ಮೈಸೂರಿಗೆ ‘ಹೆಲಿ ಟೂರಿಸಂ’ ಅವಶ್ಯಕತೆ ಇಲ್ಲ: ವಾಟಾಳ್ ನಾಗರಾಜ್ ಪ್ರತಿಭಟನೆ…

ಮೈಸೂರು,ಏಪ್ರಿಲ್,8,2021(www.justkannada.in):  ಮೈಸೂರಿನಲ್ಲಿ ಹೆಲಿ ಟೂರಿಸಂಗೆ ವಿರೋಧ ವ್ಯಕ್ತಪಡಿಸಿ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಪ್ರತಿಭಟನೆ ನಡೆಸಿದರು.Illegally,Sand,carrying,Truck,Seized,arrest,driver

ಲಲಿತಮಹಲ್ ಮುಂಭಾಗ ಪ್ರತಿಭಟನೆ ನಡೆಸಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಕನ್ನಡಪರ ಹೋರಾಟಗಾರ  ವಾಟಾಳ್ ನಾಗರಾಜ್, ಹೆಲಿಟೂರಿಸಂನ ಹೆಲಿಪ್ಯಾಡ್ ನಿರ್ಮಾಣಕ್ಕೆ ಲಲಿತಮಹಲ್ ಸುತ್ತಲಿನ ನೂರಾರು ಮರಗಳು ನಾಶವಾಗಲಿದೆ. ಲಲಿತಮಹಲ್ ಗೆ ತನ್ನದೇ ಆದ ಇತಿಹಾಸವಿದೆ. ಪಕ್ಕದಲ್ಲೇ ಚಾಮುಂಡಿಬೆಟ್ಟವೂ ಇದೆ. ಲಲಿತಮಹಲ್ ಬಳಿ ಹೆಲಿಪ್ಯಾಡ್ ನಿರ್ಮಿಸಿದರೆ ಪಕ್ಷಿ ಸಂಕುಲಕ್ಕೆ ಅಪಾಯ ಎದುರಾಗಲಿದೆ. ಮೈಸೂರಿಗೆ ಹೆಲಿ ಟೂರಿಸಂ ಅವಶ್ಯಕತೆ ಇಲ್ಲ ಎಂದರು.Mysore -does not- need -Heli tourism-Vatal Nagaraj -protests.

ಹೆಲಿ ಟೂರಿಸಂ ಬೇಡವೇ ಬೇಡ ಎಂದು ಘೋಷಣೆ ಕೂಗಿ ವಾಟಾಳ್ ನಾಗರಾಜ್ ಕಿಡಿಕಾರಿದರು.

Key words: Mysore -does not- need -Heli tourism-Vatal Nagaraj -protests.