ಮೈಸೂರು ದಸರಾ ಜಂಬೂ ಸವಾರಿ ಯಶಸ್ವಿ: ಗಜಪಡೆ ಆನೆಗಳಿಗೆ ತೂಕ ಪರೀಕ್ಷೆ..

ಮೈಸೂರು,ಅಕ್ಟೋಬರ್,25,2023(www.justkannada.in): ವಿಶ್ವ ವಿಖ್ಯಾತ ನಾಡ ಹಬ್ಬ ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆ  ಐತಿಹಾಸಿಕ  ಜಂಬೂ ಸವಾರಿ ಮೆರವಣಿಗೆ ನಿನ್ನೆ ಯಶಸ್ವಿಯಾಗಿ ನಡೆಯಿತು. ಲಕ್ಷಾಂತರ ಮಂದಿ ಜಂಬೂಸವಾರಿ ಮೆರವಣಿಗೆ ಕಣ್ತುಂಬಿಕೊಂಡರು.

ಈ ನಡುವೆ ದಸರಾ ಜಂಬೂ ಸವಾರಿ ಮೆರವಣಿಗೆಯಲ್ಲಿ ಅತ್ಯುತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸಿದ ಕ್ಯಾಪ್ಟನ್ ಅಭಿಮನ್ಯು ನೇತೃತ್ವದ ಗಜಪಡೆ ಆನೆಗಳಿಗೆ ಇಂದು ತೂಕ ಪರೀಕ್ಷೆ ನಡೆಸಲಾಯಿತು. ಮೈಸೂರಿನ ಧನ್ವಂತರಿ ರಸ್ತೆಯಲ್ಲಿರುವ ಸಾಹಿರಾಮ್ ಅಂಡ್ ಕೊ ಎಲೆಕ್ಟ್ರಾನಿಕ್ ವೇ ಬ್ರಿಡ್ಜ್ ನಲ್ಲಿ ಡಿಸಿಎಫ್ ಸೌರಭ್ ಕುಮಾರ್ ಸಮ್ಮುಖದಲ್ಲಿ 14 ಆನೆಗಳ ತೂಕ ಪರೀಕ್ಷೆ ನಡೆಯಿತು.

ಅಂಬಾರಿ ಹೊತ್ತು ಸಾಗಿದ ಅಭಿಮನ್ಯು 5460 ಕೆಜಿ ತೂಕ ಹೊಂದಿದ್ದರೇ  ಅರ್ಜುನ 5850 ಕೆ. ಜಿ ತೂಕ ಹೊಂದಿ ಹೆಚ್ಚು ಬಲಶಾಲಿಯಾಗಿದ್ದಾನೆ.

ದಸರಾದ 14 ಆನೆಗಳ ತೂಕದ ವಿವರ ಹೀಗಿದೆ.

ಸುಗ್ರೀವ – 5310 ಕೆ ಜಿ ತೂಕ

ಗೋಪಿ –  5240 ಕೆ.ಜಿ

ಧನಂಜಯ – 5180 ಕೆ.ಜಿ

ಕಂಜನ್  – 4505 ಕೆ.ಜಿ

ಹಿರಣ್ಯ  – 3025 ಕೆ.ಜಿ

ರೋಹಿತ್ – 3620 ಕೆ.ಜಿ

ಪ್ರಶಾಂತ್ – 5215ಕೆ.ಜಿ

ಅಭಿಮನ್ಯು – 5460 ಕೆ.ಜಿ

ವಿಜಯ –  2845 ಕೆ.ಜಿ

ಭೀಮ – 4870 ಕೆ.ಜಿ

ಲಕ್ಷ್ಮೀ – 3365 ಕೆ.ಜಿ

ಮಹೇಂದ್ರ – 4835 ಕೆ.ಜಿ

ವರಲಕ್ಷ್ಮಿ – 3225 ಕೆಜಿ

ಅರ್ಜುನ- 5850 ಕೆ ಜಿ

Key words: Mysore Dussehra -Jambu Ride –Successful-Weight Test -Gajapade..