ಬಿಎಸ್ ವೈ ಸರ್ಕಾರ ಹುಚ್ಚರ ಸಂತೆ: ಈ ಪ್ರೈವೇಟ್ ಕಂಪನಿ ಹೋಗದಿದ್ದರೆ ರಾಜ್ಯಕ್ಕೆ ಉಳಿಗಾಲವಿಲ್ಲ-ವಾಟಾಳ್ ನಾಗರಾಜ್ ಕಿಡಿ…

ಮೈಸೂರು,ಏಪ್ರಿಲ್,8,2021(www.justkannada.in): ಯಡಿಯೂರಪ್ಪ ಸರ್ಕಾರ ಹುಚ್ಚರ ಸರ್ಕಾರ. ಯಡಿಯೂರಪ್ಪ ಸರ್ಕಾರ ಹುಚ್ಚರ ಸಂತೆ. ಯಡಿಯೂರಪ್ಪ ಮತ್ತು ಮಕ್ಕಳು ಪ್ರೈವೇಟ್ ಕಂಪನಿ ಆಗಿದ್ದಾರೆ. ಈ ಪ್ರೈವೇಟ್ ಕಂಪನಿ ಹೋಗದಿದ್ದರೆ ರಾಜ್ಯಕ್ಕೆ ಉಳಿಗಾಲವಿಲ್ಲ ಎಂದು ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಕಿಡಿಕಾರಿದರು.Illegally,Sand,carrying,Truck,Seized,arrest,driver

ಮೈಸೂರಿನಲ್ಲಿ ಇಂದು ಮಾತನಾಡಿದ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್, ಯಡಿಯೂರಪ್ಪ ಸರ್ಕಾರ ಬಕಾಸುರನಿಗಿಂತ ಒಂದು ಕೈ ಮುಂದೆ ಹೋಗಿದ್ದಾರೆ. ಯಡಿಯೂರಪ್ಪ ಮತ್ತು ಮಕ್ಕಳು ಪ್ರೈವೇಟ್ ಕಂಪನಿ ಆಗಿದ್ದಾರೆ.  ಈ ಪ್ರೈವೇಟ್ ಕಂಪನಿ ಹೋಗದಿದ್ದರೆ ರಾಜ್ಯಕ್ಕೆ ಉಳಿಗಾಲವಿಲ್ಲ. ಈ ಪ್ರೈವೇಟ್ ಕಂಪನಿಯಲ್ಲಿ ಮಕ್ಕಳು, ಮರಿ ಎಲ್ಲರೂ ಬಂದು ಬಿಡ್ತಾರೆ. ಈ ಪ್ರೈವೇಟ್ ಕಂಪನಿ ತೊಲಗಬೇಕು ಎಂದು ವಾಗ್ದಾಳಿ ನಡೆಸಿದರು.

ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ಕುರಿತು ಪ್ರತಿಕ್ರಿಯಿಸಿದ ವಾಟಾಳ್ ನಾಗರಾಜ್, ಡ್ರಗ್ ಕೇಸ್ ಭಾರಿ ಮಟ್ಟದಲ್ಲಿ ನಡೀತು. ಡ್ರಗ್ ಕೇಸ್ ಸತ್ತೇ ಹೋಯ್ತು, ಈಗ ಅದು ನಡೀತಿಲ್ಲ. ಈಗ ಸಿಡಿ, ಶುರುವಾಗಿದೆ, ಇನ್ನೇನು ಅದು ಕೂಡ ಮುಗಿಯುತ್ತಾ ಬಂದಿದೆ. ಸಿಡಿ ತೆಗೆದೋರು ಯಾರು, ಮಾಡಿದೋರು ಯಾರು, ಯಾವ ತನಿಖೆಯೂ ಪ್ರಾಮಾಣಿಕವಾಗಿ ನಡೆದಿಲ್ಲ. ಈಗಾಗಲೇ ಸಿಡಿ ವಿಚಾರ ಅರ್ಧ ಸತ್ತು ಹೋಗಿದೆ, ಮುಂದೆ ಪೂರ್ತಿಯಾಗಿ ಸತ್ತು ಹೋಗುತ್ತದೆ.  ಸಿಡಿ ಕಥೆನೂ ಮುಗೀತು, ಡ್ರಗ್ ಕೇಸ್ ಕಥೆನೂ ಮುಗೀತು ಎಂದು ಲೇವಡಿ ಮಾಡಿದರು.

BSY government – mad-private company -no safe-state-vatal Nagaraj-mysore
ಕೃಪೆ-internet

ಸಿಎಂ ಬಿಎಸ್ ಯಡಿಯೂರಪ್ಪ, ಸಚಿವ ಕೆ.ಎಸ್ ಈಶ್ವರಪ್ಪ ಮುಸುಕಿನ ಗುದ್ದಾಟ ವಿಚಾರ ಕುರಿತು ಪ್ರತಿಕ್ರಿಯಿಸಿದ ವಾಟಾಳ್ ನಾಗರಾಜ್,  ಈಶ್ವರಪ್ಪ ದಂಗೆ ಎದ್ದಿದ್ದಾರೆ ನಿಜ. ಪಾರ್ಟಿ ಬಿಟ್ಟು ಯಡಿಯೂರಪ್ಪ ಹೋಗಿದ್ದರು, ತಮ್ಮ ಮಗನ ಮೂಲಕ ನನ್ನ ಬಳಿ ಸಹಾಯ ಕೇಳಿದ್ದರು ಎಂದು ಈಶ್ವರಪ್ಪ ಹೇಳಿದ್ದಾರೆ. ಯಡಿಯೂರಪ್ಪನವರು ಯಾರಿಗೆ ಅನುಕೂಲ ಮಾಡುತ್ತಾರೋ, ಅವರಿಗೆ ತೊಂದರೆ ಕೊಡುತ್ತಾರೆ. ಮಾಧುಸ್ವಾಮಿ ಈ ಸರ್ಕಾರ ಬರಲು ನಿಂತು ಹೋರಾಟ ಮಾಡಿದರು ಆದರೆ ಅವರನ್ನ ಮೂಲೆಗುಂಪು ಮಾಡಿದರು. ಈಶ್ವರಪ್ಪ ಇಲ್ಲದಿದ್ದರೇ ಯಡಿಯೂರಪ್ಪ ಇಲ್ಲ. ಈಶ್ವರಪ್ಪನವರನ್ನ ಯಡಿಯೂರಪ್ಪನವರು ಕಡೆಗಣಿಸಿದ್ದಾರೆ. ಸ್ಮರಣೆಯ ಬಗ್ಗೆ ಯಾವುದೇ ವಿಚಾರವಿಲ್ಲ. ಯಡಿಯೂರಪ್ಪನವರಿಗೆ ಯಾವುದೇ ಸ್ನೇಹಿತರ ಬಗ್ಗೆ ಗೌರವವಿಲ್ಲ ಎಂದು ಹರಿಹಾಯ್ದರು.

Key words: BSY government – mad-private company -no safe-state-vatal Nagaraj-mysore