ಹಿರಿಯ ಪತ್ರಕರ್ತ ಪದ್ಮನಾಭ್ ನಿಧನ.

ಮೈಸೂರು,ಮೇ,31,2022(www.justkannada.in):  ಹಿರಿಯ ಪತ್ರಕರ್ತ ಎಸ್.ಪದ್ಮನಾಭ್ (83) ನಿಧನರಾದರು. ತಿ.ನರಸೀಪುರ ರಸ್ತೆಯಲ್ಲಿರುವ ವಾಸವಿ ಶಾಂತಿಧಾಮ ಎಂಬ ವೃದ್ಧಾಶ್ರಮದಲ್ಲಿ ಎಸ್.ಪದ್ಮನಾಭ್  ಅವರು ವಾಸವಾಗಿದ್ದರು. ಅವರಿಗೆ ಪುತ್ರಿ ಇದ್ದಾರೆ. ಅವರ ಶವವು ಭಾನವಿ ಆಸ್ಪತ್ರೆಯ ಶೈತ್ಯಾಗಾರದಲ್ಲಿದೆ.

ಸಂಯುಕ್ತ ಕರ್ನಾಟಕದಲ್ಲಿ ಅನೇಕ ವರ್ಷಗಳವರೆಗೆ ಕಾರ್ಯ ನಿರ್ವಹಿಸಿದ್ದ ಅವರು, ಸಿನಿಮಾ ಪತ್ರಕರ್ತರಾಗಿಯೂ ದುಡಿದಿದ್ದರು.  ಅವರು ಸಿನಿಮಾ ನಟರಾಗಿದ್ದ ಚೇತನ್ ರಾಮರಾವ್ ಅವರ ಸೋದರ. ಅವರ ಪತ್ನಿ, ನಿವೃತ್ತ ಶಿಕ್ಷಕಿಯಾಗಿದ್ದ ನಾಗರತ್ನಾ ಅವರು ಕಳೆದ ವರ್ಷ ಕೋವಿಡ್ ನಿಂದ ನಿಧನರಾಗಿದ್ದರು.

ಅವರ ಪುತ್ರಿ ಲತಾ ಅವರು ಅಮೆರಿಕದಿಂದ ಬರಲಿದ್ದು, ಬುಧವಾರ (ಜೂನ್ 1) ಬೆಳಿಗ್ಗೆ 11 ಗಂಟೆಗೆ ಚಾಮುಂಡಿ ಬೆಟ್ಟದ ತಪ್ಪಲಿನ ಹರಿಶ್ಚಂದ್ರ ಘಾಟ್ ನಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

Key words: Senior journalist –Padmanabh- passes -away.