ಅವರ ವ್ಯಾಪ್ತಿ ಅನುಸಾರ ಕೆಲಸ ಮಾಡಲಿ. ಮಂಡ್ಯದಲ್ಲಿ ಮಾಡೊದಿಕ್ಕೆ ಸಾಕಷ್ಟು ಕೆಲಸ ಇದೆ. ಅದನ್ನ ಬಿಟ್ಟು ಸಂಸದರು ಹಾಗೂ ಶಾಸಕರು ಒಬ್ಬರಮೇಲೊಬ್ಬರು ಆರೋಪ ಮಾಡುವುದು ಸರಿಯಲ್ಲ. ಇದರಿಂದ ಜಿಲ್ಲೆಯ ಅಭಿವೃದ್ಧಿ ಕುಂಠಿತ ಆಗುತ್ತೆ ಎಂದು ಮಾಜಿ ಸಚಿವ ಚಲುವರಾಯಸ್ವಾಮಿ ಆತಂಕ ವ್ಯಕ್ತಪಡಿಸಿದರು.

ಕನ್ನಂಬಾಡಿಗೆ ತೊಂದರೆ ಆಗುತ್ತೆ ಅನ್ನೊ ಕಾರಣಕ್ಕೆ 20ಕಿ.ಲೋ ವ್ಯಾಪ್ತಿಯಲ್ಲಿ ಗಣಿಗಾರಿಕೆ ನಿಲ್ಲಿಸಲಾಗಿದೆ. ಶ್ರೀರಂಗಪಟ್ಟಣ ಹಾಗೂ ಪಾಂಡವಪುರ ವ್ಯಾಪ್ತಿಯಲ್ಲಿ ಗಣಿಗಾರಿಕೆ ನಿಲ್ಲಿಸಲಾಗಿದೆ. ಸ್ಥಳದಲ್ಲಿ ಪೊಲೀಸ್  ಕಾವಲು ಹಾಕಿದ್ದಾರೆ ಎಂದರೆ ಕದ್ದುಮುಚ್ಚಿ ಗಣಿಗಾರಿಕೆ ನಡೆಯುತ್ತಿದೆ ಎಂದರ್ಥ. ಸಾಕಷ್ಟು ವರ್ಷಗಳಿಂದ ಪ್ರಭಾವಿಗಳು ಅಲ್ಲಿ ಗಣಿಗಾರಿಕೆ ಮಾಡ್ತಿದ್ದಾರೆ. ನಿಷೇಧ ಮಾಡಿರೋದು ತಾತ್ಕಾಲಿಕವಾ ಅಥವಾ ಸಂಪೂರ್ಣವಾ ಅನ್ನೊದನ್ನ ತಿಳಿಸಬೇಕು. ಟ್ರಯಲ್ ಬ್ಲಾಸ್ಟಿಂಗ್ ಸೇರಿದಂತೆ ಯಾವ ಪ್ರಮಾಣದ ಗಣಿಗಾರಿಕೆ ನಡಸಬೇಕು ಅನ್ನೊದರ ಬಗ್ಗೆ ಸಿಎಂ ತೀರ್ಮಾನ ಮಾಡಬೇಕು ಎಂದು ಹೇಳಿದರು.

Key words: mysore-former minister- Chaluvarayaswamy -chief minister – Siddaramaiah- instead of BS yeddyurappa