ಮೈಸೂರು,ಮೇ,28,2025 (www.justkannada.in): ಮೈಸೂರಿನ ಸಮತಾ ಅಧ್ಯಯನ ಕೇಂದ್ರ(ರಿ)ದ ವತಿಯಿಂದ ಜೂನ್ 1 ರ ಭಾನುವಾರ ಡಾ.ವಿಜಯಾ ದಬ್ಬೆ ಸಾಹಿತ್ಯ ಪ್ರಶಸ್ತಿ ಪ್ರದಾನ ಸಮಾರಂಭ ಮತ್ತು ಕಾವ್ಯ, ಕಥಾಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಣಾ ಕಾರ್ಯಕ್ರಮವನ್ನ ಆಯೋಜಿಸಲಾಗಿದೆ.
ಅಂದು ಬೆಳಿಗ್ಗೆ 10.30ಕ್ಕೆ ಮೈಸೂರಿನ ಸರಸ್ವತಿ ಪುರಂನಲ್ಲಿರುವ ರೋಟರಿ ಮೈಸೂರು , ಪಶ್ಚಿಮ ಸಭಾಂಗಣದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಹಿರಿಯ ಕವಯತ್ರಿ ಸವಿತಾ ನಾಗಭೂಷಣ ಅವರಿಗೆ ಡಾ. ವಿಜಯದಬ್ಬೆ ಸಾಹಿತ್ಯ ಪ್ರಶಸ್ತಿಯನ್ನ ಹಿರಿಯ ಲೇಖಕಿ ಮತ್ತು ಎಚ್ ಎಎಲ್ ನಿವೃತ್ತ ಜನರಲ್ ಮ್ಯಾನೇಜರ್ ನೇಮಿಚಂದ್ರ ಅವರು ಪ್ರದಾನ ಮಾಡಲಿದ್ದಾರೆ.
ತೀರ್ಪುಗಾರರಾಗಿ ಕವಿ ಹಾಗೂ ಹಿರಿಯ ಪತ್ರಕರ್ತ ಜಿ.ಪಿ ಬಸವರಾಜು ಆಗಮಿಸಲಿದ್ದಾರೆ. ನೆನಪಿನಂಗಳದಲ್ಲಿ ವಿಜಯ ದಬ್ಬೆ , ಪುಸ್ತಕವನ್ನ ಖ್ಯಾತ ವಿಮರ್ಶಕರು ಹಾಗೂ ಸಂಸ್ಕೃತಿ ಚಿಂತಕರಾದ ಡಾ.ಎಂ.ಎಸ್ ಆಶಾದೇವಿ ಬಿಡುಗಡೆ ಮಾಡಲಿದ್ದಾರೆ.
ಬೆಂಗಳೂರಿನ ಮಹಾರಾಣಿಸ್ ಕ್ಲಸ್ಟರ್ ಯುನಿವರ್ಸಿಟಿ ಪ್ರಾಧ್ಯಾಪಕ ಡಾ.ಸೆಲ್ವಕುಮಾರಿ, ಮೈಸೂರು ಶಾರದಾ ವಿಲಾಸ ಕಾಲೇಜು ಸಹಾಯಕ ಪ್ರಾಧ್ಯಾಪಕ ಆನಂದ ಗೋಪಾಲ ಉಪಸ್ಥಿತರಿರಲಿದ್ದು ಸಮತಾ ಅಧ್ಯಯನ ಕೇಂದ್ರದ ಅಧ್ಯಕ್ಷರಾದ ಡಾ.ಸಬಿಹಾ ಭೂಮಿಗೌಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.
Key words: Mysore, Dr. Vijaya Dabbe Literary Award, ceremony, June 1