ಪತ್ನಿ ಮೇಲೆ ಸಂದೇಹ: ಎರಡು ವರ್ಷದ ಮಗುವನ್ನೆ ಕೊಂದ ತಂದೆ..

ಮೈಸೂರು,ಜು,6,2019(www.justkannada.in): ಪತಿ ಮಹಾಶಯನೋಬ್ಬ ಪತ್ನಿಯ ಮೇಲೆ ಸಂದೇಹ ಪಟ್ಟು ತನ್ನ ಮಗುವನ್ನೇ ಕೊಲೆ ಮಾಡಿರುವ ಘಟನೆ ಮೈಸೂರು ಜಿಲ್ಲೆ ಹುಣಸೂರು ತಾಲ್ಲೂಕಿನಲ್ಲಿ ನಡೆದಿದೆ.

ಹುಣಸೂರು ತಾಲೂಕು ಬಿಳಿಕೆರೆಯ ಆಸ್ವಾಳು ಗ್ರಾಮದಲ್ಲಿ ಈ ದಾರುಣ ಘಟನೆ ನಡೆದಿದೆ. ಕುಶಲ್ (೨) ಪಾಪಿ ತಂದೆಯ ಅನುಮಾನ ರೋಗಕ್ಕೆ ಬಲಿಯಾದ ಮಗು. ತಂದೆ ಶಶಿಕುಮಾರ್ ತಾಯಿ ಪರಿಮಳ ಈ ಕೃತ್ಯವೆಸಗಿದ್ದಾರೆ. ತಾನೂ ಕೊಲೆಯಲ್ಲಿ  ಭಾಗಿ ಎಂದು ಆರೋಪ ಹೊತ್ತು ಹೆತ್ತ ತಾಯಿ ಪರಿಮಳ ಕೂಡ ಶಶಿಕುಮಾರ್ ಜತೆ ಜೈಲುಪಾಲಾಗಿದ್ದಾಳೆ.

5 ವರ್ಷದ ಹಿಂದೆ  ಶಶಿಕುಮಾರ್ ಹಾಗೂ ಪರಿಮಳ ಪ್ರೀತಿಸಿ ಮದುವೆ ಆಗಿದ್ದರು. ಇಬ್ಬರು ಹೆಚ್.ಡಿ.ಕೋಟೆಯ ಸವ್ವೆ ಗ್ರಾಮದವರಾಗಿದ್ದು, ಪ್ರೀತಿಸಿ ಮದುವೆ ಆದ ಈ ದಂಪತಿಗೆ ಖುಷಿ (೩) ಕುಶಲ್ (೨) ಇಬ್ಬರು ಮಕ್ಕಳಿದ್ದರು.  ಒಂದು ವರ್ಷದ ಹಿಂದೆ ಪರಿಮಳಳನ್ನ ಶಶಿಕುಮಾರ್ ಬಿಟ್ಟುಹೋಗಿದ್ದ. ಅದ್ದರಿಂದ ಜೀವನೋಪಾಯಕ್ಕಾಗಿ ಪರಿಮಳ ತಂದೆ ತಾಯಿ ಸಮೇತ ಬಿಳಿಕೆರೆಗೆ ಬಂದು ನೆಲೆಸಿದ್ದಳು. ಈ ಕುಟುಂಬ ಪರಿಚಯಸ್ಥರೊಬ್ಬರ ತೋಟ ನೋಡಿಕೊಳ್ಳುತ್ತಿದ್ದರು.

ಈ ನಡುವೆ ಆರು ತಿಂಗಳ ಹಿಂದೆ ಮತ್ತೆ ಪರಿಮಳ ಶಶಿಕುಮಾರ್ ಸೇರಿಕೊಂಡಿದ್ದು ಈ ವೇಳೇ ಪತಿ ಶಶಿಕುಮಾರ್  ಕುಶಲ್ ತನಗೆ ಹುಟ್ಟಿಲ್ಲವೆಂದು ಶಂಕೆ ವ್ಯಕ್ತಪಡಿಸುತ್ತಿದ್ದನು ಎನ್ನಲಾಗಿದೆ. ಜತೆಗೆ ಆಗಾಗ ಮಗುವಿಗೆ ಹಿಂಸೆ ನೀಡುತ್ತಿದ್ದ ಎಂಬ ಆರೋಪ ಸಹ ಕೇಳಿಬಂದಿದೆ

ಇದೇ ಕಾರಣದಿಂದ ಮಂಗಳವಾರ ಕುಶಲ್ ಮೇಲೆ ಶಶಿಕುಮಾರ್ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ತೀವ್ರ ಅಸ್ವಸ್ಥನಾದ ಕುಶಲ್ ನನ್ನ ಚೆಲುವಾಂಬ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಕುಶಲ್ ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ರಾತ್ರಿ ಮೃತಪಟ್ಟದ್ದಾನೆ.

ಶಶಿಕುಮಾರ್ ಹಲ್ಲೆ ನಡೆಸಿ ಕೊಲೆ ಮಾಡಿದ್ರೂ ಸಹ  ಪರಿಮಳ ತಾನೇ ಹೊಡೆದಿದ್ದಾಗಿ ಒಪ್ಪಿಕೊಂಡಿದ್ದಳು. ನಂತರ ವಿಚಾರಣೆಯಲ್ಲಿ ಶಶಿಕುಮಾರ್ ಹಲ್ಲೆ ಮಾಡಿದ ವಿಚಾರ ಬೆಳಕಿಗೆ ಬಂದಿದೆ. ಇದೀಗ ಗಂಡನ ಜೊತೆ ತಾನೂ ಕೊಲೆ ಆರೋಪವನ್ನ ಮೈಮೇಲೆ ಹಾಕಿಕೊಂಡು ಪತಿ ಜೊತೆ ಪರಿಮಳ ಜೈಲು ಸೇರಿದ್ದಾಳೆ. ಈ ಕುರಿತು ಬಿಳಿಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Key words: mysore- father-kill-son- Doubt-wife