ಆನೆ ಹೋಗುತ್ತಿದ್ರೆ ನಾಯಿ ಬೊಗಳುತ್ತವೆ, ಇದಕ್ಕೆ ಉತ್ತರ ಕೊಡೋಕೆ ಆಗುತ್ತಾ…?- ಶಾಸಕ ಜಮೀರ್ ಗೆ ಹೆಚ್.ಡಿ ಕುಮಾರಸ್ವಾಮಿ ತಿರುಗೇಟು.

ಮೈಸೂರು,ಅಕ್ಟೋಬರ್,24,2021(www.justkannada.in):  ಹೆಚ್.ಡಿಕೆ ಬಿಜೆಪಿಯಿಂದ ಸೂಟ್ ಕೇಸ್ ತೆಗೆದುಕೊಂಡು ಅಭ್ಯರ್ಥಿ ಹಾಕಿದ್ದಾರೆ ಎಂದು ಆರೋಪ ಮಾಡಿದ ಕಾಂಗ್ರಸ್ ಶಾಸಕ ಜಮೀರ್ ಅಹ್ಮದ್ ಖಾನ್ ಗೆ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.

ಈ ಕುರಿತು ಮೈಸೂರಿನಲ್ಲಿ ಮಾತನಾಡಿದ ಹೆಚ್.ಡಿ ಕುಮಾರಸ್ವಾಮಿ, ಆನೆ ಹೋಗುತ್ತಿದ್ರೆ ನಾಯಿ ಬೊಗಳುತ್ತವೆ  ಇದಕ್ಕೆ ಉತ್ತರ ಕೊಡೋಕೆ ಆಗುತ್ತಾ. ನಾನು ಕಂಡವರ ಸೂಟ್ ಕೇಸ್ ಗೆ ಕೈ ಹಾಕಿದ್ದೇನೆ ಅಂತ ಇಟ್ಟುಕೊಳ್ಳೊಣಾ. ಆದರೆ ದೇವೆಗೌಡರ ಸೂಟ್ ಕೇಸ್ ತೆಗೆದುಕೊಳ್ಳೋಕೆ ಬಂದಿದ್ದಾರೆ ಅಂತಾರೆ. ನಾಲಿಗೆ ಇದೆ ಅಂತ ಹೊಲಸು ಮಾತನಾಡಿದ್ರೆ ಅದಕ್ಕೆ ಉತ್ತರ ಕೊಡೋಕೆ ಆಗುತ್ತಾ ಎಂದು ಚಾಟಿ ಬೀಸಿದರು.

ನನ್ನ ಲೆವಲ್ಲಿಗೆ ಜಮೀರ್ ಬಗ್ಗೆ ಮಾತನಾಡಬೇಕಾ? ನಾನು ಕಾಲೇಜಿನಲ್ಲಿ ಓದುತ್ತಿರುವ ಸಂದರ್ಭದಲ್ಲಿ  ನಾಲ್ಕು ವಾರ್ಡ್ ಗಳಲ್ಲಿ ಕಸದ ಟೆಂಡರ್ ತೆಗೆದುಕೊಂಡೆ. ಕಸದ ಟೆಂಡರ್ ತೆಗೆದುಕೊಂಡು ವೃತ್ತಿ ಮಾಡುತ್ತಿದ್ದೆ. ದೇವೆಗೌಡರು ಬೇಡ ಅಂದಾಗ ಅದನ್ನು ಬಿಟ್ಟೆ. ಮೈಸೂರಿನಲ್ಲಿ ಚಿತ್ರದ ಹಂಚಿಕೆದಾರನಾಗಿ‌ ಕೆಲಸ ಮಾಡಿದೆ. ನಾನು ನನ್ನ ತಂದೆ‌ ನೆರಳಲ್ಲಿ ಬೆಳೆಯಲಿಲ್ಲ. ಬಡ್ಡಿ ದುಡ್ಡು ತೆಗೆದುಕೊಂಡು ದುಡಿದಿದ್ದೇನೆ. ನಾನು ತಂದೆಯ ಅಧಿಕಾರ ದುರುಪಯೋಗ ಪಡಿಸಿಕೊಂಡಿಲ್ಲ. ಇಂದಿನ‌ ರಾಜಕಾರಣಿಗಳ ರೀತಿ ಹಣ ಮಾಡಿಲ್ಲ. ಕುಮಾರಸ್ವಾಮಿ ಬ್ಯಾಗ್ರೌಂಡ್ ಇವುಗಳಿಗೇನು ಗೊತ್ತು. ಸಿನಿಮಾ ದುಡ್ಡನ್ನ ಕಾವೇರಿ ಹೋರಾಟಕ್ಕೆ ಕೊಟ್ಟಿದ್ದೇನೆ. ಇದು ನನ್ನ ಬದುಕು ಎಂದು ಶಾಸಕ ಜಮೀರ್ ಅಹ್ಮದ್ ಖಾನ್ ಗೆ ತಿರುಗೇಟು ನೀಡಿದರು.

ಜೆಡಿಎಸ್ ಬಿಟ್ಟು ಬೇರೆ ಪಕ್ಷಕ್ಕೆ ಹೋಗುತ್ತಿರುವವರ ಬಗ್ಗೆ ಪ್ರತಿಕ್ರಿಯಿಸಿದ ಹೆಚ್.ಡಿ ಕುಮಾರಸ್ವಾಮಿ, ಪಕ್ಷ ಬಿಟ್ಟು ಹೋಗುವವರನ್ನ ಹಿಡಿದುಕೊಳ್ಳಲು ಸಾಧ್ಯವಿಲ್ಲ. ಉಳಿದುಕೊಳ್ಳುತ್ತೇನೆ ಅನ್ನೋರನ್ನ ಹೋಗು ಅಂದ್ರೆ ಹುಚ್ಚಿಡಿದಿದೆ ಅಂತಾರೆ. ಆದರೆ ಹೋಗೋರನ್ನ ಹಿಡಿದುಕೊಳ್ಳಲು ಆಗುತ್ತಾ. ಗುಬ್ಬಿ ಶಾಸಕರು ಕುಮಾರಸ್ವಾಮಿ ಇಮೇಜ್ ಹಾಳಾಗಿದೆ ಅಂತಾರೆ. ಇಮೇಜ್ ಇಲ್ಲದವನಿಂದ ಏನು ಅನುಕೂಲ. ಇಮೇಜ್ ಇರೋರ್ ಹತ್ತಿರ ಹೋಗುತ್ತಾರೆ ಬಿಡಿ. ಪಕ್ಷ ಬಿಟ್ಟು ಹೋಗುತ್ತೇನೆ ಅನ್ನೋರ ಬಗ್ಗೆ ನಾನು‌ ಮಾತನಾಡಲ್ಲ ಎಂದರು.

Key words: mysore- former CM- HD Kumaraswamy –MLA -jameer ahamad khan