ಬಹಿರಂಗವಾಗಿ 6 ಸಾವಿರ ರೂ ಕೊಡುವುದಾಗಿ ಹೇಳಿದ್ದಾರೆ: ಇಡಿ ಐಟಿಯವರಿಗೆ ಬಿಜೆಪಿ ನಾಯಕರು ಕಾಣಲ್ಲವೇ..? –ಡಿ.ಕೆ ಶಿವಕುಮಾರ್ ವಾಗ್ದಾಳಿ.

ಮೈಸೂರು,ಜನವರಿ,26,2023(www.justkannada.in):  ಮತದಾರರಿಗೆ 6ಸಾವಿರ ರೂ. ಕೊಡುವುದಾಗಿ ಬಹಿರಂಗವಾಗಿಯೇ ಹೇಳಿದ್ದಾರೆ. ಇಡಿ ಐಟಿಯವರಿಗೆ ಬಿಜೆಪಿ ನಾಯಕರು ಕಾಣವುದಿಲ್ಲವೇ..? ಬರೀ ವಿರೋಧ ಪಕ್ಷಗಳು ಮಾತ್ರನಾ ಕಾಣೋದು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ವಾಗ್ದಾಳಿ ನಡೆಸಿದರು.

ಮೈಸೂರಿನಲ್ಲಿ ಇಂದು ಮಾತನಾಡಿದ ಡಿ.ಕೆ ಶಿವಕುಮಾರ್, ಒಂದು ಮತಕ್ಕೆ 6 ಸಾವಿರ ಕೊಡುವುದಾಗಿ ಹೇಳಿದ್ದಾರೆ. ಬಿಜೆಪಿಯವರನ್ನ ಚುನಾವಣೆಯಿಂದ ಬ್ಯಾನ್ ಮಾಡಬೇಕು. ಇಡಿ ಐಡಿ ಅಧಿಕಾರಿಗಳಿಗೆ ಬಿಜೆಪಿ ನಾಯಕರು ಕಾಣವುದಿಲ್ಲವೇ..? ಬರೀ ವಿರೋಧ ಪಕ್ಷಗಳು ಕಾಂಗ್ರೆಸ್ ಪಕ್ಷ ಮಾತ್ರನಾ  ಕಾಣೋದು. ನಮಗೆ ಚಿತ್ರಹಿಂಸೆ ಕೊಡುವುದಕ್ಕೆ ಮಾತ್ರ ಇಡಿ ಐಟಿ ಇದೆ.   ಚಿತ್ರಹಿಂಸೆ ಬಗ್ಗೆ ಮುಂದಿನ ದಿನಗಳಲ್ಲಿ ಪಟ್ಟಿ ಬಿಡುಗಡೆ ಮಾಡುವೆ ಎಂದರು.

ಕಾಂಗ್ರೆಸ್ ಸಿದ್ದಾಂತ ತತ್ವ ಇಡೀ ದೇಶದಲ್ಲಿ ಅಡಗಿದೆ. ಕೆಲವರಿಂದ ಜಾತಿ ಧರ್ಮ ಹೆಸರಲ್ಲಿ ವಿಷಬೀಜ ಬಿತ್ತುವ ಕೆಲಸವಾಗುತ್ತಿದೆ. ಸಂವಿಧಾನ ಬದಲಿಸಲು ಹೊರಟಿದ್ದಾರೆ  ಎಂದು ಕಿಡಿಕಾರಿದರು.

Key words: mysore-DK Shivakumar-bjp-leaders-IT-ED