ಮೈಸೂರು ಡಾಗ್ ಸ್ಕ್ವಾಡ್  ಗೆ  “ಬೆಲ್ಜಿಯಂ ಮಾಲಿನೋಯಿಸ್” ತಳಿಯ ವಿಶೇಷ ಶ್ವಾನ ಸೇರ್ಪಡೆ

ಮೈಸೂರು,ಮಾರ್ಚ್,08,2021(www.justkannada.in) : ಬಹುಪ್ರತಿಭೆಯ ಬೆಲ್ಜಿಯಂ ಮಾಲಿನೋಯಿಸ್ ತಳಿಯ ವಿಶೇಷ ಶ್ವಾನ ಪೊಲೀಸ್ ಇಲಾಖೆಗೆ ಸೇರ್ಪಡೆಯಾಗಿದೆ.

jkಇವತ್ತಿನ ಮಾರುಕಟ್ಟೆ ಮೌಲ್ಯ 1ಲಕ್ಷದ 50ಸಾವಿರ ರೂ.

ಇದೇ ಮೊದಲ ಬಾರಿಗೆ ಮೈಸೂರು ಡಾಗ್ ಸ್ಕ್ವಾಡ್ ನಲ್ಲಿ ಈ ತಳಿಯ ನಾಯಿ ಸೇರ್ಪಡೆಯಾಗಿದೆ. ಈ ಶ್ವಾನವು ಎರಡು ತಿಂಗಳ ಮರಿಯಾಗಿದ್ದು, ನಾಯಿ ಮರಿಯ ಇವತ್ತಿನ ಮಾರುಕಟ್ಟೆ ಮೌಲ್ಯ 1ಲಕ್ಷದ 50ಸಾವಿರ ರೂ. ಆಗಿದೆ. ರಾಜ್ಯ ಪೊಲೀಸ್ ಇಲಾಖೆಯಲ್ಲಿ ಈ ತಳಿಯ ನಾಯಿ ಬೆಂಗಳೂರಿನಲ್ಲಿ ಎರಡು ಹಾಗೂ ಮೈಸೂರಿನಲ್ಲಿ ಇದೊಂದು ಮಾತ್ರ ಇದೆ. ಹೆಚ್ಚು ಎಚ್ಚರಿಕೆ ಮತ್ತು ಆತ್ಮವಿಶ್ವಾಸದ ಶ್ವಾನ ಎಂದು ಗುರುತಿಸಲಾಗಿದೆ.

Mysore-Dog Squad-"Belgium Malinois"-Breed-Special-Dog-Inclusion 

ಪ್ರಮೋದ್ ಅವರಿಂದ ಪೊಲಿಸ್ ಇಲಾಖೆಗೆ ಉಚಿತವಾಗಿ ಇಂದು ಹಸ್ತಾಂತರಿಸಲಾಯಿತು. ಸೇನೆಯಲ್ಲಿ ಇದರ ಬಳಕೆ ಹೆಚ್ಚಾಗಿದೆ. ನಗರ ಸಶಸ್ತ್ರ ಮೀಸಲು ಪಡೆ ಡಿಸಿಪಿ ಶಿವರಾಜ್ ಅವರಿಗೆ ಪ್ರಮೋದ್ ಅವರು ನಾಯಿ ಹಸ್ತಾಂತರ ಮಾಡಿದರು. ಈ ವೇಳೆ ಇನ್ಸ್‌ಪೆಕ್ಟರ್ ಮೂರ್ತಿ, ಸಬ್ ಇನ್ಸ್‌ಪೆಕ್ಟರ್ ಸುರೇಶ್, ಶ್ವಾನ ತರಬೇತುದಾರ ಜಿ. ಮಂಜು ಮತ್ತಿತರರು ಇದ್ದರು.

key words : Mysore-Dog Squad-“Belgium Malinois”-Breed-Special-Dog-Inclusion