ಯುಪಿಎಸ್ ಸ್ವಚ್ಛ ಮಾಡುವ ವೇಳೆ ವಿದ್ಯುತ್ ಶಾಕ್: ವ್ಯಕ್ತಿ ಸಾವು…

ಮೈಸೂರು,ಡಿ,7,2019(www.justkannada.in): ಯುಪಿಎಸ್ ಬಳಿ ಸ್ವಚ್ಛ ಮಾಡುವ ವೇಳೆ  ವಿದ್ಯುತ್ ಶಾಕ್ ಹೊಡೆದು ವ್ಯಕ್ತಿ ಮೃತಪಟ್ಟಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.

ಮೈಸೂರಿನ ಲಷ್ಕರ್ ಮೊಹಲ್ಲಾದ ಗುಜರಿ ಬಳಿ ಈ ಘಟನೆ ನಡೆದಿದೆ. ನವೀನ್(37) ಮೃತ ಪಟ್ಟ ವ್ಯಕ್ತಿ. ನವೀನ್ ಎಲೆಕ್ಟ್ರಿಕಲ್ ಕೆಲಸ ಮಾಡುತ್ತಿದ್ದನು. ಈ ನಡುವೆ ಯುಪಿಎಸ್ ಬಳಿ ಸ್ವಚ್ಛ ಮಾಡುವ ವೇಳೆ  ನವೀನ್ ಗೆ ವಿದ್ಯುತ್ ಶಾಕ್ ಹೊಡೆದಿದೆ. ಕೂಡಲೇ  ನವೀನ್ ರನ್ನ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ  ನವೀನ್ ಸಾವನ್ನಪ್ಪಿದ್ದಾರೆ.

ಈ ಕುರಿತು ಲಷ್ಕರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Key words: mysore- Electric shock –UPS- death – man