ಕಾಲಿನ ಮೇಲೆ ಕಾಲಾಕ್ಕೊಂಡು ದೇವೆಗೌಡರನ್ನ ಒದ್ದುಕೊಂಡು ಕುಳಿತುಕೊಳ್ಳುತ್ತಿದ್ರು- ಜೆಡಿಎಸ್ ಫ್ಯಾಮಿಲಿ ಪಾರ್ಟಿ ಎಂದ ಸಿದ್ಧರಾಮಯ್ಯ ವಿರುದ್ಧ ಹೆಚ್.ಡಿಕೆ ವಾಗ್ದಾಳಿ.

ಮೈಸೂರು,ಅಕ್ಟೋಬರ್,24,2021(www.justkannada.in): ನಾನು ಜೆ.ಡಿ.ಎಸ್ ಪಕ್ಷ ಕಟ್ಟಿದ್ಧೆ ಅಂತಾರೆ. ಬ್ಯಾನರ್ ನಲ್ಲಿ ಪೋಟೊ ಇಲ್ಲ ಅಂತ ಕಾರ್ಯಕ್ರಮಕ್ಕೆ ಬರಲಿಲ್ಲ. ಇನ್ನು ಮುಖ್ಯಮಂತ್ರಿಗಿರಿಯನ್ನ ಬೇರೆಯವರಿಗೆ ಬಿಟ್ಟುಕೊಡುತ್ತಾರಾ…? ಕಾಲಿನ ಮೇಲೆ ಕಾಲಾಕ್ಕೊಂಡು ದೇವೆಗೌಡರನ್ನ ಒದ್ದುಕೊಂಡು ಕುಳಿತುಕೊಳ್ಳುತ್ತಿದ್ದರು. ಇದನ್ನೆಲ್ಲಾ ನೋಡಿದ್ದೇವೆ. ಹೀಗೆ  ವಿಪಕ್ಷ ನಾಯಕ ಸಿದ್ಧರಾಮಯ್ಯ ವಾಗ್ದಾಳಿ ನಡೆಸಿದ್ದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ.

ಮೈಸೂರು ಜಿಲ್ಲಾ‌ಪತ್ರಕರ್ತರ ಸಂಘದಲ್ಲಿ ನಡೆಯತ್ತಿರುವ ಮಾಧ್ಯಮ ಸಂವಾದಲ್ಲಿ ಮಾತನಾಡಿದ ಹೆಚ್.ಡಿ ಕುಮಾರಸ್ವಾಮಿ, ಜೆಡಿಎಸ್ ಫ್ಯಾಮಿಲಿ ಪಾರ್ಟಿ. ಜಿಡಿಎಫ್ ಅಂತೀರಲ್ಲ. ವರಣಾದಲ್ಲಿ ನೀವು ಏನು ಮಾಡಿದ್ರಿ ಸಿದ್ದರಾಮಯ್ಯ.? ಬಾದಾಮಿಯಲ್ಲಿ ನೀವು ನಿಂತಾಗ ಚಾಮುಂಡೇಶ್ವರಿ ಯಾರಾದ್ರು ಮುಸಲ್ಮಾನರಿಗೆ ಬಿಟ್ಟು ಕೊಡಬಹುದಿತ್ತಲ್ಲ ಸ್ವಾಮಿ. ಜೆಡಿಎಫ್ ಅಂತೀರಲ್ಲ ವರಣಾದಲ್ಲಿ ನಿಷ್ಠಾವಂತ ಕಾರ್ಯಕರ್ತರ ಇರಲಿಲ್ಲವೆ‌..? ನಮ್ಮದು ಫ್ಯಾಮಿಲಿ ಪಾರ್ಟಿ ಅಂತೀರ, ನಿಮ್ಮ ಮಗನನ್ನು ವರಣಾದಲ್ಲಿ ನಿಲ್ಲಿಸಿದ್ರಲ್ಲ‌. ನಿಮ್ಮದು ಯಾವ ಪಾರ್ಟಿ ? ನಿಮ್ಮದು ಪ್ಯಾಮಿಲಿ ಪಾರ್ಟಿ ಅಲ್ವಾ‌..? ಅಲ್ಲಿ ಕಾಂಗ್ರೆಸ್ ನ ನಿಷ್ಠಾವಂತ ಕಾರ್ಯಕರ್ತರು ಇರಲಿಲ್ಲವಾ..? ಎಲ್ಲರ ಮನೆ ದೋಸೆನೂ ತೂತೆ ಇದನ್ನು ಅರ್ಥ ಮಾಡಿಕೊಳ್ಳಬೇಕು ಸಿದ್ದರಾಮಯ್ಯ ಎಂದು ಸಿದ್ಧರಾಮಯ್ಯರನ್ನ ತರಾಟೆ ತೆಗೆದುಕೊಂಡರು.

ಎಲ್ಲಾ ಪಕ್ಷದಲ್ಲೂ ಉಪಚುನಾವಣೆಯಲ್ಲಿ  ಪೈಪೋಟಿ ನಡೆಸುತ್ತಿವೆ. ರಾಜ್ಯದ ಹಲವಾರು ಪ್ರದೇಶದಲ್ಲಿ ದೊಡ್ಡ ಮಟ್ಟದ ಅಕಾಲಿಕ ಮಳೆ ಆಗುತ್ತಿದೆ. ಈಗ ವಿಧಾನಸೌಧದ ಕಚೇರಿಗಳು ಬೀಗ ಹಾಕಿವೆ. ಮಂತ್ರಿಗಳು ಒಂದೊಂದು ಬೂತ್ ನಲ್ಲಿ ಕುಳಿತಿದ್ದಾರೆ.ವಿರೋಧ ಪಕ್ಷಕ್ಕೂ ನಾವೇನು ಕಡಿಮೆ‌ ಇಲ್ಲ ಅಂತ ಬೂತ್ ನಲ್ಲಿ ಬೀಡುಬಿಟ್ಟಿದ್ದಾರೆ. ನಾವು ಕೂಡ ಪ್ರಚಾರದಲ್ಲಿ ಭಾಗಿಯಗುತ್ತಿದ್ದೇನೆ. ಆದ್ರೆ ಸರ್ಕಾರ ಜನರ ಸಮಸ್ಯೆ ಮರೆತಿದ್ದಾರೆ ಎಂದು ಹೆಚ್.ಡಿಕೆ ಆರೋಪಿಸಿದರು.

ಜಾತ್ಯಾತೀತ ಜನತದಾಳ ಮುಗಿದು ಹೋಗಿದೆ ಎಂದು ಹೇಳುತ್ತಾರೆ. 2004 ರಲ್ಲಿ ಸಿದ್ದರಾಮಯ್ಯ ನಮ್ಮ ಜೊತೆ ಇದ್ದರು. ಅವರೇ ಪಕ್ಷ ಬಿಡುವ ಪರಿಸ್ಥಿತಿ ತಂದುಕೊಂಡರು.ಅದಾದ‌ ಮೇಲೆ ಹೆಚ್ಚಿನ ಜವಾಬ್ದಾರಿ ಬಂತು. ನಂತರ ಬಿಜೆಪಿ ಜೊತೆ ಸರ್ಕಾರ ಮಾಡಿದೆವು. ನಂತರ ಅನುಕಂಪ ಪಡೆದುಕೊಂಡು ಬಿಜೆಪಿ ಮೇಲುಗೈ ಸಾಧಿಸಿತು. ಕಾಂಗ್ರೆಸ್ ನವರು ನಮ್ಮ ಮೇಲೆ ಅಪಪ್ರಚಾರ ಮಾಡಿದರು.ಅದರ‌ ಫಲವಾಗಿ ಬಿಜೆಪಿ ಹೆಚ್ಚಿನ ಸ್ಥಾನ ಗಳಿಸಿತು. ಇದೆಲ್ಲದರ ಫಲವಾಗಿ ಜೆಡಿಎಸ್ ನೆಲಕಚ್ಚಿಸಿದ್ರು.ಆದರಲ್ಲಿ  ಎರಡು ಮಾತಿಲ್ಲ. ಅದನ್ನ ನಾನು ಒಪ್ಪಿಕೊಳ್ಳುತ್ತೇನೆ ಎಂದು ಹೆಚ್.ಡಿಕೆ ಹೇಳಿದರು.siddaramaiah-does-not-want-people-congress-former-cm-hd-kumaraswamy-tong

ಉಪ ಚುನಾವಣೆಯಲ್ಲಿ ಎರಡು ಪಕ್ಷದವರು ಹಣ ಚೆಲ್ಲುತ್ತಿದ್ದಾರೆ ಅಂತ ಅವರೇ ಆರೋಪ ಮಾಡಿಕೊಳ್ಳುತ್ತಿದ್ದಾರೆ. ಆದ್ರೆ ನಮ್ಮ ಪಕ್ಷದ ಮೇಲೆ ಯಾವುದೇ ಆರೋಪ ಇಲ್ಲ. ಕೇವಲ ಅಲ್ಪಸಂಖ್ಯಾತರನ್ನ ನಿಲ್ಲಿಸಿದ್ದಾರೆ ಎಂಬ ಅನ್ನೋ ಆರೋಪ ಮಾಡುತ್ತಿದ್ದಾರೆ ಎಂದರು.

ಹೊಂದಾಣಿಕೆಯಿಂದಾಗಿ ಜೆಡಿಎಸ್ ಪಕ್ಷಕ್ಕೆ ದೊಡ್ಡ ಮಟ್ಟದ ಪೆಟ್ಟು ಬಿದ್ದಿರುವುದು ನಿಜ.ನಮಗೆ ಶಕ್ತಿ ಇದ್ದ ಕ್ಷೇತ್ರಗಳಲ್ಲೆ ಸೋತೆವು. ಉಪಚುನಾವಣೆಗಳಲ್ಲಿ ಸೋಲು ಅನುಭವಿಸಿದ್ದೇವೆ. ಈಗ ಪಕ್ಷವನ್ನು ತಳ‌ಮಟ್ಟದಲ್ಲಿ ಕಟ್ಟಬೇಕಿದೆ. ನಮಗೆ ಮುಂದಿನ ವಿಧಾನಸಭಾ ಚುನಾವಣೆ ಗುರಿಯಾಗಿಟ್ಟುಕೊಂಡು ಪಕ್ಷ ಸಂಘಟನೆ ಮಾಡಿದ್ದೇವೆ. ನಾವು 126 ಕ್ಷೇತ್ರಗಳಲ್ಲಿ ಈಗಾಗಲೆ ಗುರುತಿಸಿ ಸಂಘಟನೆ ಮಾಡುವ ಜವಾಬ್ದಾರಿ ನೀಡಲಾಗಿದೆ ಎಂದು ಹೆಚ್.ಡಿ ಕುಮಾರಸ್ವಾಮಿ ಹೇಳಿದರು.

2023 ಕ್ಕೆ 123 ಸ್ಥಾನ ಗೆಲ್ಲುತ್ತೇವೆ ಅಂತ ಹೇಳಿದ್ದೇನೆ. ಅವರ ಖುಷಿಗೆ ಹೇಳುಕೊಳ್ಳುತ್ತಾರೆ ಅಂತ ಹೇಳಬಹುದು.ಯಾವುದು ಅಸಾಧ್ಯವಿಲ್ಲ. ದುಡಿಮೆಗೆ ಪ್ರತಿಫಲ ಇದೆ. ಪಕ್ಷ ಗೆಲ್ಲಲ್ಲು ಪ್ರಶಾಂತ್ ಕಿಶೋರ್ ತರುತ್ತಿಲ್ಲ. ನಮ್ಮ ಜೊತೆ ಇರುವ ಯುವಕರು ವಾಲೆಂಟರಿಯಾಗಿ ಕೆಲಸ ಮಾಡುತ್ತಿದ್ದಾರೆ. ಎರಡು ಪಕ್ಷದ ಹತ್ತಿರವೂ ಹೋಗದೆ ನಾವೇ ಗೆಲ್ಲುತ್ತೇವೆ. ಬೈ ಎಲೆಕ್ಷನ್ ನಿಂದ ಯಾರು ಗೆದ್ದು ಬೀಗಿದರೂ ಪ್ರಯೋಜನ ಇಲ್ಲ. ಗುಂಡ್ಲುಪೇಟೆ ನಂಜನಗೂಡು ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದರು. ಆದರೇ ಮುಂದಿನ ಚುನಾವಣೆಯಲ್ಲಿ ಬಿಜೆಪಿ ಗೆದ್ದರು. ಇದರಿಂದ ಯಾರು ಬೀಗಬಾರದು ಎಂದು ಹೆಚ್.ಡಿಕೆ ಎರಡು ಪಕ್ಷಗಳಿಗೆ ಟಾಂಗ್ ನೀಡಿದರು.

Key words: JDS-HD kumaraswamy-outrage-former CM- Siddaramaiah-mysore